ಇಲ್ಲಿ ಪೋಷಕರೇ ಹೆಣ್ಣು ಮಕ್ಕಳನ್ನು ಹರಾಜಿನಲ್ಲಿ ಮಾರಾಟ ಮಾಡ್ತಾರಂತೆ

ಸಂಪ್ರದಾಯದ ಹೆಸರಿನಲ್ಲಿ ಪೋಷಕರೇ ಹೆಣ್ಣುಮಕ್ಕಳನ್ನು ಮಾರಾಟ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮಧ್ಯಪ್ರದೇಶದ ರಾಜ್​ಗಢ್​ನಲ್ಲಿ ಹೆಣ್ಣುಮಕ್ಕಳನ್ನು ಅವರ ಕುಟುಂಬದವರೇ ಹರಾಜು ಹಾಕುತ್ತಾರೆ ಎನ್ನುವ ವಿಚಾರ ಆತಂಕವನ್ನುಂಟು ಮಾಡುತ್ತದೆ.

ಇಲ್ಲಿ ಪೋಷಕರೇ ಹೆಣ್ಣು ಮಕ್ಕಳನ್ನು ಹರಾಜಿನಲ್ಲಿ ಮಾರಾಟ ಮಾಡ್ತಾರಂತೆ
ಯುವತಿ
Image Credit source: Shutterstock

Updated on: Sep 18, 2024 | 10:59 AM

ಮಧ್ಯಪ್ರದೇಶದಲ್ಲಿ ಪದ್ಧತಿ ಹೆಸರಿನಲ್ಲಿ ಹೆಣ್ಣುಮಕ್ಕಳನ್ನು ಹರಾಜಿನಲ್ಲಿ ಮಾರಾಟ ಮಾಡುವ ಸಂಪ್ರದಾಯ ಇನ್ನೂ ಕೂಡ ಚಾಲ್ತಿಯಲ್ಲಿದೆ. ಯುವತಿಯರನ್ನು ಹರಾಜಿನಲ್ಲಿ ಮಾರಾಟ ಮಾಡಲಾಗುತ್ತದೆ, ಜೀ ನ್ಯೂಸ್​ ಈ ಕುರಿತು ವರದಿ ಮಾಡಿದೆ.
ಮಧ್ಯಪ್ರದೇಶದ ರಾಜ್​ಗಢ್​ನಲ್ಲಿ ಹೆಣ್ಣುಮಕ್ಕಳನ್ನು ಅವರ ಕುಟುಂಬದವರೇ ಹರಾಜು ಹಾಕುತ್ತಾರೆ ಎನ್ನುವ ವಿಚಾರ ಆತಂಕವನ್ನುಂಟು ಮಾಡುತ್ತದೆ.

ಪೊಲೀಸ್​ ಅಧಿಕಾರಿಗಳು ಸೇರಿದಂತೆ ಹಲವರಿಗೆ ಈ ವಿಚಾರ ತಿಳಿದಿದ್ದರೂ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ. ಜಗಡಾ ನಾಥರಾ ಎನ್ನುವ ಸಂಪ್ರದಾಯದಂತೆ ಮಕ್ಕಳನ್ನು ಹರಾಜು ಹಾಕಲಾಗುತ್ತದೆ.

ಮಗಳಿಗೆ ಬಿಡ್ಡಿಂಗ್ ನಡೆದು ಅತಿ ಹೆಚ್ಚು ಬಿಡ್ ಮಾಡಿದವರಿಗೆ ಮಗಳನ್ನು ಒಪ್ಪಿಸಲಾಗುತ್ತದೆ.ಈ ಗ್ರಾಮದಲ್ಲಿ ಮದುವೆಯಾದ ಅಥವಾ ಮದುವೆಯಾಗಲಿರುವ ಎಷ್ಟೋ ಹೆಣ್ಣು ಮಕ್ಕಳಿದ್ದಾರೆ.

ಮತ್ತಷ್ಟು ಓದಿ: Viral: ಗಂಡ ಪ್ರತಿದಿನ ಸ್ನಾನ ಮಾಡೊಲ್ಲ, ಮದುವೆಯಾದ 40 ದಿನಕ್ಕೆ ಡಿವೋರ್ಸ್‌ ಕೇಳಿದ ಮಹಿಳೆ

ಈ ಪದ್ಧತಿಯಲ್ಲಿ ಮೊದಲು ಮಹಿಳೆ ಬಾಲ್ಯವಿವಾಹಕ್ಕೆ ಒಳಗಾಗುತ್ತಾಳೆ. ನಂತರ ಬಾಲಕಿಯನ್ನು ದೈಹಿಕವಾಗಿ ನಿಂದಿಸಿ ಹಲವು ಮಂದಿ ಬಿಟ್ಟು ಹೋಗಿದ್ದಾರೆ, ಆದರೆ ಈ ಹೊರತಾಗಿಯೂ ಪತ್ನಿ ಆತನಿಗೆ ವಿಚ್ಛೇದನ ನೀಡುವುದಿಲ್ಲ.

ವಿಚ್ಛೇದನಕ್ಕಾಗಿ, ಹುಡುಗಿಯ ತಂದೆ ಆಕೆಯ ಅತ್ತೆಗೆ ದೊಡ್ಡ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಹಣಕ್ಕಾಗಿ, ಹುಡುಗಿಯ ತಂದೆ ಮಗಳನ್ನು ಹರಾಜು ಹಾಕುತ್ತಾನೆ.

ರಾಜ್‌ಗಢದಲ್ಲಿ ವ್ಯಕ್ತಿಯೊಬ್ಬ ತನ್ನ ಅಪ್ರಾಪ್ತ ಮಗನ ಪತ್ನಿಯನ್ನು ಮಾರಾಟ ಮಾಡಲು ಸಿದ್ಧತೆ ನಡೆಸಿ ಸಿಕ್ಕಿಬಿದ್ದಿದ್ದ.
ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಮಧ್ಯಪ್ರದೇಶ ಸರ್ಕಾರಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us