ರಾಗಿ ಬಳಕೆ ಬಗ್ಗೆ ಝೆರೋಧಾ ಸಿಇಒ ನಿತಿನ್ ಕಾಮತ್ ಟ್ವೀಟ್ಗೆ ಮೋದಿ ಮೆಚ್ಚುಗೆ
ವಿಶ್ವಸಂಸ್ಥೆಯು 2023ನ್ನು ಅಂತಾರಾಷ್ಟ್ರೀಯ ರಾಗಿ ವರ್ಷ ಎಂದು ಘೋಷಿಸಿದೆ. ಜಗತ್ತು ರಾಗಿಯ ಆರೋಗ್ಯ ಮತ್ತು ಪರಿಸರ ಪ್ರಯೋಜನಗಳನ್ನು ಕಂಡುಹಿಡಿದಂತೆ, ಭಾರತವು ಜಾಗತಿಕ ರಾಗಿ ಹಬ್ ಆಗಬಹುದು ಮತ್ತು ಸ್ಥಳೀಯವಾಗಿ ಹಸಿರು ಉದ್ಯೋಗಗಳನ್ನು ಸೃಷ್ಟಿಸಬಹುದು ಎಂದ ನಿತಿನ್ ಕಾಮತ್
ದಿನನಿತ್ಯದ ಆಹಾರದಲ್ಲಿ ರಾಗಿ ಬಳಕೆಯನ್ನು ಹೆಚ್ಚಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಹೇಳುತ್ತಿದ್ದಾರೆ. ಇತ್ತ ಝೆರೋಧಾ (Zerodha) ಸಹ-ಸಂಸ್ಥಾಪಕ ಮತ್ತು ಸಿಇಒ ನಿತಿನ್ ಕಾಮತ್ (Nithin Kamath)ಅವರು ಆಹಾರವನ್ನು ಆರೋಗ್ಯಕರ ಮತ್ತು ರುಚಿಯಾಗಿಸಲು ಮನೆಯಲ್ಲಿ ಗೋಧಿ ಹಿಟ್ಟು ಮತ್ತು ದೋಸೆ ಹಿಟ್ಟಿಗೆ ರಾಗಿಯನ್ನು ಸೇರಿಸಲಾಗುತ್ತದೆ ಎಂದಿದ್ದಾರೆ. ಪ್ರತಿಯೊಬ್ಬರೂ ತಮ್ಮ ಆಹಾರದಲ್ಲಿ ರಾಗಿಯನ್ನು ಏಕೆ ಬಳಸಬೇಕು ಮತ್ತು ಅದರ ಬಗ್ಗೆಯೂ ಮಾತನಾಡಬೇಕು ಎಂಬ ಕಾರಣಗಳನ್ನು ಕಾಮತ್ ಟ್ವೀಟ್ ಮಾಡಿದ್ದಾರೆ. ನಮ್ಮಲ್ಲಿ ಹೆಚ್ಚಿನವರಿಗೆ ರಾಗಿ ಗ್ರಹಕ್ಕೆ ಒಳ್ಳೆಯದು ಎಂದು ತಿಳಿದಿಲ್ಲ ಏಕೆಂದರೆ ಅವು ಕಡಿಮೆ ನೀರು ಮತ್ತು ಕೀಟನಾಶಕಗಳನ್ನು ಬಳಸುತ್ತವೆ.
ವಿಶ್ವಸಂಸ್ಥೆಯು 2023ನ್ನು ಅಂತಾರಾಷ್ಟ್ರೀಯ ರಾಗಿ ವರ್ಷ ಎಂದು ಘೋಷಿಸಿದೆ. ಜಗತ್ತು ರಾಗಿಯ ಆರೋಗ್ಯ ಮತ್ತು ಪರಿಸರ ಪ್ರಯೋಜನಗಳನ್ನು ಕಂಡುಹಿಡಿದಂತೆ, ಭಾರತವು ಜಾಗತಿಕ ರಾಗಿ ಹಬ್ ಆಗಬಹುದು ಮತ್ತು ಸ್ಥಳೀಯವಾಗಿ ಹಸಿರು ಉದ್ಯೋಗಗಳನ್ನು ಸೃಷ್ಟಿಸಬಹುದು. ಬ್ರಿಟಿಷರ ತನಕ ಭಾರತದಲ್ಲಿ ರಾಗಿ ಜನಪ್ರಿಯವಾಗಿತ್ತು” ಎಂದು ನಿತಿನ್ ಕಾಮತ್ ಟ್ವೀಟ್ ಮಾಡಿದ್ದಾರೆ.
We add millet (ragi) to wheat flour and dosa batter at home. It’s healthier & tastier. Most of us don’t know that millets are also good for the planet because they consume much less water & pesticides. The reason why everyone should introduce millet & talk about it too. 1/5
— Nithin Kamath (@Nithin0dha) February 14, 2023
Zerodhaದ ಎನ್ಜಿಒ ರೈನ್‌ಮ್ಯಾಟರ್ ಫೌಂಡೇಶನ್ ಮಾಡಿದ ರಾಗಿಗಳ ಪರಿಸರ ಪ್ರಯೋಜನಗಳ ಕುರಿತು ಸಂಶೋಧನಾ ಪ್ರಬಂಧವನ್ನು ಅವರು ಹಂಚಿಕೊಂಡಿದ್ದಾರೆ. ಸ್ಥಳೀಯವಾಗಿ ಉತ್ಪಾದಿಸುವುದರಿಂದ ರಾಗಿಗಳು ಹೆಚ್ಚುವರಿ ಪ್ರಯೋಜನವನ್ನು ಹೊಂದಿವೆ.ಹೀಗಾಗಿ ಆಹಾರ ಸಾಗಣೆಗೆ ಸಂಬಂಧಿಸಿದ ಇಂಗಾಲದ ಹೊರಸೂಸುವಿಕೆಯನ್ನು ತಡೆಯಬಹುದು. “ಸರ್ಕಾರಿ ಕಾರ್ಯಕ್ರಮಗಳು ಮತ್ತು ಮಧ್ಯಾಹ್ನದ ಊಟ ಉಪಕ್ರಮಗಳ ಮೂಲಕ ರಾಗಿಗಳನ್ನು ವಿತರಿಸಿದರೆ, ಭಾರತೀಯರು ಹೆಚ್ಚಿನ ಪೌಷ್ಟಿಕಾಂಶವನ್ನು ಪಡೆಯುತ್ತಾರೆ ಮತ್ತು ಕಡಿಮೆ ಮಧುಮೇಹ ಅಪಾಯವನ್ನು ಹೊಂದಿರುತ್ತಾರೆ” ಎಂದು ಅವರು ಹೇಳಿದರು.
ಈ ವಾರದ ಆರಂಭದಲ್ಲಿ ಕಾಮತ್ ಅವರನ್ನು ಭೇಟಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಈ ಟ್ವೀಟ್ ನ್ನು ರಿಟ್ವೀಟ್ ಮಾಡಿದ್ದು ಇದು ಓದುವಂತದ್ದು ಎಂದಿದ್ದಾರೆ. ಈ ತಿಂಗಳ ಆರಂಭದಲ್ಲಿ 2023 ರ ಬಜೆಟ್ ಭಾಷಣದಲ್ಲಿ, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ರಾಗಿಯನ್ನು”ಶ್ರೀ ಅನ್ನ” ಎಂದು ಕರೆದರು, ಅಂದರೆ ಎಲ್ಲಾ ಧಾನ್ಯಗಳ ತಾಯಿ. ಎಲ್ಲಾ ರೀತಿಯ ರಾಗಿಗೆ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ಮಾಡಲು ಬಯಸುವುದಾಗಿ ಅವರು ಘೋಷಿಸಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ