AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: 10 ಲಕ್ಷ ರೂ. ಡೆಪಾಸಿಟ್‌ ಕಟ್ಬೇಕು ಅಷ್ಟೆ, ಮರ ಕಡಿದ ವ್ಯಕ್ತಿಗೆ ಖಡಕ್‌ ವಾರ್ನಿಂಗ್‌ ಕೊಟ್ಟ ಕರ್ನಾಟಕ ಹೈ ಕೋರ್ಟ್‌

ಕೋರ್ಟ್‌ ವಾದ ವಿವಾದಗಳಿಗೆ ಸಂಬಂಧಿಸಿದ ಕೆಲವೊಂದು ಇಂಟರೆಸ್ಟಿಂಗ್‌ ವಿಡಿಯೋ ತುಣುಕುಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ಹರಿದಾಡುತ್ತಲೇ ಇರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್‌ ಆಗಿದೆ. ಕೋರ್ಟ್‌ ಕೇಸ್‌ ನಡಿತಿರ್ಬೇಕಾದ್ರೆ ವ್ಯಕ್ತಿಯೊಬ್ಬ ಯಾರ ಅನುಮತಿಯೂ ಇಲ್ಲದೆ ಅಕ್ರಮವಾಗಿ ಮರ ಕಡಿದಿದ್ದು, ಈ ವಿಚಾರ ತಿಳಿದು ಒಂದಾ 10 ಲಕ್ಷ ಡೆಪಾಸಿಟ್‌ ಮಾಡಿ ಇಲ್ಲಾಂದ್ರೆ ಜೈಲಿಗೆ ಹೋಗಿ ಎಂದು ಆ ವ್ಯಕ್ತಿಯನ್ನು ಕರ್ನಾಟಕ ಹೈಕೋರ್ಟ್‌ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.

Viral: 10 ಲಕ್ಷ ರೂ. ಡೆಪಾಸಿಟ್‌ ಕಟ್ಬೇಕು ಅಷ್ಟೆ, ಮರ ಕಡಿದ ವ್ಯಕ್ತಿಗೆ ಖಡಕ್‌ ವಾರ್ನಿಂಗ್‌ ಕೊಟ್ಟ ಕರ್ನಾಟಕ ಹೈ ಕೋರ್ಟ್‌
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Sep 16, 2024 | 12:05 PM

Share

ಭೂ ವಿವಾದ ತಕರಾರು ಅರ್ಜಿಗಳ ವಿಚಾರಣೆಯ ವೇಳೆ ಕೋರ್ಟ್‌ ಅನುಮತಿಯಿಲ್ಲದೆ ಜಾಗ ಸೇಲ್‌ ಮಾಡುವಂತಹದ್ದು ಅಥವಾ ಕಟ್ಟಡ ನಿರ್ಮಾಣ ಮಾಡುವಂತಹದ್ದು ಇಲ್ಲವೇ ಆ ನಿರ್ದಿಷ್ಟ ಜಾಗದಲ್ಲಿರುವ ಮರಗಳನ್ನು ಕಡಿಯುವಂತಿಲ್ಲ. ಆದ್ರೆ ಇಲ್ಲೊಬ್ಬ ವ್ಯಕ್ತಿ ಭೂ ವಿವಾದಕ್ಕೆ ಸಂಬಂಧಿಸಿದ ಕೋರ್ಟ್‌ ಕೇಸ್‌ ನಡಿತಿರ್ಬೇಕಾದ್ರೆ ಇಲ್ಲೊಬ್ಬ ವ್ಯಕ್ತಿ ಕೋರ್ಟ್‌ ಅನುಮತಿಯಿಲ್ಲದೆಯೇ ಅಕ್ರಮವಾಗಿ ಮರ ಕಡಿದಿದ್ದು, ಈ ವಿಚಾರ ತಿಳಿದು ಒಂದಾ 10 ಲಕ್ಷ ಡೆಪಾಸಿಟ್‌ ಮಾಡಿ ಇಲ್ಲಾಂದ್ರೆ ಜೈಲಿಗೆ ಹೋಗಿ ಎಂದು ಆ ವ್ಯಕ್ತಿಯನ್ನು ಕರ್ನಾಟಕ ಹೈಕೋರ್ಟ್‌ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ. ಈ ಕುರಿತ ವಿಡಿಯೋವೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಕರ್ನಾಟಕ ಹೈಕೋರ್ಟ್‌ನಲ್ಲಿ ಭೂ ವಿವಾದ ತಕರಾರು ಅರ್ಜಿ ವಿಚಾರಣೆ ನಡಿತಿರ್ಬೇಕಾದ್ರೆ ವಿರಾಜಪೇಟೆಯ ಥೋಮಸ್‌ ಲೋಬೋ ಎಂಬ ವ್ಯಕ್ತಿ ಕಾಫಿ ತೋಟದ ಸಿಲ್ವರ್‌ ಮರಗಳನ್ನು ಕಡಿದ್ದು ಹಾಕಿದ್ದು, ಕೋರ್ಟ್‌ ಕೇಸ್‌ ನಡಿತಿರ್ಬೇಕಾದ್ರೆ ಅದು ಹೇಗೆ ಯಾರ ಅನುಮತಿಯೂ ಇಲ್ಲದೆ ಮರ ಕಡಿದ್ರಿ ನೀವು ? ಇದಕ್ಕಾಗಿ ಒಂದಾ 10 ಲಕ್ಷ ಡೆಪಾಸಿಟ್‌ ಮಾಡಿ ಇಲ್ಲಾಂದ್ರೆ ಜೈಲಿಗೆ ಹೋಗಿ ಎಂದು ಆ ವ್ಯಕ್ತಿಯನ್ನು ನ್ಯಾಯಾಧೀಶರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ;

ಈ ಕುರಿತ ಪೋಸ್ಟ್‌ ಒಂದನ್ನು KomuvadiVirudda ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ವಿಡಿಯೋದಲ್ಲಿ ಅಕ್ರಮವಾಗಿ ಮರ ಕಡಿದ ವ್ಯಕ್ತಿಯನ್ನು ಕರ್ನಾಟಕ ಹೈಕೋರ್ಟ್‌ ನ್ಯಾಯಾಧೀಶರು ತರಾಟೆಗೆ ತೆಗೆದುಕೊಳ್ಳುತ್ತಿರುವ ದೃಶ್ಯವನ್ನು ಕಾಣಬಹುದು. ನೀವು ಕೋರ್ಟ್‌ ಕೇಸ್‌ ನಡಿತಿರುವ ಮಧ್ಯೆ ಮರ ಕಡಿದಿದ್ದೀರಿ, ಇವಾಗ ಮರ ಕಡಿದಿಲ್ಲ ಅಂತಾ ವಾದ ಬೇರೇ ಮಾಡ್ತೀರಾ, ಕೇಸ್‌ ನಡಿತಿರುವಾಗ ಮರ ಕಡಿದಿದ್ದೀರಿ, ಇವಾಗ ಕಥೆ ಹೇಳ್ಬೇಡಿ ಒಂದಾ 10 ಲಕ್ಷ ಡೆಪಾಸಿಟ್‌ ಮಾಡಿ ಇಲ್ಲಾಂದ್ರೆ ಜೈಲಿಗೆ ಹೋಗಿ ಎಂದು ಆ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಇವಾಗ ಜೈಲಿಗೆ ಹೋಗಿ ನಿಮ್ಮ ಲಾಯರ್‌ ಬಂದು ಬಿಡಿಸ್ತಾರೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಇದನ್ನೂ ಓದಿ: ಚಿಟ್ಟೆಗಳ ಕಳ್ಳಸಾಗಣಿಕೆಗೆ ಯತ್ನಿಸಿದ ತಂದೆ-ಮಗ, ಭಾರೀ ಮೊತ್ತದ ದಂಡ ವಿಧಿಸಿದ ನ್ಯಾಯಾಲಯ

ಸೆಪ್ಟೆಂಬರ್‌ 14 ರಂದು ಹಂಚಿಕೊಳ್ಳಲಾದ ಈ ವಿಡಿಯೋ 46 ಸಾವಿರ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದ್ದು, ಹಲವರು ʼತಪ್ಪು ಮಾಡೋ ರಾಜಕಾರಣಿಗಳು ಮತ್ತು ಉನ್ನತ ಅಧಿಕಾರಿಗಳಿಗೂ ಇದೇ ತರಹ ಖಡಕ್‌ ಶಿಕ್ಷೆ ಕೊಡ್ಬೇಕುʼ ಎಂದು ಹೇಳಿದ್ದಾರೆ.

ವೈರಲ್​​ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ