ಬಲೂನ್‌ಗಳಿಗೆ ಅನಿಲ ತುಂಬಿಸಲು ಬಳಸುತ್ತಿದ್ದ ಸಿಲಿಂಡರ್ ಸ್ಫೋಟ, ಓರ್ವ ಸಾವು, 9 ಮಕ್ಕಳಿಗೆ ಗಂಭೀರ ಗಾಯ
ಮಹಾರಾಷ್ಟ್ರದ ಲಾತೂರ್‌ನಲ್ಲಿ ಬಲೂನ್‌ಗಳಿಗೆ ಗ್ಯಾಸ್ ತುಂಬಿಸಲು ಬಳಸುತ್ತಿದ್ದ ಸಿಲಿಂಡರ್ ಸ್ಫೋಟಗೊಂಡು ಓರ್ವ ಸಾವನ್ನಪ್ಪಿದ್ದಾರೆ. ಬಲೂನ್ ಮಾರಾಟಗಾರರೊಬ್ಬರು ಭಾನುವಾರ ಸಾವನ್ನಪ್ಪಿದ್ದು, 9 ಮಕ್ಕಳು ಗಾಯಗೊಂಡಿದ್ದಾರೆ. ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ರಾಮ ನಾಮದೇವ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮಹಾರಾಷ್ಟ್ರದ ಲಾತೂರ್‌ನಲ್ಲಿ ಬಲೂನ್‌ಗಳಿಗೆ ಅನಿಲ ತುಂಬಿಸಲು ಬಳಸುತ್ತಿದ್ದ ಸಿಲಿಂಡರ್ ಸ್ಫೋಟಗೊಂಡು ಓರ್ವ ಸಾವನ್ನಪ್ಪಿದ್ದಾರೆ. ಬಲೂನ್ ಮಾರಾಟಗಾರರೊಬ್ಬರು ಭಾನುವಾರ ಸಾವನ್ನಪ್ಪಿದ್ದು, 9 ಮಕ್ಕಳು ಗಾಯಗೊಂಡಿದ್ದಾರೆ. ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ರಾಮ ನಾಮದೇವ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
70 ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿರುವ ಒಂಬತ್ತು ಮಕ್ಕಳಲ್ಲಿ ಒಬ್ಬ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಮಕ್ಕಳು ದಾಖಲಾಗಿರುವ ಆಸ್ಪತ್ರೆಯ ಡೀನ್ ನೀಡಿರುವ ಮಾಹಿತಿ ಪ್ರಕಾರ ಆಸ್ಪತ್ರೆಗೆ ದಾಖಲಾಗಿರುವ ಮಕ್ಕಳ ವಯಸ್ಸು 5 ರಿಂದ 12 ವರ್ಷ. ಭಾನುವಾರ ಸಂಜೆ 5. 30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದ ವ್ಯಕ್ತಿ ಅಯೂಬ್ ಶೇಖ್ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.
ತವರ್ಜಾ ಕಾಲೋನಿಯಲ್ಲಿರುವ ಮಸೀದಿಯೊಂದರ ಹೊರಗೆ ತನ್ನ ಸಾಮಾನುಗಳನ್ನು ಇಟ್ಟಿದ್ದ ಬಲೂನ್ ಮಾರಾಟಗಾರನ ಸುತ್ತಲೂ ಮಕ್ಕಳು ಕಿಕ್ಕಿರಿದು ಸೇರಿದ್ದರು. ಮಕ್ಕಳು ಗಲಾಟೆ ಮಾಡಿದ ಕಾರಣ ಮಸೀದಿಯೊಳಗೆ ನಮಾಜ್ ಮಾಡುತ್ತಿದ್ದ ಜನರು ವ್ಯಕ್ತಿಯನ್ನು ಸ್ಥಳಾಂತರಿಸುವಂತೆ ಕೇಳಿದ್ದರು.
ಮತ್ತಷ್ಟು ಓದಿ: ಬೆಂಗಳೂರಿನಲ್ಲಿ ಸಿಲಿಂಡರ್ ಸ್ಫೋಟ: ಓರ್ವ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಂಭೀರ ಗಾಯ
ನಂತರ ರಾಮ ನಾಮದೇವ್ ಮಸೀದಿಯ ಹಿಂದಿನ ಲೇನ್‌ಗೆ ಹೋದರು, ಅಲ್ಲಿ ಮಕ್ಕಳು ಅವರನ್ನು ಹಿಂಬಾಲಿಸಿದರು. ಇದ್ದಕ್ಕಿದ್ದಂತೆ ಮಸೀದಿಯ ಒಳಗಿದ್ದವರಿಗೆ ದೊಡ್ಡ ಶಬ್ದ ಕೇಳಿಸಿತು ಎಂದು ಅಯೂಬ್ ಶೇಖ್ ಹೇಳಿದ್ದಾರೆ.
ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ ಎಂದು ಅವರು ಶೀಘ್ರದಲ್ಲೇ ತಿಳಿದುಬಂದಿತ್ತು ಮತ್ತು ಗಾಯಗೊಂಡ ಮಕ್ಕಳು ಮತ್ತು ಸತ್ತ ಬಲೂನ್ ಮಾರಾಟಗಾರನನ್ನು ನೋಡಿದರು. ಅವರೆಲ್ಲರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ