ಹನುಮಂತ ಆದಿವಾಸಿ ಎಂದ ಕಾಂಗ್ರೆಸ್ ಶಾಸಕ; ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ

|

Updated on: Jun 10, 2023 | 5:08 PM

ರಾಮನನ್ನು ಲಂಕೆಗೆ ಕರೆದೊಯ್ದದ್ದು ಆದಿವಾಸಿಗಳು, ಕೆಲವರು ಕಥೆಗಳಲ್ಲಿ ವಾನರ ಸೇನೆ (ವಾನರ ಸೈನ್ಯ) ಎಂದು ಬರೆದಿದ್ದಾರೆ. ಯಾವುದೇ ಮಂಗಗಳು ಇರಲಿಲ್ಲ, ಅವರು ಆದಿವಾಸಿಗಳು. ಅವರು ಕಾಡಿನಲ್ಲಿ ವಾಸಿಸುತ್ತಿದ್ದರು. ಹನುಮಂತ ಕೂಡ ಆದಿವಾಸಿ. ನಾವು ಅವನ ವಂಶಸ್ಥರು. ಹೆಮ್ಮೆ ಪಡಿ ಎಂದು ಸಿಂಘಾರ್ ಹೇಳಿದ್ದಾರೆ.

ಹನುಮಂತ ಆದಿವಾಸಿ ಎಂದ ಕಾಂಗ್ರೆಸ್ ಶಾಸಕ; ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ
ಉಮಂಗ್ ಸಿಂಘಾರ್
Follow us on

ಭೋಪಾಲ್: ಮಧ್ಯಪ್ರದೇಶದ (Madhya Pradesh )ಮಾಜಿ ಅರಣ್ಯ ಸಚಿವ ಮತ್ತು ಧಾರ್ ಜಿಲ್ಲೆಯ ಗಂಧ್ವಾನಿಯ ಕಾಂಗ್ರೆಸ್ ಶಾಸಕ ಉಮಂಗ್ ಸಿಂಘಾರ್ (Umang Singhar), ಹಿಂದೂ ಮಹಾಕಾವ್ಯ ರಾಮಾಯಣದಲ್ಲಿ ಕೋತಿಗಳೆಂದು ನಿರೂಪಿಸಲ್ಪಟ್ಟವರು ಬುಡಕಟ್ಟು ಜನಾಂಗದವರು. ಹಾಗೆಯೇ ಭಗವಾನ್ ಹನುಮಾನ್  (Lord Hanuman )ಕೂಡಾ ಎಂದು ಹೇಳಿದ್ದಾರೆ. ಧಾರ್ ಜಿಲ್ಲೆಯಲ್ಲಿ ಬುಡಕಟ್ಟು ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ 123 ನೇ ಪುಣ್ಯತಿಥಿಯ ಸಂದರ್ಭದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರವರು.

ರಾಮನನ್ನು ಲಂಕೆಗೆ ಕರೆದೊಯ್ದದ್ದು ಆದಿವಾಸಿಗಳು, ಕೆಲವರು ಕಥೆಗಳಲ್ಲಿ ವಾನರ ಸೇನೆ (ವಾನರ ಸೈನ್ಯ) ಎಂದು ಬರೆದಿದ್ದಾರೆ. ಯಾವುದೇ ಮಂಗಗಳು ಇರಲಿಲ್ಲ, ಅವರು ಆದಿವಾಸಿಗಳು. ಅವರು ಕಾಡಿನಲ್ಲಿ ವಾಸಿಸುತ್ತಿದ್ದರು. ಹನುಮಂತ ಕೂಡ ಆದಿವಾಸಿ. ನಾವು ಅವನ ವಂಶಸ್ಥರು. ಹೆಮ್ಮೆ ಪಡಿ ಎಂದು ಸಿಂಘಾರ್ ಹೇಳಿದ್ದಾರೆ.

ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಮಧ್ಯಪ್ರದೇಶ ಬಿಜೆಪಿ ವಕ್ತಾರ ಹಿತೇಶ್ ಅವರು ಹನುಮಾನ್ ಜಿಯನ್ನು ದೇವರೆಂದು ಪರಿಗಣಿಸುವುದಿಲ್ಲ. ಅವರು ಹನುಮಾನ್ ಜಿಯನ್ನು ಹಿಂದೂಗಳು ಪೂಜಿಸುತ್ತಾರೆ ಎಂದು ಪರಿಗಣಿಸುವುದಿಲ್ಲ. ಅವರು ಹನುಮಾನ್ ಜಿಯನ್ನು ಅವಮಾನಿಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.


ಅವರು ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಮಾಜಿ ಕಾಂಗ್ರೆಸ್ ಕ್ಯಾಬಿನೆಟ್ ಸಚಿವರಲ್ಲವೇ ಪೊಲೀಸರ ಬಂಧನದಿಂದ ಓಡಿಹೋಗುವುದೇ? ಇದು ಹನುಮಂತನ ಬಗ್ಗೆ ಕಾಂಗ್ರೆಸ್ಸಿಗಿರುವ ಕಲ್ಪನೆಯೇ? ಮತಾಂತರ ಮಾಡುವ ನಿಮ್ಮ ಆಜ್ಞೆಯ ಮೇರೆಗೆ ಕಾಂಗ್ರೆಸ್ ಕ್ಯಾಥೋಲಿಕ್ ಪಾದ್ರಿಗಳ ಭಾಷೆಯನ್ನು ಮಾತನಾಡುತ್ತಿದೆಯೇ ಎಂದು ಟ್ವೀಟ್ ಮಾಡಿದ ಬಿಜೆಪಿ ನಾಯಕ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಟ್ಯಾಗ್ ಮಾಡಿದ್ದಾರೆ.

ಇದನ್ನೂ ಓದಿ: Hanuman Chalisa: ಹನುಮಾನ್ ಚಾಲೀಸಾದ ಈ 5 ಮಂತ್ರ ಬಹಳ ಶಕ್ತಿಯುತ, ಇದನ್ನು ಪ್ರತಿದಿನ ಪಠಿಸಿ

ಕಳೆದ ತಿಂಗಳುಮತ್ತೊಬ್ಬ ಬುಡಕಟ್ಟು ಕಾಂಗ್ರೆಸ್ ಶಾಸಕ ಅರ್ಜುನ್ ಸಿಂಗ್ ಕಕೋಡಿಯಾ ಅವರು ಸಿಯೋನಿ ಜಿಲ್ಲೆಯಲ್ಲಿ ಕಮಲ್ ನಾಥ್ ಮತ್ತು ಇತರ ನಾಯಕರ ಸಮ್ಮುಖದಲ್ಲಿ ದೊಡ್ಡ ಸಾರ್ವಜನಿಕ ಸಭೆ ಮತ್ತು ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಭಗವಾನ್ ಹನುಮಾನ್ ಆದಿವಾಸಿ ಎಂದಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ