ಭೋಪಾಲ್: ಮಧ್ಯಪ್ರದೇಶದ (Madhya Pradesh) ಅರಣ್ಯ ಸಚಿವ ವಿಜಯ್ ಶಾ (Vijay Shah) ಅವರು ಸೋಮವಾರ ಖಾಂಡ್ವಾ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ವ್ಯಕ್ತಿಯೊಬ್ಬರು ಪ್ರಶ್ನೆ ಕೇಳಿದಾಗ ರೊಚ್ಚಿಗೆದ್ದಿರುವ ಘಟನೆ ನಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಶಾ ಅವರು ಸಭಿಕರಲ್ಲಿರುವ ಒಬ್ಬ ವ್ಯಕ್ತಿಯಲ್ಲಿ ಈತ ಕುಡಿದು ಕೂಟವನ್ನು ಅಡ್ಡಿಪಡಿಸಲು ಬಂದಿದ್ದಾನೆ. ಆತನನ್ನು ಕಾಂಗ್ರೆಸ್ ಪಕ್ಷ ಕಳುಹಿಸಿದೆ ಎಂದು ಆರೋಪಿಸಿದ್ದಾರೆ.
“ನಾವು ಮಧ್ಯಪ್ರದೇಶದಲ್ಲಿ ಅಭಿವೃದ್ಧಿಯ ಯುಗವನ್ನು ಪ್ರಾರಂಭಿಸುತ್ತಿದ್ದೇವೆ. ಆದರೆ ಇಲ್ಲಿ ಏನಾದರೂ ತೊಂದರೆ ಮಾಡಲು ಬಂದರೆ ಅಂಥವರನ್ನು ಲಾಕ್ ಮಾಡುತ್ತೇವೆ. ಇದು ಸರ್ಕಾರಿ ಸಭೆ. ಇದಕ್ಕೆ ಅಡ್ಡಿಪಡಿಸುವವರ ಸೊಂಟವನ್ನು ಪೊಲೀಸರು ಮುರಿಯುತ್ತಾರೆ ಎಂದು ಶಾ ಎಚ್ಚರಿಸಿದ್ದಾರೆ.
ಅಂಗನವಾಡಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಪತ್ನಿಗೆ ಕಳೆದ ಆರು ತಿಂಗಳಿಂದ ಸಂಬಳ ಬಂದಿಲ್ಲ ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ. ಈ ವಿಷಯವನ್ನು ಶಾ ಅವರಲ್ಲಿ ಹೇಳಿದಾಗ ನೀನು ಕುಡಿದು ಬಂದಿದ್ದಿ ಎಂದು ಹೇಳಿದ್ದು, ಕಾರ್ಯಕ್ರಮವನ್ನು ಅಡ್ಡಿಪಡಿಸಲು ಕಾಂಗ್ರೆಸ್ ಈತನನ್ನು ಕಳುಹಿಸಿದ ಎಂದು ಆರೋಪಿಸಿದ್ದಾರೆ.
Madhya Pradesh Forest Minister Vijay Shah blasts youth during Vikas Yatra
pic.twitter.com/mi9jsRLeTl— Ahmed Khabeer احمد خبیر (@AhmedKhabeer_) February 15, 2023
ಸ್ಥಳೀಯ ಕಾಂಗ್ರೆಸ್ ನಾಯಕರ ಮೇಲೆ ಹರಿಹಾಯ್ದ ಶಾ, “ನನಗೆ ಗೊತ್ತು, ಅವರು ಮದ್ಯ ಸೇವಿಸಿದ ನಂತರ ಜನರನ್ನು ಈ ರೀತಿ ವರ್ತಿಸುವಂತೆ ಮಾಡುತ್ತಾರೆ” ಎಂದು ಹೇಳಿದ್ದಾರೆ.
ಆ ಪ್ರದೇಶದಲ್ಲಿ “ಮದ್ಯ ಮಾರಾಟ ಮಾಡುವ” ವ್ಯಕ್ತಿಗಳನ್ನು ಹಿಡಿಯಿರಿ ಎಂದು ಸಭೆಯಲ್ಲಿ ನೆರೆದಿದ್ದ ಪೊಲೀಸರಿಗೆ ಶಾ ನಿರ್ದೇಶನ ನೀಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:45 pm, Wed, 15 February 23