ಗಂಡ ಬೇಡ ಆತನ ಸ್ನೇಹಿತನೇ ಬೇಕೆಂದು ಪಟ್ಟು ಹಿಡಿದ ಮಹಿಳೆ, ಮನೆಯವರೆಲ್ಲರೂ ಆತ್ಮಹತ್ಯೆಗೆ ಶರಣು

ನಿನಗಿನ್ನೂ ಬದುಕಿದೆ ಆತನನ್ನು ಬಿಟ್ಟಿಬಿಡು, ಅದನ್ನು ಕೆಟ್ಟ ಕನಸೆಂದು ಮರೆತು ಮತ್ತೆ ನಿನ್ನನ್ನು ಸ್ವೀಕರಿಸುತ್ತೇನೆ ಎಂದು ಗಂಡ ಎಷ್ಟೇ ಬುದ್ಧಿವಾದ ಹೇಳಿದರೂ ಕಿವಿಗೆ ಹಾಕಿಕೊಳ್ಳದೆ ಮಹಿಳೆ ತನ್ನ ಛಾಳಿ ಮುಂದುವರೆಸಿದ್ದಳು. ಗಂಡ ಬೇಡ ಆತನ ಸ್ನೇಹಿತನೇ ಬೇಕು ಎಂದು ಪಟ್ಟು ಹಿಡಿದಿದ್ದಳು. ಕೊನೆಲೆ ಈ ನೋವು ಸಹಿಸಲಾಗದೆ ಕುಟುಂಬದ ಎಲ್ಲಾ ಸದಸ್ಯರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.

ಗಂಡ ಬೇಡ ಆತನ ಸ್ನೇಹಿತನೇ ಬೇಕೆಂದು ಪಟ್ಟು ಹಿಡಿದ ಮಹಿಳೆ, ಮನೆಯವರೆಲ್ಲರೂ ಆತ್ಮಹತ್ಯೆಗೆ ಶರಣು
ಮಹಿಳೆ

Updated on: Aug 04, 2025 | 8:25 AM

ಭೋಪಾಲ್, ಆಗಸ್ಟ್​ 04:ನಿನಗಿನ್ನೂ ಬದುಕಿದೆ ಆತನನ್ನು ಬಿಟ್ಟಿಬಿಡು, ಅದನ್ನು ಕೆಟ್ಟ ಕನಸೆಂದು ಮರೆತು ಮತ್ತೆ ನಿನ್ನನ್ನು ಸ್ವೀಕರಿಸುತ್ತೇನೆ ಎಂದು ಗಂಡ(Husband) ಎಷ್ಟೇ ಬುದ್ಧಿವಾದ ಹೇಳಿದರೂ ಕಿವಿಗೆ ಹಾಕಿಕೊಳ್ಳದೆ ಮಹಿಳೆ ತನ್ನ ಛಾಳಿ ಮುಂದುವರೆಸಿದ್ದಳು. ಗಂಡ ಬೇಡ ಆತನ ಸ್ನೇಹಿತನೇ ಬೇಕು ಎಂದು ಪಟ್ಟು ಹಿಡಿದಿದ್ದಳು. ಕೊನೆಗೆ ಈ ನೋವು ಸಹಿಸಲಾಗದೆ ಕುಟುಂಬದ ಎಲ್ಲಾ ಸದಸ್ಯರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ. ಜುಲೈ 25ರ ರಾತ್ರಿ ಮನೋಹರ್ ಲೋಧಿ (45), ಅವರ ತಾಯಿ ಫೂಲ್ರಾಣಿ (70), ಮಗಳು ಶಿವಾನಿ (18) ಮತ್ತು ಅವರ 16 ವರ್ಷದ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತನಿಖೆಯ ಸಮಯದಲ್ಲಿ ಮನೋಹರ್ ಲೋಧಿಯ ಪತ್ನಿ ದ್ರೌಪದಿ, ಮನೋಹರ್ ಅವರ ಬಾಲ್ಯದ ಸ್ನೇಹಿತನೂ ಆಗಿದ್ದ ಸುರೇಂದ್ರ ಎಂಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಳೆ ಎಂಬುದು ತಿಳಿದುಬಂದಿದೆ.

ಮತ್ತಷ್ಟು ಓದಿ: ಪ್ರಿಯಕರನೊಂದಿಗೆ ಸೇರಿ ಹಬ್ಬದ ದಿನವೇ ಪತಿಗೆ ಮುಹೂರ್ತ ಇಟ್ಟ ಪತ್ನಿ: ಗಂಡನನ್ನು ಕೊಂದು ನಾಗರಪಂಚಮಿ ಆಚರಣೆ

ಸುರೇಂದ್ರ ಒಂದು ದಿನ ದ್ರೌಪದಿ ಜತೆ ಇರುವಾಗ ದ್ರೌಪದಿ ಮಗಳು ಅದನ್ನು ನೋಡಿ ತನ್ನ ತಂದೆಗೆ ಹೇಳಿದ್ದಳು. ಆಗ ವಿಷಯ ಬಹಿರಂಗಗೊಂಡಿತ್ತು.ಕುಟುಂಬದವರು ದ್ರೌಪದಿಯೊಂದಿಗೆ ಈ ಕುರಿತು ಮಾತನಾಡಿದ್ದರು. ಆತನನ್ನು ಬಿಟ್ಟುಬಿಡು ಎಂದು ಬುದ್ಧಿವಾದ ಹೇಳಿದ್ದರು, ಆದರೆ ಸುರೇಂದ್ರ ಇಲ್ಲದೆ ತಾನು ಬದುಕಲು ಸಾಧ್ಯವಿಲ್ಲ ಎಂದು ಆಕೆ ಹೇಳಿದ್ದಾಳೆ.

ಒಂದೊಮ್ಮೆ ಆಕೆಯ ಮೇಲೆ ಒತ್ತಡ ಹೇರುವುದನ್ನು ಮುಂದುವರೆಸಿದರೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದೀರಾ ಎಂದು ಪ್ರಕರಣ ದಾಖಲಿಸುವುದಾಗಿ ಆಕೆ ಎಚ್ಚರಿಕೆ ನೀಡಿದ್ದಳು.ಮನೋಹರ್ ಕೂಡ ಸುರೇಂದ್ರ ಬಳಿ ಹೋಗಿ ಆಕೆಯನ್ನು ಬಿಟ್ಟುಬಿಡು ಎಂದು ಪರಿಪರಿಯಾಗಿ ಕೇಳಿಕೊಂಡಿದ್ದರು. ಆದರೂ ಯಾವುದೇ ಪ್ರಯೋಜನವಾಗಲಿಲ್ಲ.

ಮನೆಯಲ್ಲಿ ಪದೇ ಪದೆ ಈ ವಿಚಾರವಾಗಿ ಗಲಾಟೆಗಳು ನಡೆಯುತ್ತಿದ್ದವು. ಕೊನೆಗೆ ತಾವೇ ಹೋಗಿಬಿಡೋಣ ಎನ್ನುವ ನಿರ್ಧಾರಕ್ಕೆ ಕುಟುಂಬದವರು ಬಂದಿದ್ದು, ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ತನಿಖೆಯ ನಂತರ, ಪೊಲೀಸರು ಮನೋಹರ್ ಅವರ ಪತ್ನಿ ದ್ರೌಪದಿ ಮತ್ತು ಆಕೆಯ ಪ್ರಿಯಕರ ಸುರೇಂದ್ರ ಅವರನ್ನು ಜೈಲಿಗೆ ಕಳುಹಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us