ಥಾಣೆಯಲ್ಲಿ ನವರಾತ್ರಿ ಮೆರವಣಿಗೆ ವೇಳೆ ಘರ್ಷಣೆ; ಪಟಾಕಿ ಸಿಡಿದು 4 ಮಂದಿಗೆ ಗಾಯ, ಕಲ್ಲು ತೂರಾಟ
ಮೆರವಣಿಗೆ ವೇಳೆ ಯಾರೋ ಅಜಾಗರೂಕತೆಯಿಂದ ಪಟಾಕಿ ಸಿಡಿಸಿದ್ದರಿಂದ ಸುತ್ತಮುತ್ತಲಿನವರಿಗೆ ತಗುಲಿ ನಾಲ್ವರಿಗೆ ತೀವ್ರ ಸುಟ್ಟ ಗಾಯಗಳಾಗಿವೆ. ಅವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಜಗಳದ ವೇಳೆ ಕಲ್ಲು ತೂರಾಟದಲ್ಲಿ ವ್ಯಕ್ತಿಯೊಬ್ಬರು ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ ಎಂದು ನ್ಯೂಸ್ 9 ವರದಿ ಮಾಡಿದೆ.
ಥಾಣೆ ಅಕ್ಟೋಬರ್ 16: ಮಹಾರಾಷ್ಟ್ರದ (Maharashtra) ಥಾಣೆಯಲ್ಲಿ (Thane) ದುರ್ಗಾ ಮಾತೆಯ ಮೂರ್ತಿಯನ್ನು ಹೊತ್ತ ನವರಾತ್ರಿ ಮೆರವಣಿಗೆ (Navratri procession) ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿರುವುದು ವರದಿ ಆಗಿದೆ. ಸಂಭ್ರಮಾಚರಣೆ ವೇಳೆ ಪಟಾಕಿ ಸಿಡಿದು ನಾಲ್ವರಿಗೆ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಈ ಸಂಬಂಧ ಶ್ರೀನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ನವರಾತ್ರಿ ಆಚರಣೆಯ ಅಂಗವಾಗಿ ಕೆಲವರು ಮೂರ್ತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಿದ್ದಾಗ ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ವಾಗ್ಲೆ ಎಸ್ಟೇಟ್ನ ಹನುಮಾನ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ದುರ್ಗಾ ದೇವಿಗೆ ಅರ್ಪಿತವಾದ ಒಂಬತ್ತು ದಿನಗಳ ಹಿಂದೂ ಹಬ್ಬವು ಭಾನುವಾರ ಪ್ರಾರಂಭವಾಗಿದೆ. ಘಟನೆಯ ವೇಳೆ ಕಲ್ಲು ತೂರಾಟ ನಡೆದಿದ್ದು, ಇದಲ್ಲಿ ಒಬ್ಬ ವ್ಯಕ್ತಿಗೆ ಗಾಯಗಳಾಗಿವೆ ಎಂದು ಶ್ರೀನಗರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಎಫ್‌ಐಆರ್ ಅನ್ನು ಉಲ್ಲೇಖಿಸಿ ತಿಳಿಸಿದ್ದಾರೆ.
ಮೆರವಣಿಗೆ ವೇಳೆ ಕಲ್ಲು ತೂರಾಟ
ಮೆರವಣಿಗೆ ವೇಳೆ ಯಾರೋ ಅಜಾಗರೂಕತೆಯಿಂದ ಪಟಾಕಿ ಸಿಡಿಸಿದ್ದರಿಂದ ಸುತ್ತಮುತ್ತಲಿನವರಿಗೆ ತಗುಲಿ ನಾಲ್ವರಿಗೆ ತೀವ್ರ ಸುಟ್ಟ ಗಾಯಗಳಾಗಿವೆ. ಅವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಜಗಳದ ವೇಳೆ ಕಲ್ಲು ತೂರಾಟದಲ್ಲಿ ವ್ಯಕ್ತಿಯೊಬ್ಬರು ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ ಎಂದು ನ್ಯೂಸ್ 9 ವರದಿ ಮಾಡಿದೆ.
ಸಂತ್ರಸ್ತರ ದೂರುಗಳ ಆಧಾರದ ಮೇಲೆ, 12 ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 143 (ಕಾನೂನುಬಾಹಿರ ಸಭೆ), 147 (ಗಲಭೆ), 337 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯದಿಂದ ನೋವುಂಟುಮಾಡುವುದು) ಮತ್ತು 283 ಸಾರ್ವಜನಿಕ ಮಾರ್ಗಕ್ಕೆ ಅಡಚಣೆ ಉಂಟು ಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಬಲೂನ್ಗಳಿಗೆ ಅನಿಲ ತುಂಬಿಸಲು ಬಳಸುತ್ತಿದ್ದ ಸಿಲಿಂಡರ್ ಸ್ಫೋಟ, ಓರ್ವ ಸಾವು, 9 ಮಕ್ಕಳಿಗೆ ಗಂಭೀರ ಗಾಯ
ಕಳೆದ ವರ್ಷ, ನವರಾತ್ರಿ ಆಚರಣೆಯ ಸಂದರ್ಭದಲ್ಲಿ ಮಹಾರಾಷ್ಟ್ರ, ಗುಜರಾತ್ ಮತ್ತು ಮಧ್ಯಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಹಲವಾರು ಕೋಮು ಘರ್ಷಣೆಯ ಘಟನೆಗಳು ವರದಿಯಾಗಿದ್ದವು. ಘರ್ಷಣೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದರು.
ನವರಾತ್ರಿ ರಥೋತ್ಸವದಲ್ಲಿ ಪಾಲ್ಗೊಂಡ ಸಿಎಂ ಶಿಂಧೆ
ಮಹಾರಾಷ್ಟ್ರದ ಜನತೆ ಬುದ್ಧಿವಂತರಾಗಿದ್ದು, 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭರ್ಜರಿ ಬಹುಮತ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಭಾನುವಾರ ಹೇಳಿದ್ದಾರೆ. ನವರಾತ್ರಿಯ ಮೊದಲ ದಿನ ದುರ್ಗಾ ಮಾತೆಯ ರಥೋತ್ಸವದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷಗಳು ಜನಮನದಲ್ಲಿ ಉಳಿಯಲು ಮತ್ತು ಗಮನ ಸೆಳೆಯಲು ಮೋದಿ ಅವರನ್ನು ಟೀಕಿಸುತ್ತವೆ.
#WATCH | Maharashtra CM Eknath Shinde and his son and MP Dr Shrikant Shinde participate in a Shardiya Navratri Utsav procession in Thane. pic.twitter.com/mIWXTecaFy
— ANI (@ANI) October 15, 2023
ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಹಿಂದುತ್ವದ ಬಗ್ಗೆ ಮಾತನಾಡುವವರು ಕಾಂಗ್ರೆಸ್‌ನಂತಹ ಪಕ್ಷಗಳೊಂದಿಗೆ ಕೈಜೋಡಿಸಲು ಅವರಿಗೆ ಯಾವುದೇ ಸಂಕೋಚವಿಲ್ಲ. ಮುಂಬರುವ ಚುನಾವಣೆಯಲ್ಲಿ ಇಂತಹ ವ್ಯಕ್ತಿಗಳ ನಕಲಿ ಹಿಂದುತ್ವದ ಮುಖವಾಡಗಳನ್ನು ಜನತೆ ಕಿತ್ತೊಗೆಯಲಿದ್ದಾರೆ ಎಂದು ಶಿಂಧೆ ಹೇಳಿದರು.
ಮನೆಯಲ್ಲಿ ಕುಳಿತು ಚುನಾವಣೆ ಗೆಲ್ಲಲು ಯಾರಿಂದಲೂ ಸಾಧ್ಯವಿಲ್ಲ. ಕ್ಷೇತ್ರಕಾರ್ಯವನ್ನು ಮಾಡಬೇಕು, ನಾಗರಿಕರೊಂದಿಗೆ ಇದ್ದು ಅವರ ಸಮಸ್ಯೆಗಳನ್ನು ಪರಿಹರಿಸಬೇಕು. ಪ್ರಜೆಗಳಿಗೆ ದ್ರೋಹ ಬಗೆದವರಿಗೆ ಮತ್ತು ಕಾಂಗ್ರೆಸ್ ಜೊತೆ ಕೈಜೋಡಿಸಿರುವವರಿಗೆ ತಾವು ಹಿಂದುತ್ವವನ್ನು ರಕ್ಷಿಸುತ್ತೇವೆ ಎಂದು ಹೇಳಿಕೊಳ್ಳುವ ಯಾವುದೇ ಹಕ್ಕಿಲ್ಲ ಎಂದು ಠಾಕ್ರೆ ವಿರುದ್ಧ ಶಿಂಧೆ ವಾಗ್ದಾಳಿ ನಡೆಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:17 pm, Mon, 16 October 23