ದೆಹಲಿಯ ಮದರಸಾದಲ್ಲಿ ಅಗ್ನಿ ಅವಘಡ, 3 ಸಿಲಿಂಡರ್ ಸ್ಫೋಟ, 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಪಾಯದಿಂದ ಪಾರು

ದೆಹಲಿಯ ಜಗತ್​ಪುರಿ ಪ್ರದೇಶದ ನ್ಯೂ ಬ್ರಿಜ್‌ಪುರಿಯಲ್ಲಿರುವ ಮದರಸಾದಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿತ್ತು. ಮೀಟರ್​ ಬೋರ್ಡ್​ನಲ್ಲಿ ಮೊದಲ ಬಾರಿಗೆ ಬೆಂಕಿ ಕಾಣಿಸಿಕೊಂಡಿತ್ತು ಎಂದು ಹೇಳಲಾಗಿದ್ದು, ಬಳಿಕ ಕಟ್ಟಡಕ್ಕೆ ಬೆಂಕಿ ಹೊತ್ತಿ 3 ಸಿಲಿಂಡರ್​ಗಳು ಸ್ಫೋಟಗೊಂಡಿವೆ.

ದೆಹಲಿಯ ಮದರಸಾದಲ್ಲಿ ಅಗ್ನಿ ಅವಘಡ, 3 ಸಿಲಿಂಡರ್ ಸ್ಫೋಟ, 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಪಾಯದಿಂದ ಪಾರು
ಅಗ್ನಿ ಅವಘಡ

Updated on: Jun 05, 2023 | 9:36 AM

ದೆಹಲಿಯ ಜಗತ್​ಪುರಿ ಪ್ರದೇಶದ ನ್ಯೂ ಬ್ರಿಜ್‌ಪುರಿಯಲ್ಲಿರುವ ಮದರಸಾದಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿತ್ತು. ಮೀಟರ್​ ಬೋರ್ಡ್​ನಲ್ಲಿ ಮೊದಲ ಬಾರಿಗೆ ಬೆಂಕಿ ಕಾಣಿಸಿಕೊಂಡಿತ್ತು ಎಂದು ಹೇಳಲಾಗಿದ್ದು, ಬಳಿಕ ಕಟ್ಟಡಕ್ಕೆ ಬೆಂಕಿ ಹೊತ್ತಿ 3 ಸಿಲಿಂಡರ್​ಗಳು ಸ್ಫೋಟಗೊಂಡಿವೆ. 17 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ತಲುಪಿದವು. ಇಕ್ಕಟ್ಟಾದ ರಸ್ತೆಯಿಂದಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಲುಪಲು ಪರದಾಡಬೇಕಾಯಿತು. ಸಿಲಿಂಡರ್ ಸ್ಫೋಟದಿಂದಾಗಿ ಅಗ್ನಿಶಾಮಕ ಸಿಬ್ಬಂದಿಯೂ ಗಾಯಗೊಂಡಿದ್ದಾರೆ. ಈ ಮದರಸಾದಲ್ಲಿ ಹಾಸ್ಟೆಲ್ ಕೂಡ ಇತ್ತು ಎಂದು ಅಗ್ನಿಶಾಮಕ ನಿರ್ದೇಶಕ ಅತುಲ್ ಗಾರ್ಗ್ ತಿಳಿಸಿದ್ದಾರೆ. ಸುಮಾರು 100 ಹುಡುಗಿಯರು ಮತ್ತು ಶಿಕ್ಷಕರು ಇಲ್ಲಿ ಉಪಸ್ಥಿತರಿದ್ದರು. ಎಲ್ಲರನ್ನು ರಕ್ಷಿಸಿ ಅಲ್ಲಿಂದ ಹೊರ ತೆಗೆಯಲಾಯಿತು. ಇಲ್ಲಿಯವರೆಗೆ 3 ಸಿಲಿಂಡರ್ ಸ್ಫೋಟಗಳು ವರದಿಯಾಗಿವೆ.

ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಆ ಪ್ರದೇಶದ ಕಾರ್ಪೊರೇಟರ್ ರಾಜು ಸಾಯಿ ತಿಳಿಸಿದ್ದಾರೆ. ಮದರಸಾದಲ್ಲಿ ಓದುತ್ತಿದ್ದ ಮಕ್ಕಳನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಯಿತು. ಸ್ಥಳೀಯ ನದೀಮ್ ಎಂಬುವರು ತಮ್ಮ ಮನೆ ಮದರಸಾದ ಪಕ್ಕದಲ್ಲಿದೆ ಎಂದು ಹೇಳಿದರು.
ಬೆಂಕಿಯನ್ನು ನಂದಿಸುವಾಗ ಎರಡು ದೊಡ್ಡ ಎಲ್‌ಪಿಜಿ ಸಿಲಿಂಡರ್‌ಗಳು ಸ್ಫೋಟಗೊಂಡಿದ್ದರಿಂದ ಅಗ್ನಿಶಾಮಕ ಸಿಬ್ಬಂದಿಗಳಾದ ಪ್ರದೀಪ್ ಮತ್ತು ರಿಯಾಜುದ್ದೀನ್ ಅವರಿಗೆ ಸುಟ್ಟ ಗಾಯಗಳಾಗಿವೆ.

ಮತ್ತಷ್ಟು ಓದಿ: ಖಾಲಿ ಜಮೀನಿನಲ್ಲಿ ಕಾಣಿಸಿಕೊಂಡ ಅಗ್ನಿ, ಆವಲಹಳ್ಳಿ ಪೊಲೀಸ್​ ಠಾಣೆ ಕೊಠಡಿಗೆ ಆವರಿಸಿದ ಬೆಂಕಿಯ ಕೆನ್ನಾಲಿಗೆ

ಇಬ್ಬರನ್ನೂ ಚಿಕಿತ್ಸೆಗಾಗಿ ಹೆಡಗೇವಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು ಎರಡೂವರೆ ಗಂಟೆಗಳ ಹೋರಾಟದ ಬಳಿಕ ಬೆಂಕಿಯನ್ನು ಹತೋಟಿಗೆ ತರಲಾಯಿತು. ಸದ್ಯ ತಡರಾತ್ರಿವರೆಗೂ ಕೂಲಿಂಗ್ ಕೆಲಸ ನಡೆದಿದೆ.

ಮದರಸಾದ ಮಾಲೀಕ ಮೊಹಮ್ಮದ್ ಇರ್ಫಾನ್ ಮಾತನಾಡಿ, ಅಧ್ಯಯನದ ಹೊರತಾಗಿ, ದೆಹಲಿಯ ವಿವಿಧ ಪ್ರದೇಶಗಳ ಸುಮಾರು 100 ಹೆಣ್ಣುಮಕ್ಕಳು ಸಹ ಇಲ್ಲಿ ವಾಸಿಸುತ್ತಿದ್ದಾರೆ. ಅವರ ಊಟ-ತಿಂಡಿಗಳ ವ್ಯವಸ್ಥೆಯನ್ನೂ ಮದರಸಾದಲ್ಲಿಯೇ ಮಾಡಲಾಗುತ್ತದೆ. ಮದರಸದ ನೆಲ ಮಹಡಿಯಲ್ಲಿ ಅಡುಗೆ ಮನೆ ಇದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us