Viral: ಗಂಡ ಪ್ರತಿದಿನ ಸ್ನಾನ ಮಾಡೊಲ್ಲ, ಮದುವೆಯಾದ 40 ದಿನಕ್ಕೆ ಡಿವೋರ್ಸ್‌ ಕೇಳಿದ ಮಹಿಳೆ

ಹೆಂಡತಿ ದಪ್ಪಗಿದ್ದಾಳೆ, ಗಂಡ ತನ್ನಿಷ್ಟದ ತಿಂಡಿ ತರಲಿಲ್ಲ, ಫ್ರೆಂಚ್‌ ಫ್ರೈಸ್‌ ತಿನ್ನಲು ಬಿಡುತ್ತಿಲ್ಲ ಹೀಗೆ ಚಿತ್ರ ವಿಚಿತ್ರ ಕಾರಣಗಳಿಗೆ ವಿಚ್ಛೇದನ ನೀಡಿದಂತಹ ಸುದ್ದಿಗಳ ಬಗ್ಗೆ ಆಗಾಗ್ಗೆ ಕೇಳುತ್ತಿರುತ್ತೇವೆ. ಇದೀಗ ಇಂತಹದ್ದೇ ಸುದ್ದಿಯೊಂದು ಭಾರೀ ವೈರಲ್‌ ಆಗುತ್ತಿದ್ದು, ಮಹಿಳೆಯೊಬ್ಬರು ತನ್ನ ಪತಿರಾಯ ದಿನಾಲೂ ಸ್ನಾನ ಮಾಡೊಲ್ಲ ಎಂಬ ವಿಚಾರ ತಿಳಿದು ಆತನ ಸಹವಾಸವೇ ಬೇಡವೆಂದು ಮದುವೆಯಾದ 40 ದಿನಕ್ಕೆ ಗಂಡನಿಂದ ಡಿವೋರ್ಸ್‌ ಕೇಳಿದ್ದಾರೆ.

Viral: ಗಂಡ ಪ್ರತಿದಿನ ಸ್ನಾನ ಮಾಡೊಲ್ಲ, ಮದುವೆಯಾದ 40 ದಿನಕ್ಕೆ ಡಿವೋರ್ಸ್‌ ಕೇಳಿದ ಮಹಿಳೆ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 17, 2024 | 11:30 AM

ಮದುವೆ ಅನ್ನೋದು ಪತಿ ಪತ್ನಿಯರ ನಡುವಿನ ಏಳೇಳು ಜನ್ಮದ ಬಂಧ ಎನ್ನಲಾಗುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಹೆಚ್ಚಾಗುತ್ತಿದೆ. ಸಣ್ಣ ಪುಟ್ಟ ವಿಚಾರಗಳಿಗೆ ಗಂಡ ಹೆಂಡತಿಗೆ ಡಿವೋರ್ಸ್‌ ನೀಡುವಂತಹದ್ದು, ಗಂಡನಿಂದ ಮುಕ್ತಿ ಪಡೆಯಲು ಪತ್ನಿಯಾದವಲು ಕೋರ್ಟ್‌ ಮೆಟ್ಟಿಲೇರುವಂತಹ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ. ಈ ಹಿಂದೆ ಗಂಡ ಕುರ್ಕುರೆ ತರಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಪತ್ನಿ ವಿಚ್ಛೇದನಕ್ಕೆ ಅರ್ಜಿ ಹಾಕಿದ ಸುದ್ದಿಯೊಂದು ಭಾರೀ ವೈರಲ್‌ ಆಗಿತ್ತು. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬರು ತನ್ನ ಪತಿರಾಯ ದಿನಾಲೂ ಸ್ನಾನ ಮಾಡೊಲ್ಲ ಎಂಬ ವಿಚಾರಕ್ಕೆ ಮದುವೆಯಾದ 40 ದಿನಕ್ಕೆ ತನ್ನ ಗಂಡನಿಂದ ಡಿವೋರ್ಸ್‌ ಕೇಳಿದ್ದಾರೆ.

ಈ ವಿಚಿತ್ರ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದ್ದು, ತನ್ನ ಪತಿ ದಿನಾಲೂ ಸ್ನಾನ ಮಾಡೊಲ್ಲ ಎಂಬ ವಿಚಾರವನ್ನು ತಿಳಿದ ಮಹಿಳೆಯೊಬ್ಬರು ಮದುವೆಯಾದ 40 ದಿನಕ್ಕೆ ವಿಚ್ಛೇದನ ಕೋರಿ ಕೌಟುಂಬಿಕ ಸಲಹಾ ಕೇಂದ್ರದ ಮೆಟ್ಟಿಲೇರಿದ್ದಾರೆ. ಇಂಡಿಯಾ ಟುಡೇ ವರದಿಯ ಪ್ರಕಾರ ಈ ಮಹಿಳೆಯ ಗಂಡ ತಿಂಗಳಿಗೆ ಕೇವಲ ಒಂದು ಅಥವಾ ಎರಡು ಬಾರಿ ಮಾತ್ರ ಸ್ನಾನ ಮಾಡುತ್ತಿದ್ದು, ಆತನ ಮೈಯೆಲ್ಲಾ ದುರ್ವಾಸನೆಯಿಂದ ಕೂಡಿರುತ್ತದೆ. ಹಾಗಾಗಿ ದೇಹ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲಾಗದ ಇಂತಹ ವ್ಯಕ್ತಿಯ ಜೊತೆ ನಾನು ಬಾಳಲಾರೆ ಎಂದು ಮಹಿಳೆ ಹೇಳಿಕೊಂಡಿದ್ದಾರಂತೆ. ಈ ಬಗ್ಗೆ ಕೌಟುಂಬಿಕ ಸಲಹಾ ಕೇಂದ್ರದ ಸಲಹೆಗಾರರು ಮಹಿಳೆಯ ಪತಿ ರಾಜೇಶ್‌ನನ್ನು ಪ್ರಶ್ನಿಸಿದಾಗ ಆತ ʼನಾನು ತಿಂಗಳಿಗೆ ಒಂದು ಅಥವಾ ಎರಡು ಬಾರಿ ಮಾತ್ರ ಸ್ನಾನ ಮಾಡುತ್ತೇನೆ ಮತ್ತು ವಾರಕ್ಕೊಮ್ಮೆ ಸ್ವಲ್ಪ ಗಂಗಾ ಜಲವನ್ನು ದೇಹಕ್ಕೆ ಸಿಂಪಡಿಸುತ್ತೇನೆ ಎಂದು ಹೇಳಿದ್ದಾನೆ.

ಇದನ್ನೂ ಓದಿ: ಪ್ರಥಮ ವರ್ಷದ ಪುಣ್ಯ ಸ್ಮರಣೆ, ತೀರಿ ಹೋದ ಬೆಕ್ಕಣ್ಣನ ನೆನೆದು ದಿನ ಪ್ರತಿಕೆಯಲ್ಲಿ ಭಾವುಕ ಫೋಟೊ ಹಾಕಿಸಿದ ಕುಟುಂಬಸ್ಥರು

ಕೌಟುಂಬಿಕ ಸಲಹಾ ಕೇಂದ್ರದ ಸಲಹೆಗಾರರ ಪ್ರಕಾರ ರಾಜೇಶ್‌ ಮದುವೆಯಾದ ಬಳಿಕ ತನ್ನ ಪತ್ನಿಯ ಒತ್ತಾಯಕ್ಕೆ ಮಣಿದು ಕೇವಲ 6 ಬಾರಿ ಮಾತ್ರ ಸ್ನಾನ ಮಾಡಿದ್ದು, ಈತನ ಈ ಅಭ್ಯಾಸಕ್ಕೆ ಬೇಸತ್ತ ಮಹಿಳೆ ತನ್ನ ತವರು ಮನೆ ಸೇರಿದ್ದಾರೆ. ನಂತರ ಮಹಿಳೆಯ ಕುಟುಂಬ ಸದಸ್ಯರು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ರಾಜೇಶ್‌ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ಹೀಗೆ ಮಾತುಕತೆಗಳು, ಕೌನ್ಸಿಲಿಂಗ್‌ ನಡೆದು ರಾಜೇಶ್‌ ತನ್ನ ನೈರ್ಮಲ್ಯವನ್ನು ಸುಧಾರಿಸಿಲು ಪ್ರತಿದಿನ ಸ್ನಾನ ಮಾಡುವುದಾಗಿ ಒಪ್ಪಿಕೊಂಡಿದ್ದಾನೆ. ಹೀಗಿದ್ರೂ ಆ ಮಹಿಳೆ ಈತನ ಜೊತೆಗೆ ಬಾಳಲಾರೇ ಎಂದು ಪಟ್ಟು ಹಿಡಿದಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ದಂಪತಿಯನ್ನು ಸೆಪ್ಟೆಂಬರ್‌ 22 ರಂದು ಮತ್ತೊಮ್ಮೆ ಕೌನ್ಸೆಲಿಂಗ್‌ ಕೇಂದ್ರಕ್ಕೆ ಬರುವಂತೆ ಸೂಚಿಸಲಾಗಿದೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ