Viral Photo: ತನ್ನನ್ನು ತಾನೇ ಸುತ್ತಿಕೊಂಡು ಆತ್ಮಹತ್ಯೆ ಮಾಡಿಕೊಂಡ ಹಾವು, ಫೋಟೊ ವೈರಲ್
ಹಾವೊಂದು ತನ್ನನ್ನು ತಾನು ಸುತ್ತಿಕೊಂಡು ಪ್ರಾಣ ಬಿಟ್ಟಿರುವ ಫೋಟೊವೊಂದು ವೈರಲ್ ಆಗುತ್ತಿದೆ. ವ್ಯಕ್ತಿಯೊಬ್ಬರು ರೆಡ್ಡಿಟ್ನಲ್ಲಿ ಈ ಫೋಟೊವನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿರುವುದು ಎರಡು ಹಾವಲ್ಲ ಬದಲಾಗಿ ಅಲ್ಲಿರುವ ಹಾವು ತನ್ನನ್ನು ತಾನೇ ಸುತ್ತಿಕೊಂಡು, 10 ನಿಮಿಷಗಳ ಬಳಿಕ ಉಸಿರು ಚೆಲ್ಲಿದೆ.
ಹಾವು ಕಡಿತದಿಂದ ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡಿರುವುದನ್ನು ನೋಡಿದ್ದೇವೆ ಆದರೆ ಹಾವು ಎಂದಾದರೂ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿದ್ದೀರಾ. ಹಾವೊಂದು ತನ್ನನ್ನು ತಾನು ಸುತ್ತಿಕೊಂಡು ಸಾವನ್ನಪ್ಪಿರುವ ಫೋಟೊ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ವ್ಯಕ್ತಿಯೊಬ್ಬರು ಆ ದೃಶ್ಯವನ್ನು ನೋಡಿದಾಗ ಆಘಾತಕ್ಕೊಳಗಾಗಿದ್ದರು, ಈ ವಿಚಾರವನ್ನು ರೆಡ್ಡಿಟ್ನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿರುವುದು ಎರಡು ಹಾವಲ್ಲ ಬದಲಾಗಿ ಅಲ್ಲಿರುವ ಹಾವು ತನ್ನನ್ನು ತಾನೇ ಸುತ್ತಿಕೊಂಡು, 10 ನಿಮಿಷಗಳ ಬಳಿಕ ಉಸಿರು ಚೆಲ್ಲಿದೆ.
ಕೆಲವರು ವಿಷಕಾರಿ ಪರಿಸರದ ಕಾರಣದಿಂದ ಅದು ಸಾವನ್ನಪ್ಪಿರಬೇಕು ಎಂದು ಹೇಳಿದ್ದಾರೆ, ಆ ವ್ಯಕ್ತಿ ಸಹಾಯ ಮಾಡದೆ ಹಾವಿನ ಹತಾಶೆ ಅವಸ್ಥೆಯನ್ನು ಏಕೆ ನೋಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಐಎಫ್ಎಲ್ ವಿಜ್ಞಾನದ ಪ್ರಕಾರ, ಒತ್ತಡ, ದೃಷ್ಟಿಹೀನತೆ, ಅಧಿಕ ಉಷ್ಣಾಂಶವು ಹಾವುಗಳನ್ನು ಗೊಂದಲಕ್ಕೀಡು ಮಾಡುತ್ತದೆ.
ಮತ್ತಷ್ಟು ಓದಿ: ಪ್ರಥಮ ವರ್ಷದ ಪುಣ್ಯ ಸ್ಮರಣೆ, ತೀರಿ ಹೋದ ಬೆಕ್ಕಣ್ಣನ ನೆನೆದು ದಿನ ಪ್ರತಿಕೆಯಲ್ಲಿ ಭಾವುಕ ಫೋಟೊ ಹಾಕಿಸಿದ ಕುಟುಂಬಸ್ಥರು
ಗೂಗಲ್ ಪ್ರಕಾರ, ಸರ್ಪೆಂಟೈನ್ ಆಟೋಸ್ಫಿಕ್ಸಿಯೇಷನ್ ಸಿಂಡ್ರೋಮ್ ಎನ್ನುವ ಮಾರಣಾಂತಿಕ ಕಾಯಿಲೆ ಬಂದರೆ ಹಾವುಗಳಿಗೆ ಉಸಿರುಗಟ್ಟುವಿಕೆ ಉಂಟಾಗಿ ಸಾವನ್ನಪ್ಪುತ್ತವೆ, ಈ ಅಸಹಜ ನಡವಳಿಕೆಯು ಹಾವಿನ ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುವ ಜೀನ್ ರೂಪಾಂತರದಿಂದ ಉಂಟಾಗುತ್ತದೆ ಎಂದು ಹೇಳಲಾಗಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:05 am, Tue, 17 September 24