ಪ್ರಥಮ ವರ್ಷದ ಪುಣ್ಯ ಸ್ಮರಣೆ, ತೀರಿ ಹೋದ ಬೆಕ್ಕಣ್ಣನ ನೆನೆದು ದಿನ ಪ್ರತಿಕೆಯಲ್ಲಿ ಭಾವುಕ ಫೋಟೊ ಹಾಕಿಸಿದ ಕುಟುಂಬಸ್ಥರು
ಮನುಷ್ಯರು ತೀರಿ ಹೋದ ಬಳಿಕ ಅವರನ್ನು ನೆನೆದು ಪ್ರತಿವರ್ಷ ಅವರು ನಿಧನ ಹೊಂದಿದ ದಿನದಂದು ಕುಟುಂಬಸ್ಥರು ಮತ್ತು ಸ್ನೇಹಿತರು ದಿನ ಪ್ರತಿಕೆಯಲ್ಲಿ ಅವರ ಪುಣ್ಯ ಸ್ಮರಣೆಯ ಫೊಟೋವನ್ನು ಪ್ರಿಂಟ್ ಮಾಡಿಸುತ್ತಾರೆ. ಆದ್ರೆ ಇಲ್ಲೊಂದು ಕುಟುಂಬ ಮನೆ ಮಗನಂತಿದ್ದ ತೀರಿ ಹೋದ ಬೆಕ್ಕನ್ನುಕೂಡಾ ನೆನೆದು ಅದಕ್ಕೆ ಗೌರವ ನೀಡುವ ಸಲುವಾಗಿ ಅದರ ಪ್ರಥಮ ವರ್ಷದ ಪುಣ್ಯ ಸ್ಮರಣೆಯ ಫೋಟೋವನ್ನು ನ್ಯೂಸ್ ಪೇಪರ್ ಅಲ್ಲಿ ಪ್ರಿಂಟ್ ಮಾಡಿಸಿದ್ದಾರೆ. ಬೆಕ್ಕಣ್ಣನ ಪುಣ್ಯ ಸ್ಮರಣೆಯ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಬೆಕ್ಕು, ನಾಯಿಗಳೆಂದರೆ ಬಹುತೇಕ ಎಲ್ಲರಿಗೂ ಇಷ್ಟ. ಇದೇ ಕಾರಣಕ್ಕೆ ಈ ಸಾಕು ಪ್ರಾಣಿಗಳನ್ನು ಹಲವರು ಮನೆಯಲ್ಲಿ ಸಾಕುತ್ತಾರೆ. ಮನೆಯ ಸದಸ್ಯರಂತೇ ಇರುವ ಇವುಗಳು ತೀರಿ ಹೋದ್ರೆ ಆಗುವ ನೋವು ಅಷ್ಟಿಷ್ಟಲ್ಲ. ಸಾಕು ಪ್ರಾಣಿಗಳನ್ನು ಕಳೆದುಕೊಂಡ ನೋವು ಒಂದೆರಡು ದಿನ ಇರುತ್ತೆ, ಮತ್ತೆ ಅದನ್ನು ಮರೆತೇ ಬಿಡುತ್ತಾರೆ ಅಂತ ಹೇಳ್ತಾರೆ. ಆದ್ರೆ ಇಲ್ಲೊಂದು ಕುಟುಂಬ ಮನೆ ಮಗನಂತಿದ್ದ ತೀರಿ ಹೋದ ಬೆಕ್ಕನ್ನು ನೆನೆದು ಅದಕ್ಕೆ ಗೌರವ ನೀಡುವ ಸಲುವಾಗಿ ಅದರ ಪ್ರಥಮ ವರ್ಷದ ಪುಣ್ಯ ಸ್ಮರಣೆಯ ಫೋಟೋವನ್ನು ನ್ಯೂಸ್ ಪೇಪರ್ ಅಲ್ಲಿ ಪ್ರಿಂಟ್ ಮಾಡಿಸಿದ್ದಾರೆ. ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಬೆಕ್ಕಣ್ಣನ ಮೇಲಿರುವ ಮನೆಯವರ ಈ ಪ್ರೀತಿಯನ್ನು ಕಂಡು ಪ್ರಾಣಿ ಪ್ರಿಯರು ಭಾವುಕರಾಗಿದ್ದಾರೆ.
ಮುಂಬೈನಲ್ಲಿ ವಾಸವಿರುವ ಕೇರಳ ಮೂಲದ ಕುಟುಂಬವೊಂದು 2019 ರಲ್ಲಿ ತಮ್ಮ ಮುದ್ದು ಬೆಕ್ಕಿನ ಪುಣ್ಯ ಸ್ಮರಣೆಯ ಫೋಟೋವನ್ನು ನ್ಯೂಸ್ ಪೇಪರ್‌ನಲ್ಲಿ ಹಾಕಿಸಿದ್ದರು. ಈ ಕುರಿತ ಫೋಟೋವೊಂದು ಇದೀಗ ಮತ್ತೊಮ್ಮೆ ವೈರಲ್ ಆಗುತ್ತಿದೆ. 18 ವರ್ಷಗಳ ಕಾಲ ಬದುಕಿದ್ದ ಚುಂಚು ನಾಯರ್ ಎಂಬ ಬೆಕ್ಕು 2018 ರಲ್ಲಿ ಮರಣ ಹೊಂದುತ್ತೆ. ಈ ಮುದ್ದು ಬೆಕ್ಕಿನ ನೆನಪಿಗಾಗಿ 2019 ರಲ್ಲಿ ಕುಟುಂಬಸ್ಥರು ಈ ಬೆಕ್ಕಿನ ಪ್ರಥಮ ವರ್ಷದ ಪುಣ್ಯ ಸ್ಮರಣೆಯ ಫೋಟೋವನ್ನು ದಿನ ಪ್ರತಿಕೆಯಲ್ಲಿ ಪ್ರಿಂಟ್ ಮಾಡಿಸಿದ್ದಾರೆ. ಈ ಕುರಿತ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ವೈರಲ್ ಪೋಸ್ಟ್ ಇಲ್ಲಿದೆ
CoconutShawarma ಹೆಸರಿನ ಎಕ್ಸ್ ಖಾತೆಯಲ್ಲಿ ಈ ಕುರಿತ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದೆ. ವೈರಲ್ ಫೋಟೋದಲ್ಲಿ ಮನುಷ್ಯರಂತೆ ಬೆಕ್ಕಿನ ಪುಣ್ಯ ಸ್ಮರಣೆಯ ಫೋಟೋವನ್ನು ದಿನ ಪ್ರತಿಕೆಯಲ್ಲಿ ಹಾಕಿಸಿರುವಂತಹ ದೃಶ್ಯವನ್ನು ಕಾಣಬಹುದು. ಚುಂಚು ನಾಯರ್ ಬೆಕ್ಕಿನ ಪ್ರಥಮ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಅದರ ತಂದೆ, ತಾಯಿ, ಅಣ್ಣಂದಿರು, ಅಕ್ಕಂದಿರು ಹಾಗೂ ಅದರ ಪ್ರೀತಿಪಾತ್ರರು ನಾವು ನಿನ್ನನ್ನು ತುಂಬಾನೇ ಮಿಸ್ ಮಾಡುತ್ತಿದ್ದೇವೆ ಎಂದು ಫೋಟೋ ಹಾಕಿಸಿದ್ದಾರೆ.
ಇದನ್ನೂ ಓದಿ: ಫೇಸ್‌ಬುಕ್‌ನಲ್ಲಿ ಅತ್ಯಾಚಾರ ಬೆದರಿಕೆ ಹಾಕಿದಾತನಿಗೆ ʼಕೈʼ ನಾಯಕಿ ಕೈಯಿಂದ ಸರಿಯಾಗಿ ಬಿತ್ತು ಗೂಸಾ
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದನ್ನು ನೋಡಿದಾಗ ಸಂತೋಷದ ಜೊತೆಜೊತೆಗೆ ದುಃಖ ಕೂಡಾ ಆಗುತ್ತಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇಂತಹ ಸುಂದರ ಕುಟುಂಬವನ್ನು ಪಡೆದ ಈ ಬೆಕ್ಕು ನಿಜಕ್ಕೂ ಅದೃಷ್ಟವಂತʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ