ಭಾರತ-ಪಾಕ್ ಪಂದ್ಯ: ರಾಜಕೀಯ ಗುದ್ದಾಟಕ್ಕೆ ಕಾರಣವಾದ ‘ಜೈ ಶ್ರೀ ರಾಮ್’ ಘೋಷಣೆ, ಮತ್ತೆ ಸುದ್ದಿಯಾದ ಉದಯನಿಧಿ
ಭಾರತ ಕ್ರೀಡಾ ಕ್ಷೇತ್ರ ಒಳ್ಳೆಯ ಮನೋಭಾವವನ್ನು ಹೊಂದಿದೆ. ಭಾರತ "ಅತಿಥಿ ದೇವೋ ಭವ" ಎಂಬ ದಾರಿಯಲ್ಲಿ ನಡೆಯುತ್ತಿರುವಾಗ, ಇಂತಹ ಕೆಲಸ ಮಾಡುವುದು ಸರಿಯಲ್ಲ ಎಂದು ಉದಯನಿಧಿ ಹೇಳಿದ್ದಾರೆ. ಕ್ರೀಡೆ ದೇಶ ದೇಶಗಳ ನಡುವಿನ ಸಂಬಂಧವನ್ನು ಒಗ್ಗೂಡಿಸಬೇಕು. ನಿಜವಾದ ಸಹೋದರತ್ವವನ್ನು ಬೆಳೆಸಬೇಕು. ಅದನ್ನು ಸಾಧನವಾಗಿ ಬಳಸಬೇಕು. ದ್ವೇಷವನ್ನು ಹರಡುವುದು ಖಂಡನೀಯ ಎಂದು ಎಕ್ಸ್ನಲ್ಲಿ (ಈ ಹಿಂದಿನ ಟ್ವಿಟರ್) ವಿಡಿಯೋವನ್ನು ಹಂಚಿಕೊಂಡು, ಹೀಗೆ ಬರೆದುಕೊಂಡಿದ್ದಾರೆ.
ದೆಹಲಿ, ಅ.16: ಶನಿವಾರದಂದು ಗುಜರಾತ್ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ(Narendra Modi Stadium) ಭಾರತ- ಪಾಕ್ ವಿಶ್ವಕಪ್ ರೋಚಕ ಪಂದ್ಯ ನಡೆದಿದೆ. ಈ ಸಮಯಲ್ಲಿ ಹಲವು ವಿವಾದತ್ಮಕ ಘಟನೆಗಳು ಸ್ಟೇಡಿಯಂನಲ್ಲಿ ನಡೆದಿದೆ. ಪಂದ್ಯ ಶುರುವಾಗ ಮುನ್ನ, ಪಂದ್ಯ ಶುರುವಾದ ನಂತರ, ಪಂದ್ಯ ಮುಗಿದ ನಂತರ ಅನೇಕ ಘಟನೆಗಳು ನಡೆದಿದೆ. ಈ ಎಲ್ಲ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದರಲ್ಲಿ ಒಂದು ಪಾಕಿಸ್ತಾನ ಕ್ರಿಕೆಟಿಗನನ್ನು ಅಣಕಿಸಲು ‘ಜೈ ಶ್ರೀರಾಮ್’ ಘೋಷಣೆ ಮಾಡಲಾಗಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ವಿವಾದ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಈಗಾಗಲೇ ಸನಾತನ ಧರ್ಮದ ಕುರಿತು ಚರ್ಚೆಯಲ್ಲಿರುವ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರು ಮಗ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ (Udayanidhi Stalin) ಈ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ.
ಪಾಕ್ ಆಟಗಾರ ಮೊಹಮ್ಮದ್ ರಿಜ್ವಾನ್ ವಿರುದ್ಧ ‘ಜೈ ಶ್ರೀರಾಮ್’ ಘೋಷಣೆ ಹಾಕಿರುವುದು ರಾಜಕೀಯ ಗುದ್ದಾಟಕ್ಕೆ ಕಾರಣವಾಗಿದೆ. ಶನಿವಾರದಂದು ನಡೆದ ಭಾರತ -ಪಾಕ್ ಪಂದ್ಯದಲ್ಲಿ ಭಾರತ 7 ವಿಕೇಟ್ ಅಂತರದಲ್ಲಿ ಪಾಕ್ ವಿರುದ್ಧ ಜಯ ಗಳಿಸಿತ್ತು. ಇನ್ನು ಈ ಘಟನೆ ಪಾಕ್ ಇನಿಂಗ್ಸ್ ಸಮಯದಲ್ಲಿ ನಡೆದಿದೆ. ಪಾಕ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ರಿಜ್ವಾನ್ 49 ರನ್ ಪಡೆದು, ಔಟ್ ಆಗಿ, ಪೆವಿಲಿಯನ್ಗೆ ಹೋಗುತ್ತಿರುವಾಗ ಅಭಿಮಾನಿಗಳು ‘ಜೈ ಶ್ರೀರಾಮ್’ ಘೋಷಣೆ ಹಾಕಿದ್ದಾರೆ. ಇದೀಗ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ವ್ಯಕ್ತವಾಗಿದೆ. ಈ ಘೋಷಣೆಯನ್ನು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಸಮರ್ಥಿಸಿಕೊಂಡಿದ್ದಾರೆ. ಪಾಕ್ ಆಟಗಾರರು ಮೈದಾನದಲ್ಲಿ ನಮಾಜ್ ಮಾಡಬಹುದಾದರೆ, ನಾವು ಯಾಕೆ ‘ಜೈ ಶ್ರೀರಾಮ್’ ಘೋಷಣೆ ಕೂಗಬಾರದು ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಈ ಬಗ್ಗೆ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಭಾರತ ಕ್ರೀಡಾ ಕ್ಷೇತ್ರ ಒಳ್ಳೆಯ ಮನೋಭಾವವನ್ನು ಹೊಂದಿದೆ. ಭಾರತ “ಅತಿಥಿ ದೇವೋ ಭವ” ಎಂಬ ದಾರಿಯಲ್ಲಿ ನಡೆಯುತ್ತಿರುವಾಗ, ಇಂತಹ ಕೆಲಸ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸನಾತನ ಧರ್ಮ ಕುರಿತ ಹೇಳಿಕೆ: ತಮಿಳುನಾಡು ಸಚಿವ ಉದಯನಿಧಿಗೆ ನೋಟಿಸ್ ಜಾರಿ ಮಾಡಿದ ಸುಪ್ರೀಂಕೋರ್ಟ್
ಕ್ರೀಡೆ ದೇಶ ದೇಶಗಳ ನಡುವಿನ ಸಂಬಂಧವನ್ನು ಒಗ್ಗೂಡಿಸಬೇಕು. ನಿಜವಾದ ಸಹೋದರತ್ವವನ್ನು ಬೆಳೆಸಬೇಕು. ಅದನ್ನು ಸಾಧನವಾಗಿ ಬಳಸಬೇಕು. ದ್ವೇಷವನ್ನು ಹರಡುವುದು ಖಂಡನೀಯ ಎಂದು ಎಕ್ಸ್ನಲ್ಲಿ (ಈ ಹಿಂದಿನ ಟ್ವಿಟರ್) ವಿಡಿಯೋವನ್ನು ಹಂಚಿಕೊಂಡು, ಹೀಗೆ ಬರೆದುಕೊಂಡಿದ್ದಾರೆ. ಈ ಹಿಂದೆ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ಮಾತನಾಡಿದ್ದರು. ಈ ವಿಚಾರ ದೇಶದ್ಯಾಂತ ಸದ್ದು ಮಾಡಿತ್ತು. ಸನಾತನ ಧರ್ಮವು ಸಾಮಾಜಿಕ ನ್ಯಾಯದ ಕಲ್ಪನೆಗೆ ವಿರುದ್ಧವಾಗಿದೆ ಮತ್ತು ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದಾರೆ. ಸನಾತನವು ಮಲೇರಿಯಾ ಮತ್ತು ಡೆಂಗ್ಯೂ ಇದ್ದಂತೆ ಆದ್ದರಿಂದ ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದರು.
ಉದಯನಿಧಿ ಟ್ವೀಟ್
India is renowned for its sportsmanship and hospitality. However, the treatment meted out to Pakistan players at Narendra Modi Stadium in Ahmedabad is unacceptable and a new low. Sports should be a unifying force between countries, fostering true brotherhood. Using it as a tool… pic.twitter.com/MJnPJsERyK
— Udhay (@Udhaystalin) October 14, 2023
ಇನ್ನು ಭಾರತ- ಪಾಕ್ ಪಂದ್ಯದ ವೇಳೆ ನಡೆದ ಈ ಘಟನೆ ಬಗ್ಗೆ ಉದಯನಿಧಿ ಸ್ಟಾಲಿನ್ ಖಂಡಿಸಿ ಎಕ್ಸ್ನಲ್ಲಿ ನೀಡಿದ ಹೇಳಿಕೆಗೆ ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಅವರು ತಿರುಗೇಟು ನೀಡಿದ್ದಾರೆ. ರಾಮನು ಬ್ರಹ್ಮಾಂಡದ ಪ್ರತಿಯೊಂದು ಮೂಲೆಯಲ್ಲಿ ನೆಲೆಸಿದ್ದಾನೆ, ಆದ್ದರಿಂದ ಜೈ ಶ್ರೀ ರಾಮ್ ಎಂದು ಹೇಳುವುದು ತಪ್ಪಲ್ಲ ಎಂದು ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್ ಸಂಸದ ಸಾಕೇತ್ ಗೋಖಲೆ ಅವರು ಕೂಡ ‘ಜೈ ಶ್ರೀರಾಮ್’ ಘೋಷಣೆ ಬಗ್ಗೆ ಟೀಕಿಸಿದ್ದಾರೆ. 20236ರಲ್ಲಿ ಭಾರತ ಒಲಿಂಪಿಕ್ಸ್ನ ನೇತೃತ್ವವನ್ನು ವಹಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ, ಆದರೆ ಬಿಜೆಪಿಯವರು ತಮ್ಮ ಅಭಿಮಾನಿಗಳನ್ನು ಮೈದಾನಕ್ಕೆ ಕಳುಹಿಸಿ ಇಂತರ ಕೆಲಸ ಮಾಡುವುದು ಸರಿಯೇ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:51 pm, Mon, 16 October 23