ಮಹಾರಾಷ್ಟ್ರ: ಗಂಟಲಲ್ಲಿ ಬಲೂನ್​ ಸಿಲುಕಿ 3 ವರ್ಷದ ಬಾಲಕ ಸಾವು

ಗಂಟಲಲ್ಲಿ ಬಲೂನ್ ಸಿಲುಕಿಕೊಂಡು 3 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪಾಲ್ಘಡದಲ್ಲಿ ನಡೆದಿದೆ. ಸಾವು ಎಂಬುದು ಅನಿರೀಕ್ಷಿತ, ಯಾವ ಸಂದರ್ಭದಲ್ಲಿ ಯಾರಿಗೆ ಏನಾಗುತ್ತೆ ಎಂಬುದು ತಿಳಿಯುವುದು ಕಷ್ಟ. ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗದ ಕಾರಣ ಮಗು ಪ್ರಾಣ ಕಳೆದುಕೊಂಡಿದೆ.

ಮಹಾರಾಷ್ಟ್ರ: ಗಂಟಲಲ್ಲಿ ಬಲೂನ್​ ಸಿಲುಕಿ 3 ವರ್ಷದ ಬಾಲಕ ಸಾವು
ಬಲೂನ್

Updated on: Nov 27, 2023 | 12:23 PM

ಗಂಟಲಲ್ಲಿ ಬಲೂನ್ ಸಿಲುಕಿಕೊಂಡು 3 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪಾಲ್ಘಡದಲ್ಲಿ ನಡೆದಿದೆ. ಸಾವು ಎಂಬುದು ಅನಿರೀಕ್ಷಿತ, ಯಾವ ಸಂದರ್ಭದಲ್ಲಿ ಯಾರಿಗೆ ಏನಾಗುತ್ತೆ ಎಂಬುದು ತಿಳಿಯುವುದು ಕಷ್ಟ. ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗದ ಕಾರಣ ಮಗು ಪ್ರಾಣ ಕಳೆದುಕೊಂಡಿದೆ.

ಸ್ವಲ್ಪ ಸಮಯದ ಹಿಂದಷ್ಟೇ ಮನೆಯ ಹೊರಗೆ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ಮಗು ಏಕಾಏಕಿ ಸಾವನ್ನಪ್ಪಿದ್ದು, ಪೋಷಕರು ಶೋಕಸಾಗರದಲ್ಲಿ ಮುಳುಗಿದ್ದಾರೆ.

ಬಾಲಕ ಸಂಜೆಯ ಸಮಯದಲ್ಲಿ ಸ್ನೇಹಿತರೊಂದಿಗೆ ಆಟವಾಡಿಕೊಂಡಿದ್ದ, ಇದ್ದಕ್ಕಿದ್ದಂತೆ ಆರೋಗ್ಯ ಹದಗೆಟ್ಟಿತ್ತು, ಹಾಗಾಗಿ ಮನೆಯಲ್ಲಿದ್ದವರೆಲ್ಲಾ ಭಯಗೊಂಡರು, ಏನಾಗುತ್ತಿದೆ ಎಂದು ಕೇಳಿದ್ದಾರೆ. ಆಟವಾಡುತ್ತಾ ಬಲೂನ್ ನುಂಗಿರುವ ವಿಚಾರವನ್ನು ಸ್ನೇಹಿತರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಬಲೂನ್​ಗಳಿಗೆ ಅನಿಲ​ ತುಂಬಿಸಲು ಬಳಸುತ್ತಿದ್ದ ಸಿಲಿಂಡರ್ ಸ್ಫೋಟ, ಓರ್ವ ಸಾವು, 9 ಮಕ್ಕಳಿಗೆ ಗಂಭೀರ ಗಾಯ

ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮಕ್ಕಳು ಆಟವಾಡುವಾಗ ಅವರು ಯಾವ ವಸ್ತುಗಳ ಜತೆ ಆಟವಾಡುತ್ತಿದ್ದಾರೆ ಎಂದು ಪೋಷಕರು ಗಮನಿಸುತ್ತಿರಬೇಕು, ಮಕ್ಕಳು ಬಾಯಿ ಏನನ್ನೂ ಹಾಕದಂತೆ ನೋಡಿಕೊಳ್ಳಬೇಕು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us