AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಲಿಂಡರ್ ಸ್ಫೋಟಗೊಂಡು ಕಾರ್ಮಿಕನಿಗೆ ಗಂಭೀರ ಗಾಯ: ನೆರವಿಗೆ ಬಾರದ ಬೇಕರಿ ಮಾಲೀಕ

ತೆಲಂಗಾಣದಲ್ಲಿ ಸಿಲಿಂಡರ್ ಸ್ಪೋಟಗೊಂಡು ಗಂಭೀರ ಗಾಯಗೊಂಡ ಜಿಲ್ಲೆಯ ಸಕಲೇಶಪುರ ಮೂಲದ ಕಾರ್ಮಿಕನಿಗೆ ಚಿಕಿತ್ಸೆ ಕೊಡಿಸದೆ ಬೇಕರಿ ಮಾಲೀಕ ಅಮಾನವೀಯತೆ ತೋರಿರುವಂತಹ ಘಟನೆ ಒಂದು ಬೆಳಕಿದೆ ಬಂದಿದೆ.

ಸಿಲಿಂಡರ್ ಸ್ಫೋಟಗೊಂಡು ಕಾರ್ಮಿಕನಿಗೆ ಗಂಭೀರ ಗಾಯ: ನೆರವಿಗೆ ಬಾರದ ಬೇಕರಿ ಮಾಲೀಕ
ಯುವಕ ಅಭಿ
ಗಂಗಾಧರ​ ಬ. ಸಾಬೋಜಿ
|

Updated on:Jun 07, 2023 | 4:58 PM

Share

ಹಾಸನ: ತೆಲಂಗಾಣದಲ್ಲಿ ಸಿಲಿಂಡರ್ ಸ್ಪೋಟಗೊಂಡು (cylinder explosive) ಗಂಭೀರ ಗಾಯಗೊಂಡ ಜಿಲ್ಲೆಯ ಸಕಲೇಶಪುರ ಮೂಲದ ಕಾರ್ಮಿಕನಿಗೆ ಚಿಕಿತ್ಸೆ ಕೊಡಿಸದೆ ಬೇಕರಿ ಮಾಲೀಕ ಅಮಾನವೀಯತೆ ತೋರಿರುವಂತಹ ಘಟನೆ ಒಂದು ಬೆಳಕಿದೆ ಬಂದಿದೆ. ಅಭಿ ಗಾಯಗೊಂಡಿರುವ ಯುವಕ. ಹಾಲ್ತೋರೆ ಗ್ರಾಮದ ನಿವಾಸಿ ಪ್ರತಾಪ್‌ಗೌಡ ಮಾಲೀಕತ್ವದ ಬೇಕರಿಯಲ್ಲಿ ಯುವಕ ಕೆಲಸ ಮಾಡುತ್ತಿದ್ದ. ಅಭಿಯನ್ನು ತನ್ನ ಬೇಕರಿಯಲ್ಲಿ ಕೆಲಸಕ್ಕೆ ಇಟ್ಟುಕೊಂಡಿದ್ದ. ಜೂನ್​​ 2ರಂದು ಬೇಕರಿಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಅಭಿಗೆ ಗಂಭೀರವಾಗಿ ಗಾಯಗೊಂಡಿದ್ದು, 5 ಸಾವಿರ ಹಣ ನೀಡಿದ್ದ. ನಂತರ ಅಭಿಯನ್ನು ಬಲವಂತವಾಗಿ ಊರಿಗೆ ಕಳಿಸಿದ್ದ.

ಚಿಕಿತ್ಸಾ ವೆಚ್ಚ, ಪರಿಹಾರ ಕೊಡಿಸುವಂತೆ ಯುವಕ ಕಣ್ಣೀರು  

ಸದ್ಯ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಯುವಕ ಅಭಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಊಟ, ತಿಂಡಿ, ಔಷಧಿಗೆ ಹಣವಿಲ್ಲದೆ ಪರದಾಡುತ್ತಿದ್ದು, ನೆರವಿಗೆ ಬಾರದ ಬೇಕರಿ ಮಾಲೀಕ ಪ್ರತಾಪ್​ ಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಚಿಕಿತ್ಸಾ ವೆಚ್ಚ, ಪರಿಹಾರ ಕೊಡಿಸುವಂತೆ ಅಭಿ ಕಣ್ಣೀರು ಹಾಕಿದ್ದಾನೆ.

ಇದನ್ನೂ ಓದಿ: Chamarajanagar News: ಆಕಸ್ಮಿಕ ಬೆಂಕಿ ಅವಘಡ, ಹೊತ್ತಿ ಉರಿದ ಶಾಲೆ: ಪಠ್ಯ ಪುಸ್ತಕ, ಡೆಸ್ಕ್ ಬೆಂಕಿಗಾಹುತಿ​​

ಹಾಸನದ ಹರ್ಷಮಹಲ್ ರಸ್ತೆಯಲ್ಲಿರುವ 8 ವರ್ಷಗಳಿಂದ ಹಾಸನದ ಬಾಲ ಮಂದಿರದಲ್ಲಿ ಆಶ್ರಯ ಪಡೆದಿರುವ ಅಭಿ, ಎರಡು ತಿಂಗಳ ಹಿಂದಷ್ಟೇ ತೆಲಂಗಾಣದಲ್ಲಿ ಬೇಕರಿ ಕೆಲಸಕ್ಕೆ ಸೇರಿದ್ದ.

ಆಕಸ್ಮಿಕ ಬೆಂಕಿ: ಹೊತ್ತಿ ಉರಿದ ಶಾಲೆ  

ಚಾಮರಾಜನಗರ: ಆಕಸ್ಮಿಕ ಬೆಂಕಿಯಿಂದ ಹೊತ್ತಿ ಉರಿದ ಕರ್ನಾಟಕ ಪಬ್ಲಿಕ್ ಶಾಲೆ ಹೊತ್ತಿ ಉರಿದಿರುವಂತಹ ಘಟನೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನಡೆದಿದೆ. ಕಿಡಿಗೇಡಿಗಳಿಂದ ಸಿಗರೇಟ್ ಸೇದಿ ಶಾಲೆಯೊಳಗೆ ಬೀಸಾಡಿರುವ ಶಂಕೆ ವ್ಯಕ್ತವಾಗಿದ್ದು, ಪಠ್ಯ ಪುಸ್ತಕ, ಡೆಸ್ಕ್, ಕೊಠಡಿ, ಕಿಟಕಿ ಬಾಗಿಲುಗಳು ಬೆಂಕಿಗಾಹುತಿ ಆಗಿವೆ. ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್​ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ.

ಇದನ್ನೂ ಓದಿ: ಆನೇಕಲ್: ಅಣು ಬಾಂಬ್​ನಂತೆ ಸಿಡಿದ ಗ್ಯಾಸ್ ಸಿಲಿಂಡರ್; ಸ್ಫೋಟದ ಶಬ್ದಕ್ಕೆ ಬೆಚ್ಚಿ ಬಿದ್ದ ಬಡಾವಣೆ ಜನ!

ಕಾವಲು ಅರಣ್ಯದಲ್ಲಿ ಆಕಸ್ಮಿಕ ಬೆಂಕಿ

ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಬಳಿ ವರವು ಕಾವಲು ಅರಣ್ಯದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಹಲವು ಗಿಡ, ಮರಗಳು ಬೆಂಕಿಗಾಹುತಿಯಾಗಿದೆ. ತಡರಾತ್ರಿವರೆಗೆ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:49 pm, Wed, 7 June 23

Follow Us
Gangadhar Saboji
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More