ಮಧ್ಯ ಪ್ರದೇಶ: ತಿಂಗಳ ಸಂಬಳ 30 ಸಾವಿರ; ಲೋಕಾಯುಕ್ತ ದಾಳಿ ವೇಳೆ ಪತ್ತೆಯಾಗಿದ್ದು ₹7 ಕೋಟಿ ಮೌಲ್ಯದ ಆಸ್ತಿ

|

Updated on: May 12, 2023 | 5:55 PM

ಮೀನಾ ಅವರನ್ನು ಗುರಿಯಾಗಿಸಿಕೊಂಡು ಲೋಕಾಯುಕ್ತ ತಂಡ ಭೋಪಾಲ್, ವಿದಿಶಾ ಮತ್ತು ರೈಸನ್‌ನಲ್ಲಿ ದಾಳಿ ನಡೆಸಿತು. 2020 ರಲ್ಲಿ ಆಕೆಯ ವಿರುದ್ಧ ಅಕ್ರಮ ಆಸ್ತಿಗಳ ಬಗ್ಗೆ ದೂರು ದಾಖಲಿಸಿದ ನಂತರ ಈ ದಾಳಿ ನಡೆದಿದೆ.

ಮಧ್ಯ ಪ್ರದೇಶ: ತಿಂಗಳ ಸಂಬಳ 30 ಸಾವಿರ; ಲೋಕಾಯುಕ್ತ ದಾಳಿ ವೇಳೆ ಪತ್ತೆಯಾಗಿದ್ದು ₹7 ಕೋಟಿ ಮೌಲ್ಯದ ಆಸ್ತಿ
ಹೇಮಾ ಮೀನಾ
Follow us on

ರಾಜ್ಯ ಪೊಲೀಸ್ ವಸತಿ ನಿಗಮದಲ್ಲಿ ಸಹಾಯಕ ಇಂಜಿನಿಯರ್ ಉಸ್ತುವಾರಿ (ಗುತ್ತಿಗೆ) ಆಗಿರುವ ಹೇಮಾ ಮೀನಾ ಅವರು ಮಾಸಿಕ ಆದಾಯದ ಹೊರತಾಗಿಯೂ ತಮ್ಮ ಆದಾಯಕ್ಕಿಂತ 332 ಪರ್ಸೆಂಟ್ ಮೌಲ್ಯದ ಆಸ್ತಿ ಗಳಿಸಿರುವುದು ಮಧ್ಯಪ್ರದೇಶ (Madhya Pradesh) ಲೋಕಾಯುಕ್ತರ ತಂಡಕ್ಕೆ ಅಚ್ಚರಿ ಮೂಡಿಸಿದೆ. ಹೇಮಾ ಮೀನಾ (Hema Meena) ಅವರ ಸಂಬಳ ₹ 30,000 ಲೈವ್ ಹಿಂದೂಸ್ತಾನ್ ವರದಿ ಮಾಡಿದೆ. ಗುರುವಾರ, ಲೋಕಾಯುಕ್ತರು ಮೀನಾ ಅವರ ನಿವಾಸ, ತೋಟದ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ್ದು, ಅಂದಾಜು ₹ 7 ಕೋಟಿ ಮೌಲ್ಯದ ಆಸ್ತಿಯನ್ನು ಗುರುತಿಸಿದ್ದಾರೆ. ಹೆಚ್ಚುವರಿಯಾಗಿ, ಲೋಕಾಯುಕ್ತ ತಂಡವು ಸಬ್ ಇಂಜಿನಿಯರ್ ಮನೆಯಲ್ಲಿ ₹ 30 ಲಕ್ಷ ಮೌಲ್ಯದ ಟಿವಿಯನ್ನು ಪತ್ತೆ ಮಾಡಿದೆ ಎಂದು ವರದಿಗಳು ಸೂಚಿಸುತ್ತವೆ. ಆಕೆಯ ಬಂಗಲೆಯಲ್ಲಿ ಐಷಾರಾಮಿ ಕಾರುಗಳು ಸೇರಿದಂತೆ 20 ಕಾರುಗಳೂ ಇದ್ದವು.

ಇಷ್ಟು ಮಾತ್ರವಲ್ಲದೆ ಮೀನಾ ಅವರ 13 ವರ್ಷಗಳ ಸೇವಾವಧಿಯಲ್ಲಿ 70ರಿಂದ 80 ಹಸುಗಳಿರುವ ಐಷಾರಾಮಿ ಫಾರ್ಮ್ ಹೌಸ್ ಇರುವುದು ಪತ್ತೆಯಾಗಿದೆ. ಮೀನಾ ಅವರನ್ನು ಗುರಿಯಾಗಿಸಿಕೊಂಡು ಲೋಕಾಯುಕ್ತ ತಂಡ ಭೋಪಾಲ್, ವಿದಿಶಾ ಮತ್ತು ರೈಸನ್‌ನಲ್ಲಿ ದಾಳಿ ನಡೆಸಿತು. 2020 ರಲ್ಲಿ ಆಕೆಯ ವಿರುದ್ಧ ಅಕ್ರಮ ಆಸ್ತಿಗಳ ಬಗ್ಗೆ ದೂರು ದಾಖಲಿಸಿದ ನಂತರ ಈ ದಾಳಿ ನಡೆದಿದೆ.

ಇದಲ್ಲದೆ, ಅವರು ತಮ್ಮ ನಿವಾಸದಲ್ಲಿ ಸಿಬ್ಬಂದಿಯೊಂದಿಗೆ ಸಂವಹನ ನಡೆಸಲು ವಾಕಿ-ಟಾಕಿಯನ್ನು ಬಳಸುತ್ತಾರೆ ಎಂದು ವರದಿಯಾಗಿದೆ. ಅಲ್ಲಿಯೂ ಜಾಮರ್ ಅನ್ನು ಸ್ಥಾಪಿಸಲಾಗಿದೆ. ಆಕೆಯ ತಂದೆ ರಾಮಸ್ವರೂಪ್ ಮೀನಾ ಎಂಬ ಹೆಸರಿನಲ್ಲಿ ನೋಂದಣಿ ಮಾಡಿಸಿಕೊಂಡ ಆಕೆಯ ಮನೆ ₹1 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ: ತಪ್ಪಿತಸ್ಥರನಾಗಿದ್ದರೆ ನನ್ನನ್ನು ಗಲ್ಲಿಗೇರಿಸಿ: ಬಿಹಾರದ ಮಾಜಿ ಸಂಸದ ಆನಂದ್ ಮೋಹನ್ ಸಿಂಗ್

ಬಿಲ್ಖಿರಿಯಾ ಗ್ರಾಮದಲ್ಲಿ ಮೀನಾ 20,000 ಚದರ ಅಡಿ ಭೂಮಿಯನ್ನು ಖರೀದಿಸಿದ್ದರು. ಮೀನಾ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಗುರುವಾರ ಲೋಕಾಯುಕ್ತ ವಿಶೇಷ ಪೊಲೀಸ್ ಸಂಸ್ಥೆಯ (ಎಸ್‌ಪಿಇ) ತಂಡವೊಂದು ಸೋಲಾರ್ ಪ್ಯಾನೆಲ್‌ಗಳನ್ನು ರಿಪೇರಿ ಮಾಡುವ ನೆಪದಲ್ಲಿ ಮೀನಾ ಅವರ ಬಂಗಲೆಗೆ ಪ್ರವೇಶಿಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:31 pm, Fri, 12 May 23