ತಮಿಳುನಾಡಿನಲ್ಲಿ ಮಳೆಯಿಂದಾಗಿ ಸಮುದಾಯ ಭವನದ ಮೇಲ್ಛಾವಣಿ ಕುಸಿತ, 3 ಮಂದಿ ಸಾವು

ತಮಿಳುನಾಡಿನ ತಿರುಪ್ಪುರ್ ಜಿಲ್ಲೆಯಲ್ಲಿ ಸಮುದಾಯ ಭವನದ ಮೇಲ್ಛಾವಣಿ ಕುಸಿದು ಮೂವರು ಸಾವನ್ನಪ್ಪಿದ್ದಾರೆ. ಬಸ್ಸಿಗಾಗಿ ಕಾಯುತ್ತಿದ್ದಾಗ ಜೋರು ಮಳೆ ಸುರಿಯಲಾರಂಭಿಸಿದ ಹಿನ್ನೆಲೆಯಲ್ಲಿ ಮೂವರು ಸಮುದಾಯ ಭವನದೊಳಗೆ ಆಶ್ರಯ ಪಡೆದಿದ್ದರು. ಮೃತ ಮೂವರನ್ನು ಮುರಳಿ, ಮಣಿಕಂದನ್ ಮತ್ತು ಗೌತಮ್ ಎಂದು ಗುರುತಿಸಲಾಗಿದೆ.

ತಮಿಳುನಾಡಿನಲ್ಲಿ ಮಳೆಯಿಂದಾಗಿ ಸಮುದಾಯ ಭವನದ ಮೇಲ್ಛಾವಣಿ ಕುಸಿತ, 3 ಮಂದಿ ಸಾವು
ಸಮುದಾಯ ಭವನImage Credit source: India Today
Follow us
ನಯನಾ ರಾಜೀವ್
|

Updated on:Oct 16, 2023 | 2:07 PM

ತಮಿಳುನಾಡಿನ ತಿರುಪ್ಪುರ್ ಜಿಲ್ಲೆಯಲ್ಲಿ ಸಮುದಾಯ ಭವನದ ಮೇಲ್ಛಾವಣಿ ಕುಸಿದು ಮೂವರು ಸಾವನ್ನಪ್ಪಿದ್ದಾರೆ. ಬಸ್ಸಿಗಾಗಿ ಕಾಯುತ್ತಿದ್ದಾಗ ಜೋರು ಮಳೆ ಸುರಿಯಲಾರಂಭಿಸಿದ ಹಿನ್ನೆಲೆಯಲ್ಲಿ ಮೂವರು ಸಮುದಾಯ ಭವನದೊಳಗೆ ಆಶ್ರಯ ಪಡೆದಿದ್ದರು. ಮೃತ ಮೂವರನ್ನು ಮುರಳಿ, ಮಣಿಕಂದನ್ ಮತ್ತು ಗೌತಮ್ ಎಂದು ಗುರುತಿಸಲಾಗಿದೆ.

ಅಲ್ಲಿದ್ದವರು ಅವಶೇಷಗಳಿಂದ ಹೊರತೆಗೆದು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದಿಂಡಿಗಲ್​ನಲ್ಲಿರುವ ಕೊಡೈಕೆನಾಲ್​ನಲ್ಲಿ 30 ಮಿ.ಮೀ ಮಳೆಯಾಗಿದೆ. ಕಾಂಚಿಪುರಂನಲ್ಲಿ 11.5 ಮಿ.ಮೀ ಮಳೆಯಾಗಿದೆ.

ಈಶಾನ್ಯ ಮಾರುತಗಳು ಅಕ್ಟೋಬರ್ 18ರಂದು ತಮಿಳುನಾಡು ಪ್ರವೇಶಿಸುವ ನಿರೀಕ್ಷೆ ಇದೆ. ಈ ವರ್ಷ ಮುಂಗಾರು ಸರಾಸರಿಗಿಂತ ಕಡಿಮೆ ಇರುತ್ತದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ನೈಋತ್ಯ ಮುಂಗಾರು ಜೂನ್​ 1 ರಂದು ಒಂದು ವಾರದ ನಂತರ ಜೂನ್ 8 ರಂದು ಆಗಮಿಸಿತು. ತಮಿಳುನಾಡಿನ ಕರಾವಳಿ ಪ್ರದೇಶಗಳಲ್ಲಿ ಕಡಿಮೆ ವಾತಾವರಣದ ಪರಿಚಲನೆ ಉಂಟಾಗಿರುವುದರಿಂದ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನ ಕೆಲವು ಸ್ಥಳಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಹಗುರದಿಂದ ಸಾಧಾರಣ ಮಳೆಯಾಗಬಹುದು ಎಂದು ಚೆನ್ನೈ ವಲಯ ಹವಾಮಾನ ಕೇಂದ್ರ ತಿಳಿಸಿದೆ.

ಮತ್ತಷ್ಟು ಓದಿ: Karnataka Rain: ಕೊಡಗು, ಶಿವಮೊಗ್ಗ ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಕಡೆ ಜೋರಾಗಲಿದೆ ವರುಣನ ಆರ್ಭಟ

ಮುಂದಿನ 3 ಗಂಟೆಗಳಲ್ಲಿ ನೀಲಗಿರಿ, ಕೊಯಮತ್ತೂರು, ಈರೋಡ್, ತಿರುಪುರ್, ಥೇಣಿ, ದಿಂಡಿಗಲ್, ತೆಂಕಶಿ, ತಿರುನಲ್ವೇಲಿ, ಕನ್ಯಾಕುಮಾರಿ, ರಾಮನಾಥಪುರಂ, ವೆಲ್ಲೂರು, ತಿರುಪತ್ತೂರು, ರಾಣಿಪ್ಪೆಟ್, ತಿರುವಳ್ಳೂರು, ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ, ತಿರುವಣ್ಣಾಮಲೈ , ವಿಲ್ಲುಪುರಂ, ಕಡಲೂರು, ಪೆರಂಬಲೂರ್, ಅರಿಯಲೂರ್, ಮೈಲಾಡುತುರೈ, ಕೃಷ್ಣಗಿರಿ, ಧರ್ಮಪುರಿ, ಸೇಲಂ, ಕಲ್ಲಕುರಿಚಿ, ತಿರುಚ್ಚಿ ಮತ್ತು ಪುದುಚೇರಿಯಲ್ಲಿ ಭಾರಿ ಮಳೆಯಾಗಲಿದೆ.

ಸಾಮಾನ್ಯವಾಗಿ ಈಶಾನ್ಯ ಮಾನ್ಸೂನ್ ಅಕ್ಟೋಬರ್ 18 ರಂದು ಪ್ರಾರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಇಂದು ತಮಿಳುನಾಡಿನ ವಿವಿಧೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಚೆನ್ನೈ ವಲಯ ಹವಾಮಾನ ಕೇಂದ್ರ ತಿಳಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:06 pm, Mon, 16 October 23