ನಿಗೂಢ ಬಾಹುಬಲಿ! ಯಕ್ಷಿಣಿಯ ಕಥೆ ಮತ್ತು ಗುಳ್ಳೆಕಾಯಿ ಅಜ್ಜಿ ಸೂಚಿಸುವ ಕುರುಹುಗಳು ಏನು? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ!

Gomateshwara statue:  ಬಾಹುಬಲಿ ವಿಗ್ರಹ ಕೆತ್ತಲು ಬಳಸಿರುವುದು ಬಿಳಿಯ ಶಿಲೆ. ವಿಂಧ್ಯಗಿರಿ ಸುತ್ತಮುತ್ತಲ ಬೆಟ್ಟಗಳಲ್ಲಿ ಇರುವುದು ಕಪ್ಪು ಶಿಲೆಗಳು. ಹಾಗಾದರೆ 1,000 ಟನ್ ತೂಕದ ಗೋಮ್ಮಟೇಶ್ವನ ವಿಗ್ರಹ ಅಲ್ಲಿಗೆ ಬಂದಿದ್ದಾರೂ ಹೇಗೆ?

ನಿಗೂಢ ಬಾಹುಬಲಿ! ಯಕ್ಷಿಣಿಯ ಕಥೆ ಮತ್ತು ಗುಳ್ಳೆಕಾಯಿ ಅಜ್ಜಿ ಸೂಚಿಸುವ ಕುರುಹುಗಳು ಏನು? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ!
ನಿಗೂಢ ಬಾಹುಬಲಿ!
Follow us
ಸಾಧು ಶ್ರೀನಾಥ್​
|

Updated on: Jun 07, 2023 | 4:30 AM

ಪ್ರಪಂಚದಲ್ಲಿ ಅತಿ ದೊಡ್ಡದಾದ ಏಕಶಿಲಾ ವಿಗ್ರಹ ಬಾಹುಬಲಿಯದು (Bahubali sculpture)! ಕರ್ನಾಟಕದ ಶ್ರವಣಬೆಳಗೊಳದ ವಿಂಧ್ಯ ಗಿರಿಯ ಮೇಲೆ ಮಳೆ ಗಾಳಿ ಬಿಸಿಲು ಸಿಡಿಲು ಎಲ್ಲಕ್ಕೂ ತೆರೆದುಕೊಂಡು ನೆಲದಿಂದ ಸುಮಾರು 600 ಅಡಿ ಎತ್ತರದಲ್ಲಿ ನಿಂತಿದೆ. 58 ಅಡಿ ಎತ್ತರ, ಪಾದದ ಬಳಿ ಸುಮಾರು 40 ಅಡಿ ಅಗಲ ಮತ್ತು ಸುಮಾರು 1,000 ಟನ್ ತೂಕವುಳ್ಳ ಈ ಗೋಮ್ಮಟೇಶ್ವನ (Gomateshwara statue) ವಿಗ್ರಹವನ್ನು ಕೆತ್ತಿಸಿದ್ದು ಶ್ರೀ ಚಾವುಂಡರಾಯ, ಕೆತ್ತಿದ ಶಿಲ್ಪಿಯ ಬಗ್ಗೆ ಯಾವುದೇ ಉಲ್ಲೇಖಗಳು ಎಲ್ಲಿಯೂ ಕಂಡು ಬರುವುದಿಲ್ಲ.

ಸಾವಿರ ಟನ್ ತೂಕವುಳ್ಳ ಬಾಹುಬಲಿಯ ವಿಗ್ರಹವನ್ನು ಅಷ್ಟು ಎತ್ತರಕ್ಕೆ ಸಾಗಿಸಿದ್ದು ಹೇಗೆ?

ಅಲ್ಲಿರುವ ಪಂಡಿತರು ಹೇಳುವುದು ಅಲ್ಲಿಯೇ ಇದ್ದ ಶಿಲೆಯನ್ನು ಉಪಯೋಗಿಸಿಕೊಂಡು ಜೈನ ಧರ್ಮದ ಬಾಹುಬಲಿಯ ವಿಗ್ರಹವನ್ನು ಕೆತ್ತಿದ್ದಾರೆ. ಆದರೆ ಬಾಹುಬಲಿಯನ್ನು ಕೆತ್ತಲು ಬಳಸಿರುವ ಶಿಲೆಯು ಬಿಳಿಯದ್ದಾಗಿದೆ. ವಿಂಧ್ಯಗಿರಿ ಮತ್ತು ಅದರ ಸುತ್ತಮುತ್ತಲೂ ಇರುವ ಎಲ್ಲಾ ಬೆಟ್ಟಗಳಲ್ಲಿ ಕಂಡುಬರುವುದು ಕಪ್ಪು ಶಿಲೆಗಳು. ವಿಂಧ್ಯಗಿರಿಯ ಮೇಲೆ ನಿಂತು ನೋಡಿದರೆ ನಮಗೆ ಬಿಳಿಯ ಶಿಲೆಯು ಕಣ್ಣು ಹಾಯಿಸಿದಷ್ಟು ದೂರದಲ್ಲೆಲ್ಲೂ ಕಂಡು ಬರುವುದಿಲ್ಲ.

ಬದಲಾಗಿ ಚಾವುಂಡರಾಯನಿಗೆ ಕನಸಿನಲ್ಲಿ ಬಂದ ಯಕ್ಷಿಣಿ (Yakshini), ಚಿಕ್ಕ ಬೆಟ್ಟದ ಮೇಲೆ ನಿಂತು ದೊಡ್ಡ ಬೆಟ್ಟಕ್ಕೆ ಬಾಣವನ್ನು ಬಿಡು ಅಲ್ಲಿ ನಿಮಗೆ ಬಾಹುಬಲಿಯ ದರ್ಶನವಾಗುತ್ತದೆ ಎಂದು ಹೇಳುತ್ತಾಳೆ. ಅದರಂತೆ ಚಾವುಂಡರಾಯನು ಒಂದು ಬಾಣವನ್ನು ಬಿಟ್ಟನು. ಆಗ ಅಲ್ಲಿದ್ದ ಶಿಲೆಯ ಮೇಲೆ ಬಾಹುಬಲಿಯ ಸುಂದರವಾದ ಚಿತ್ರವು ಮೂಡಿತು. ನಂತರ ಚಾವುಂಡರಾಯನು ಮಹಾ ಶಿಲ್ಪಿಯನ್ನು ಕರೆಸಿ ಬಾಹುಬಲಿಯ ವಿಗ್ರಹವನ್ನು ಕೆತ್ತಿಸಿದ ಎನ್ನುವ ಕಥೆಯೊಂದನ್ನು ಅಲ್ಲಿ ಬರೆದಿದ್ದಾರೆ.

ತಮಾಷೆಯೆಂದರೆ ಇಂದಿಗೂ ಸಹ ಸುಮಾರು 20 ಕಿಲೋ ಮೀಟರ್ ದೂರದಿಂದಲೂ ಬಾಹುಬಲಿಯನ್ನು ನೋಡಬಹುದಾಗಿದೆ. ಬಾಹುಬಲಿಯನ್ನು ಅಲ್ಲಿರುವ ಶಿಲೆಯಲ್ಲಿಯೇ ಕೆತ್ತಿದ್ದಾರೆ ಎಂತಾದರೆ ಅದು ಕಡಿಮೆ ಎಂದರೂ 57 ಅಡಿಗಳಿಗಿಂತ 5-10 ಅಡಿಯಾದರೂ ಹೆಚ್ಚು ಉದ್ದವಾಗಿರಬೇಕು. ಅಂದರೆ ಅದನ್ನು ಮತ್ತೊಂದು ಬೆಟ್ಟ ಹತ್ತಿ ನೋಡುವ ಅವಶ್ಯಕತೆ ಇರಲಿಲ್ಲ.

ಚಾವುಂಡರಾಯನು ಶಿಲ್ಪವನ್ನು ಕೆತ್ತಿಸಿದ ನಂತರ ಅದಕ್ಕೆ ಮಹಾಮಸ್ತಾಕಾಭಿಷೇಕವಾಗಿ ಬಾಹುಬಲಿಯ ತಲೆಯ ಮೇಲಿನಿಂದ 1008 ಕಲಶಗಳಿಂದ ನೀರು, ಹಾಲು, ಕಬ್ಬಿನ ಹಾಲು, ಗಂಧ ಮತ್ತು ಕೇಸರಿಗಳನ್ನು ಅಭಿಷೇಕ ಮಾಡಿದನು. ಆದರೆ ಅದು ತಲೆಯಿಂದ ಪಾದದವರೆಗೂ ಪೂರ್ಣಾಭಿಷೇಕವಾಗಲಿಲ್ಲ.

ಆದರೆ ಗುಳ್ಳಕಾಯಿ (Gullekai) ಅಜ್ಜಿಯೊಬ್ಬಳು ಒಂದು ಸಣ್ಣ ಪಾತ್ರೆಯಲ್ಲಿ ಹಾಲನ್ನು ತಂದು ಮಾಡುವ ಅಭಿಷೇಕದಿಂದ ಬಾಹುಬಲಿಯ ತಲೆಯಿಂದ ಕಾಲಿನವರೆಗೂ ಅಭಿಷೇಕವಾಗುತ್ತದೆ. ಇದರಿಂದ ಚಾವುಂಡರಾಯನಿಗೆ ತಾನೇ ಬಾಹುಬಲಿಯ ವಿಗ್ರಹವನ್ನು ಮಾಡಿಸಿದ್ದು ಎಂಬ ಅಹಂಕಾರವೂ ನಾಶವಾಯಿತು ಎಂದು ಹೇಳುವ ಮತ್ತೊಂದು ಕತೆಯನ್ನು ಸಹ ಅಲ್ಲಿಯೇ ಬರೆದಿದ್ದಾರೆ. ಮತ್ತು ಗುಳ್ಳೆಕಾಯಿ ಅಜ್ಜಿಯ ವಿಗ್ರಹವನ್ನು ಸಹ ಬಾಹುಬಲಿಯ ವಿಗ್ರಹದ ಮುಂದೆ ನಿಲ್ಲಿಸಿದ್ದಾರೆ.

ಆಶ್ಚರ್ಯವೆಂದರೆ ಗುಳ್ಳೆಕಾಯಿ ಅಜ್ಜಿಯ ಕೈಗಳಲ್ಲಿ ಒಂದು ವಿಚಿತ್ರವಾದ ವಸ್ತುವನ್ನು ತೋರಿಸಿದ್ದಾರೆ. ಆದರೆ ಆ ವಸ್ತುವು ಅಜ್ಜಿಯ ಎರಡು ಕೈಗಳ ಮಧ್ಯದಲ್ಲಿ ಗಾಳಿಯಲ್ಲಿ ತೇಲುವಂತೆ ಕೆತ್ತಿದ್ದಾರೆ.

ಯಕ್ಷಿಣಿಯ ಕಥೆ ಮತ್ತು ಗುಳ್ಳೆಕಾಯಿ ಅಜ್ಜಿಯ ವಿಗ್ರಹದ ರೂಪದಲ್ಲಿ ಸೂಚ್ಯವಾಗಿ ನಮಗೆ ಕುರುಹುಗಳನ್ನು ಬಿಟ್ಟಿದ್ದಾರೆಯೇ? ಹೌದು!! ಖ್ಯಾತ ಸಂಶೋದಕ ಪ್ರವೀಣ್​ ಮೋಹನ್​ ಅವರ ಪ್ರಕಾರ ಅವುಗಳನ್ನು ಜೊತೆಯಲ್ಲಿ ನೋಡಿದಾಗ ಬಹುಶಃ ಬಾಹುಬಲಿಯ ವಿಗ್ರಹವನ್ನು ಚಿಕ್ಕ ಬೆಟ್ಟದಿಂದ ದೊಡ್ಡ ಬೆಟ್ಟಕ್ಕೆ ಆಯಸ್ಕಾಂತೀಯ ಚಿಮ್ಮುವಿಕೆಯ (Magnetic Levitation) ಮೂಲಕ ಅಥವಾ ಗಾಳಿಯಲ್ಲಿ ತೇಲಿಸಿಕೊಂಡು ವಿಗ್ರಹವನ್ನು ಸಾಗಿಸಿರಬಹುದು!

ಅಂತಹ ಒಂದು ತಾಂತ್ರಿಕ ಕೌಶಲ್ಯ 1,000 ವರ್ಷಗಳ ಹಿಂದೆಯೇ ನಮ್ಮ ಹಿರಿಯರಿಗೆ ಇತ್ತು ಎಂದರೆ ಬಾಹುಬಲಿಯ ವಿಗ್ರಹವನ್ನು ನಿರ್ಮಿಸಲು ಯಂತ್ರೋಪಕರಣಗಳನ್ನು ಸಹ ಬಳಸಿರಬೇಕು!

ಈ ಬೃಹದಾಕಾರವಾದ ವಿಗ್ರಹದ ಮಧ್ಯ ಭಾಗದಲ್ಲಿ ಒಂದು ಗೆರೆಯನ್ನು ಹಾಕಿ ಎರಡು ಕಡೆಯ ಭಾಗಗಳನ್ನು ಬಿಡಿ ಬಿಡಿಯಾಗಿ ನೋಡಿದಾಗ ವಿಗ್ರಹದ ಮೊದಲ ಅರ್ಧ ಭಾಗವು ಕನ್ನಡಿಯ ಪ್ರತಿಬಿಂಬದಂತೆ ಮತ್ತೊಂದು ಅರ್ಧ ಭಾಗವು ಕಾಣಿಸುತ್ತದೆ. ಆದರೆ ಎಡಗೈನ ತೋರುಬೆರಳು ಬಲಗೈನ ತೋರುಬೆರಳಿಗಿಂತ ಸ್ವಲ್ಪ ಗಿಡ್ಡವಾಗಿದೆ. ಅದು ಬಿಟ್ಟರೆ ಇಷ್ಟು ಬೃಹದಾಕಾರದ ವಿಗ್ರಹವನ್ನು ಕೆತ್ತುವಲ್ಲಿ ಶಿಲ್ಪಿಯ ಮಾನವ ಸಹಜವಾದ ಯಾವುದೇ ತಪ್ಪುಗಳು ಕಂಡು ಬರುವುದಿಲ್ಲ ಮತ್ತು ಪ್ರತಿಯೊಂದು ಅಂಗಾಂಗಗಳನ್ನು ಬಹಳ ವಿವರವಾಗಿ ಕೆತ್ತಿದ್ದಾನೆ, ಕಣ್ಣಿನ ಒಳಭಾಗದಲ್ಲಿ ಪಿಸಿರುಗುಡ್ಡೆಯು ಸಹ ಸ್ಪಷ್ಟವಾಗಿ ಕಾಣಿಸುತ್ತದೆ. ಈ ತೋರು ಬೆರಳಿನ ವ್ಯತ್ಯಾಸವನ್ನು ಸಹ ಸ್ಥಳೀಯರು ಲೋಪವೆಂದು ಒಪ್ಪಿಕೊಳ್ಳುವುದಿಲ್ಲ. ಅವರ ಪ್ರಕಾರ ವಿಗ್ರಹವನ್ನು ವಿನ್ಯಾಸಗೊಳಿಸಿರುವುದೆ ಹಾಗೆ, ಕೆಟ್ಟ ದೃಷ್ಟಿಯಿಂದ ಕಾಪಾಡಲು!

ಬಾಹುಬಲಿಯ ವಿಗ್ರಹದ ಕಾಲಿನ ಮೇಲೆ ಬಳ್ಳಿ ಹಬ್ಬಿದಂತೆ ತೋರಿಸಿರುವ ಕೆತ್ತನೆಯಲ್ಲಿ ಎಲೆಯನ್ನು ಮತ್ತು ಎಲೆಯೊಳಗಿನ ಮಧ್ಯದ ದಿಂಡನ್ನು ಹಾಗು ಎಲೆಯ ಸಿರೆಯನ್ನು ಸಹ ಸ್ಪಷ್ಟವಾಗಿ ಮತ್ತು ಅದ್ಭುತವಾಗಿ ಕೆತ್ತಿದ್ದಾರೆ.

ಇದನ್ನೆಲ್ಲಾ ಅಷ್ಟು ಸೂಕ್ಷ್ಮವಾಗಿ 1,000 ವರ್ಷಗಳ ಹಿಂದೆಯೇ ಶಿಲ್ಪಿ ಅಷ್ಟು ವಿವರವಾಗಿ ಕೆತ್ತಿದ್ದು ಹೇಗೆ?

ಸಾಮಾನ್ಯ ಉಳಿ ಸುತ್ತಿಗೆಗಳಿಂದ, ಅತ್ಯಾಧುನಿಕ ಉಪಕರಣಗಳಿಲ್ಲದೆ?? ಅಂತಹ ಬೃಹದಾಕಾರದ ಸುಂದರವಾದ ವಿಗ್ರಹವನ್ನು ಕೆತ್ತಲು ಸಾಧ್ಯವೇ? ಬಾಹುಬಲಿಯ ವಿಗ್ರಹದ ಅಕ್ಕಪಕ್ಕದಲ್ಲಿ ಇರುವ ಯಕ್ಷ ಮತ್ತು ಯಕ್ಷಿಣಿಯ ವಿಗ್ರಹಗಳ ಕೈಗಳಲ್ಲಿ ಹಿಡಿದಿರುವ ವಸ್ತುಗಳು ಏನು? ಅವುಗಳು ಇಂದು ಶಿಲೆಯನ್ನು ಹೊಳಪು ಮಾಡಲು ನಾವು ಉಪಯೋಗಿಸುವ ಅತ್ಯಾಧುನಿಕ ಉಪಕರಣಗಳ ಮಾದರಿಯಲ್ಲಿರುವುದು ಕೇವಲ ಕಾಕತಾಳೀಯವೇ? ಅಥವಾ ನಮ್ಮ ಹಿರಿಯರು ಇಂತಹ ಉಪಕರಣಗಳನ್ನು ಒಂದು ಸಾವಿರ ವರ್ಷಗಳ ಹಿಂದೆಯೇ ಉಪಯೋಗಿಸುತ್ತಿದ್ದರೇ?

ಬಾಹುಬಲಿಯ ವಿಗ್ರಹ ಇಂದಿಗೂ ತನ್ನ ಹೊಳಪು ಕಳೆದುಕೊಳ್ಳದೆ ಇರುವುದು ಹೇಗೆ?

1,000 ವರ್ಷಗಳ ಹಿಂದಿನ ವಿಗ್ರಹ ನಿನ್ನೆ ಮೊನ್ನೆ ಕೆತ್ತಿರುವುದರಂತೆ ತಾಜಾತನದಿಂದಕಾಣುತ್ತಿದೆ. ಸ್ವಲ್ಪ ಸುತ್ತ ಗಮನಿಸಿ ನೋಡಿದರೆ ಬಾಹುಬಲಿಯ ವಿಗ್ರಹವೊಂದನ್ನು ಬಿಟ್ಟು ಸುತ್ತಲಿರುವ ಎಲ್ಲಾ ಶಿಲೆಗಳು ತಮ್ಮ ಹೊಳಪನ್ನು ಕಳೆದುಕೊಂಡಿವೆ ಮತ್ತು ವ್ಯತ್ಯಾಸ ಕಣ್ಣಿಗೆ ಎದ್ದು ಕಾಣಿಸುತ್ತದೆ.

ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕದಲ್ಲಿ ನೀರು, ಹಾಲು, ಕಬ್ಬಿನ ಹಾಲು, ಗಂಧ ಮತ್ತು ಕೇಸರಿ ಮುಂತಾದವುಗಳಿಂದ ಅಭಿಷೇಕವನ್ನು ಮಾಡುತ್ತಾರೆ. ಮಹಾಮಸ್ತಕಾಭಿಷೇಕಕ್ಕೆ ಉಪಯೋಗಿಸುವ ಈ ಪದಾರ್ಥಗಳು ಬಾಹುಬಲಿಯ ವಿಗ್ರಹ ಇಂದಿಗೂ ತನ್ನ ಹೊಳಪು ಕಳೆದುಕೊಳ್ಳದೆ ಇರುವಂತೆ ಕಾಪಾಡುತ್ತಿವೆ. ಇಂತಹ ಒಂದು ಶಿಲೆಯ ರಕ್ಷಣೆಯ ವಿದ್ಯೆಯನ್ನು ನಮ್ಮ ಹಿರಿಯರಿಗೆ ಹೇಳಿಕೊಟ್ಟಿದ್ದು ಯಾರು? Leonardo da Vinci ಚಿತ್ರಿಸಿರುವ ಮೋನಾಲಿಸಾಳ ನಗು ನಿಗೂಢವಾಗಿರುವ ಮಾದರಿಯಲ್ಲಿ, ಬಾಹುಬಲಿಯ ಮುಖದ ಮೇಲಿರುವ ಸುಂದರ ಮುಗುಳ್ನಗೆಯು ಬಹುಶಃ ಎಲ್ಲಾ ಪಂಡಿತರಿಗೂ ಅರ್ಥವಾಗಿರಬೇಕು!

ಲೇಖನ ಮಾಹಿತಿ: ಪಿ ಎನ್​​ ಬಸವಣ್ಣ

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ