AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಮಧ್ಯ ರಾತ್ರಿಲಿ ಹೈವೇ ರಸ್ತೇಲಿ ರೊಮ್ಯಾನ್ಸ್‌ ಮಾಡ್ತಾ ಬೈಕಿನಲ್ಲಿ ಜಾಲಿ ರೈಡ್

ಈ ಕೆಲ ಪ್ರೇಮಿಗಳಿಗೆ ಎಲ್ಲಿ, ಹೇಗೆ ನಡೆದುಕೊಳ್ಳಬೇಕು ಎಂಬ ಕನಿಷ್ಟ ಪರಿಜ್ಞಾನ ಕೂಡಾ ಇರೋದಿಲ್ಲ. ಇದೇ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳು ಅಸಭ್ಯ ವರ್ತನೆಯನ್ನು ತೋರುವ ಅಸಹ್ಯಕರ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಪ್ರೇಮಿಗಳಿಬ್ಬರು ರೊಮ್ಯಾನ್ಸ್‌ ಮಾಡ್ತಾ ಹೈವೇ ರಸ್ತೆಯಲ್ಲಿ ಬೈಕ್‌ನಲ್ಲಿ ಜಾಲಿ ರೈಡ್‌ ಹೊರಟಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, ಪ್ರೇಮಿಗಳ ಹುಚ್ಚಾಟಕ್ಕೆ ನೆಟ್ಟಿಗರು ಛೀ.. ಥೂ ಎಂದಿದ್ದಾರೆ.

Viral: ಮಧ್ಯ ರಾತ್ರಿಲಿ ಹೈವೇ ರಸ್ತೇಲಿ ರೊಮ್ಯಾನ್ಸ್‌ ಮಾಡ್ತಾ ಬೈಕಿನಲ್ಲಿ ಜಾಲಿ ರೈಡ್
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Sep 16, 2024 | 2:45 PM

Share

ಪ್ರೇಮಕ್ಕೆ ಕಣ್ಣಿಲ್ಲ ಎಂಬಂತೆ ಪ್ರೀತಿಯಲ್ಲಿ ಬಿದ್ದವರಿಗೂ ಕೂಡಾ ಈ ಜಗತ್ತಿನ ಪರಿಜ್ಞಾನವೇ ಇರೋದಿಲ್ಲ. ಹೌದು ಪ್ರೇಮಿಗಳು ತಮ್ಮ ಹತ್ತಿರದಲ್ಲಿ ಯಾರಿದ್ದಾರೆ ಎಂಬುದನ್ನೂ ಗಮನಿಸದೆ ತಮ್ಮದೇ ಲೋಕದಲ್ಲಿ ತೇಳುತ್ತಿರುತ್ತಾರೆ. ಹೀಗೆ ಪ್ರೀತಿ ಪ್ರೇಮದ ಹೆಸರಿಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುತ್ತಾ ಇತರರಿಗೂ ಮುಜುಗರವನ್ನು ಉಂಟುಮಾಡುವ ಪ್ರೇಮಿಗಳ ಅತಿರೇಕದ ವರ್ತನೆಯ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ತಾವು ಹೈವೇ ರೋಡಲ್ಲಿ ಇದ್ದೇವೆ, ನಮ್ಮನ್ನು ಇತರೆ ಪ್ರಯಾಣಿಕರು ನೋಡ್ತಿದ್ದಾರೆ ಎಂಬುದನ್ನೂ ಮರೆತು ಪ್ರೇಮಿಗಳಿಬ್ಬರು ರೊಮ್ಯಾನ್ಸ್‌ ಮಾಡ್ತಾ ಬೈಕ್‌ನಲ್ಲಿ ಜಾಲಿ ರೈಡ್‌ ಹೊರಟಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, ಸಾರ್ವಜನಿಕವಾಗಿ ಅಸಭ್ಯ ವರ್ತನೆಯನ್ನು ತೋರಿದ್ದು ಮಾತ್ರವಲ್ಲದೆ ಟ್ರಾಫಿಕ್‌ ರೂಲ್ಸ್‌ ಅನ್ನು ಬ್ರೇಕ್‌ ಮಾಡಿ ಹುಚ್ಚಾಟ ಮೆರೆದ ಈ ಪ್ರೇಮಿಗಳ ವಿರುದ್ಧ ನೆಟ್ಟಿಗರು ಫುಲ್‌ ಗರಂ ಆಗಿದ್ದಾರೆ.

ದೆಹಲಿಯ ವಿಕಾಸಪುರಿ ಫ್ಲೈಓವರ್‌ನಲ್ಲಿ ಯುವಕನೊಬ್ಬ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿ ತನ್ನ ಪ್ರೇಯಸಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು, ರೊಮ್ಯಾನ್ಸ್‌ ಮಾಡುತ್ತಾ ಬೈಕ್‌ನಲ್ಲಿ ರೈಡ್‌ ಹೋಗಿದ್ದು, ಇದನ್ನು ಯಾರೋ ವಿಡಿಯೋ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಇವರ ಹುಚ್ಚಾಟಕ್ಕೆ ಬೇಕ್‌ ಹಾಕ್ಬೇಕಂದ್ರೆ ಇವರುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಲವರು ಆಗ್ರಹಿಸಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ

ಈ ಕುರಿತ ಪೋಸ್ಟ್‌ ಒಂದನ್ನು ಗಗನ್‌ ದೀಪ್‌ ಸಿಂಗ್‌ (GagandeepNews) ಎಂಬವರು ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಮಧ್ಯ ರಾತ್ರಿಯಲ್ಲಿ ದೆಹಲಿಯ ಹೈವೇ ರಸ್ತೆಯಲ್ಲಿ ಯುವಕನೊಬ್ಬ ತನ್ನ ಪ್ರೇಯಸಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು, ರೊಮ್ಯಾನ್ಸ್‌ ಮಾಡ್ತಾ ಜಾಲಿ ರೈಡ್‌ ಹೋಗ್ತಾ ಇರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: 5 ವರ್ಷದ ಮಗುವಿನ ಮೇಲೆ ಬೀದಿ ನಾಯಿಗಳ ಡೆಡ್ಲಿ ಅಟ್ಯಾಕ್; ಈ ದೃಶ್ಯ ನೋಡಿದ್ರೆ ಎದೆ ಝಲ್‌ ಎನ್ನುತ್ತೆ

ಸೆಪ್ಟೆಂಬರ್‌ 15 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 14 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼದೆಹಲಿ ಪೊಲೀಸರನ್ನು ಟ್ಯಾಗ್‌ ಮಾಡಿ ದಯವಿಟ್ಟು ಸೂಕ್ತ ಕ್ರಮ ಕೈಗೊಳ್ಳಿʼ ಎಂದು ಆಗ್ರಹಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇತ್ತೀಚಿಗೆ ಸಾರ್ವಜನಿಕ ಸ್ಥಳಗಳಲ್ಲಿಯೂ ಪ್ರೇಮಿಗಳು ಅಸಹ್ಯವಾಗಿ ವರ್ತಿಸುತ್ತಿದ್ದಾರೆʼ ಎಂದು ಕಿಡಿ ಕಾರಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ