Viral: ಚಿಟ್ಟೆಗಳ ಕಳ್ಳಸಾಗಣಿಕೆಗೆ ಯತ್ನಿಸಿದ ತಂದೆ-ಮಗ, ಭಾರೀ ಮೊತ್ತದ ದಂಡ ವಿಧಿಸಿದ ನ್ಯಾಯಾಲಯ

ಚಿನ್ನ, ಹಣ ಸೇರಿದಂತೆ ದುಬಾರಿ ವಸ್ತುಗಳನ್ನು ಕದಿಯುವವರನ್ನು ನೋಡಿದ್ದೇವೆ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ತಂದೆ-ಮಗ ಸೇರಿಕೊಂಡು ಚಿಟ್ಟೆ ಮತ್ತು ಕೀಟಗಳ ಕಳ್ಳತನಕ್ಕೆ ಯತ್ನಿಸಿದ್ದಾರೆ. ರೆಡ್‌ ಹ್ಯಾಂಡ್‌ ಸಿಕ್ಕಿಬಿದ್ದ ಈ ಇಬ್ಬರಿಗೆ ನ್ಯಾಯಾಲಯ ಬರೋಬ್ಬರಿ $200000 ಡಾಲರ್‌ ಅಂದ್ರೆ ಸುಮಾರು 1.62 ಕೋಟಿ ರೂ. ದಂಡ ವಿಧಿಸಿದ್ದು, ನಿಗದಿತ ಸಮಯದೊಳಗೆ ದಂಡ ಪಾವತಿಸದಿದ್ದರೆ, 2 ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದೆ.

Viral: ಚಿಟ್ಟೆಗಳ ಕಳ್ಳಸಾಗಣಿಕೆಗೆ ಯತ್ನಿಸಿದ ತಂದೆ-ಮಗ, ಭಾರೀ ಮೊತ್ತದ ದಂಡ ವಿಧಿಸಿದ ನ್ಯಾಯಾಲಯ
ವೈರಲದದದ ಫೋಟೋ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 16, 2024 | 10:55 AM

ಸಾಕು ಪ್ರಾಣಿಗಳನ್ನು ಕದ್ದಂತಹ ಅಥವಾ ಕಳ್ಳತನಕ್ಕೆ ಯತ್ನಿಸಿದಂತಹ ಸುದ್ದಿಗಳನ್ನು ಕೇಳಿರುತ್ತೇವೆ ಅಲ್ವಾ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ತಂದೆ ಮಗ ಸೇರಿಕೊಂಡು ಹಲವಾರು ಚಿಟ್ಟೆ ಮತ್ತು ಕೀಟಗಳನ್ನು ಹಿಡಿದು ಕಳ್ಳ ಸಾಗಾಣಿಕೆಗೆ ಯತ್ನಿಸಿದ್ದಾರೆ. ಚಿಟ್ಟಿಗಳನ್ನು ಕಳ್ಳತನ ಮಾಡುವಾಗ ಈ ಇಬ್ಬರೂ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದು, ಇವರ ಈ ತಪ್ಪಿಗೆ ನ್ಯಾಯಾಲಯ ಬರೋಬ್ಬರಿ $200000 ಡಾಲರ್‌ ಅಂದ್ರೆ ಸುಮಾರು 1.62 ಕೋಟಿ ರೂ. ದಂಡ ವಿಧಿಸಿದೆ. ನಿಗದಿತ ಸಮಯದೊಳಗೆ ದಂಡ ಪಾವತಿಸದಿದ್ದರೆ, 2 ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಲಾಗಿದೆ.

ಈ ಘಟನೆ ಶ್ರೀಲಂಕಾದಲ್ಲಿ ನಡೆದಿದ್ದು, ಇಟಲಿಯಿಂದ ಇಲ್ಲಿಗೆ ಪ್ರವಾಸ ಬಂದಿದ್ದ ತಂದೆ-ಮಗ ಇಲ್ಲಿಂದ ಚಿಟ್ಟೆಗಳನ್ನು ಕಳ್ಳಸಾಗಣಿಕೆ ಮಾಡಲು ಯತ್ನಿಸಿದ್ದಾರೆ. ವರದಿಗಳ ಪ್ರಕಾರ ಈ ಇಬ್ಬರು ತಂದೆ ಮಗ ಶ್ರೀಲಂಕಾದಲ್ಲಿ ಮೇಣ ಮತ್ತು ಮತ್ತಿತರ ರಾಸಾಯನಿಕಗಳನ್ನು ಬಳಸಿ ಶ್ರೀಲಂಕಾದ ರಾಷ್ಟ್ರೀಯ ಉದ್ಯಾನವನದಲ್ಲಿ ಅಕ್ರಮವಾಗಿ ಚಿಟ್ಟೆಗಳನ್ನು ಹಿಡಿಯುತ್ತಿದ್ದರು. ಈ ಸಂದರ್ಭದಲ್ಲಿ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದ ಇವರನ್ನು ಪೊಲೀಸರು ತಕ್ಷಣ ಬಂಧಿಸಿದ್ದಾರೆ.

ಆರೋಪಿಗಳನ್ನು ಇಟಲಿಯಲ್ಲಿ ವೃತ್ತಿಯಲ್ಲಿ ವೈದ್ಯನಾದ ಹಾಗೂ ಮೊಡೆನಾ ಸಿಟಿಯ ಕೀಟಶಾಸ್ತ್ರ ಸಂಘದ ಸದಸ್ಯನಾದ ಲುಯಿಗಿ ಫೆರಾರಿ (68) ಮತ್ತು ಆತನ ಮಗ ಮಟ್ಟಿಯಾ ಫೆರಾರಿ (28) ಎಂದು ಗುರುತಿಸಲಾಗಿದ್ದು, ಇವರ ಬಳಿ ಪತ್ತೆಯಾದ ಸಾವಿರಾರು ಅಪರೂಪದ ಕೀಟಗಳು ಮತ್ತು 92 ಬಗೆಯ ಅಪರೂಪದ ಜಾತಿಯ ಚಿಟ್ಟೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಹಲವು ಅಪರೂಪದ ಜಾತಿಯ ಕೀಟಗಳು ಸಾವನ್ನಪ್ಪಿದ್ದು, ವನ್ಯಜೀವಿ ಕಾಯ್ದೆಯಡಿ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ತಂದೆ ಮಗನ ವಿರುದ್ಧ ಎಫ್.ಐ.ಆರ್‌ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಇದನ್ನೂ ಓದಿ: ಕಾರ್ ಬಾನೆಟ್‌ನೊಳಗೆ 7 ಅಡಿ ಉದ್ದದ ಬೃಹತ್ ಹೆಬ್ಬಾವು ಪತ್ತೆ; ವಿಡಿಯೋ ವೈರಲ್​

ನ್ಯಾಯಾಲಯದಲ್ಲಿ ಈ ಪ್ರಕರಣವನ್ನು ಗಂಬೀರವಾಗಿ ಪರಿಗಣಿಸಿ ಆರೋಪಿಗಳಿಬ್ಬರಿಗೆ $200000 ಡಾಲರ್‌ ಅಂದ್ರೆ ಸುಮಾರು 1.62 ಕೋಟಿ ರೂ. ದಂಡ ವಿಧಿಸಿದೆ. ಸೆಪ್ಟೆಂಬರ್‌ 24 ರ ಒಳಗೆ ದಂಡವನ್ನು ಪಾವತಿಸದಿದ್ದರೆ 2 ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಲಾಗಿದೆ. ಈ ಸುದ್ದಿ ಇದೀಗ ಭಾರೀ ವೈರಲ್‌ ಆಗುತ್ತಿದೆ.

ವೈರಲ್​​ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್​​ ಮಾಡಿ