ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ

ಯುವಕರಲ್ಲಿ ರೀಲ್ಸ್​ ಹೆಚ್ಚು ಹೆಚ್ಚಾಗಿ ಹುಚ್ಚರಂತಾಡುತ್ತಿದ್ದಾರೆ, ಒಂದು ವಿಡಿಯೋಗಾಗಿ ವ್ಯಕ್ತಿಯೊಬ್ಬ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯ ಮಧ್ಯದಲ್ಲಿ ಮಲಗಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಆತ ರೀಲ್ಸ್​ಗಾಗಿ ರಸ್ತೆಯ ನಡುವೆ ಬ್ಯಾರಿಕೇಡ್​ ಹಾಕಿ, ಹೆಣದಂತೆ ಮಲಗಿದ್ದ. 

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ
|

Updated on: Sep 16, 2024 | 9:34 AM

ಯುವಕರಲ್ಲಿ ರೀಲ್ಸ್​ ಹೆಚ್ಚು ಹೆಚ್ಚಾಗಿ ಹುಚ್ಚರಂತಾಡುತ್ತಿದ್ದಾರೆ, ಒಂದು ವಿಡಿಯೋಗಾಗಿ ವ್ಯಕ್ತಿಯೊಬ್ಬ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯ ಮಧ್ಯದಲ್ಲಿ ಮಲಗಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಆತ ರೀಲ್ಸ್​ಗಾಗಿ ರಸ್ತೆಯ ನಡುವೆ ಬ್ಯಾರಿಕೇಡ್​ ಹಾಕಿ, ಹೆಣದಂತೆ ಮಲಗಿದ್ದ.

ಮುಕೇಶ್​ ಕೆಲ ಹೊತ್ತು ಹೆಣದಂತೆ ಮಲಗಿದ್ದು ಬಳಿಕ ಜೋರಾಗಿ ನಗಲು ಆರಂಭಿಸಿದ್ದ, ಈ ವಿಷಯ ಉನ್ನತ ಪೊಲೀಸ್ ಅಧಿಕಾರಿಗಳಿಗೇ ಗೊತ್ತಿರಲಿಲ್ಲ ಎಂಬುದು ಅಚ್ಚರಿಯ ಸಂಗತಿ.

ಈ ರೀಲ್ ಮೇಕಿಂಗ್ ವೀಡಿಯೋ ಸಾಮಾಜಿಕ ಜಾಲತಾಣ ಎಕ್ಸ್ ಆಫ್ ಯುಪಿ ಪೊಲೀಸ್ ನಲ್ಲಿ ಪೋಸ್ಟ್ ಆಗಿದ್ದು, ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ. ಯುಪಿ ಪೊಲೀಸರ ಗಮನಕ್ಕೆ ಬಂದ ತಕ್ಷಣ, ಈ ವಿಷಯದ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

ಪೊಲೀಸರು ಮುಖೇಶ್‌ನನ್ನು ಬಂಧಿಸಿ, ಬಿಎನ್‌ಎಸ್‌ನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡರು. ರಸ್ತೆಯಲ್ಲಿ ರೀಲ್ ಮಾಡುತ್ತಿದ್ದ ಯುವಕನನ್ನು ಬಂಧಿಸಲಾಗಿದೆ ಎಂದು ಎಎಸ್ಪಿ ರಾಜೇಶ್ ಕುಮಾರ್ ಭಾರ್ತಿ ತಿಳಿಸಿದ್ದಾರೆ. ಪೊಲೀಸರು ಆತನ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow us