ಪಶ್ಚಿಮ ಬಂಗಾಳದಲ್ಲಿ ಪೂಜಾ ಥೀಮ್; ಮೋದಿಗೆ ದೇಶದ ಆಡಳಿತವನ್ನು ಹಸ್ತಾಂತರಿಸುವ ದುರ್ಗೆ

Durga Puja 2023: ಬಿಸ್ವಜಿತ್ ಅವರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಖಿಲ ಭಾರತ ಅಧ್ಯಕ್ಷ ಜೆಪಿ ನಡ್ಡಾ ಅವರ ಪ್ರತಿಮೆಗಳನ್ನು ರಚಿಸಿದ್ದಾರೆ. ಇಲ್ಲಿ ದುರ್ಗಾ ಮಾತೆಯ ಕೈಯಲ್ಲಿ ಭಾರತದ ನಕ್ಷೆ ಇದೆ. 2024ರಲ್ಲಿ ನರೇಂದ್ರ ಮೋದಿಯವರಿಗೆ ದೇಶವನ್ನು ಆಳುವ ಜವಾಬ್ದಾರಿಯನ್ನು ದುರ್ಗಾ ಮಾ ಹಸ್ತಾಂತರಿಸುತ್ತಿದ್ದಾರೆ ಎಂಬ ರೀತಿಯಲ್ಲಿ ಇದನ್ನು ಚಿತ್ರಿಸಲಾಗಿದೆ. ಏತನ್ಮಧ್ಯೆ , ಪೂಜೆಗೆ ರಾಜಕೀಯ ಥೀಮ್ ಬಳಸಿರುವ ಬಗ್ಗೆ ಆಕ್ಷೇಪವೆದ್ದಿದೆ.

ಪಶ್ಚಿಮ ಬಂಗಾಳದಲ್ಲಿ ಪೂಜಾ ಥೀಮ್; ಮೋದಿಗೆ ದೇಶದ ಆಡಳಿತವನ್ನು ಹಸ್ತಾಂತರಿಸುವ ದುರ್ಗೆ
ಭಾರತದ ಅಧಿಕಾರವನ್ನು ಮೋದಿಗೆ ಹಸ್ತಾಂತರಿಸುತ್ತಿರುವ ದುರ್ಗಾ ಮಾತೆImage Credit source: tv9 Bangla
Follow us
ರಶ್ಮಿ ಕಲ್ಲಕಟ್ಟ
|

Updated on: Oct 16, 2023 | 3:00 PM

ಕೋಲ್ಕತ್ತಾ ಅಕ್ಟೋಬರ್ 16: ಪಶ್ಚಿಮ ಬಂಗಾಳದ (West Bengal) ದುರ್ಗಾ ಪೂಜೆ (Durga Puja) ಥೀಮ್‌ನಲ್ಲಿ ರಾಜಕೀಯ ವ್ಯಕ್ತಿ,  ವಿಷಯಗಳೂ ಕಾಣಿಸಿಕೊಂಡಿವೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿ (Narendra Modi), ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ದುರ್ಗಾ ಪೂಜಾ ಥೀಮ್​​​ಗಳಲ್ಲಿ ಸ್ಥಾನ ಪಡೆದಿದ್ದಾರೆ. ಕಂಕುರ್ಗಚಿಯಲ್ಲಿರುವ ದುರ್ಗಾ ಪೂಜೆ ಪೆಂಡಾಲ್​​ನಲ್ಲಿ ಈ  ಥೀಮ್ ಇದ. ಆ ಪೂಜೆಯನ್ನು ಆರಂಭಿಸಿದವರು ಚುನಾವಣೋತ್ತರ ಹಿಂಸಾಚಾರದಲ್ಲಿ ಹತ್ಯೆಯಾದ ಬಿಜೆಪಿ ಕಾರ್ಯಕರ್ತನ ಅಜ್ಜ. ದುರ್ಗಾ ದೇವಿ ಮೋದಿಯವರ ಕೈಗೆ ದೇಶದ ಆಡಳಿತವನ್ನು ಹಸ್ತಾಂತರಿಸುತ್ತಿರುವ ಥೀಮ್ ಇದಾಗಿದೆ.  ಭಾನುವಾರ ನಡೆದ ಆ ಪೂಜೆಯ ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿ ನಾಯಕರಾದ  ಸುವೇಂದು ಅಧಿಕಾರಿ ಮತ್ತು ದಿಲೀಪ್ ಘೋಷ್ ಉಪಸ್ಥಿತರಿದ್ದರು.

2024ರಲ್ಲಿ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರಕ್ಕೆ ಬರಲಿದ್ದಾರೆ. ಅಮಿತ್ ಶಾ ಅವರು ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಕಂಕುರ್ಗಚಿಯಲ್ಲಿ ಚುನಾವಣೋತ್ತರ ಹಿಂಸಾಚಾರದಲ್ಲಿ ಹುತಾತ್ಮರಾದ ಬಿಜೆಪಿ ಕಾರ್ಯಕರ್ತ ಅಭಿಜಿತ್ ಸರ್ಕಾರ್ ಅವರ ಅಜ್ಜ ಬಿಸ್ವಜಿತ್ ಸರ್ಕಾರ ಪ್ರಾರ್ಥನೆಯೊಂದಿಗೆ ದುರ್ಗಾಪೂಜೆಯನ್ನು ಮಾಡಿದ್ದಾರೆ. ಬಿಸ್ವಜಿತ್ ಅವರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಖಿಲ ಭಾರತ ಅಧ್ಯಕ್ಷ ಜೆಪಿ ನಡ್ಡಾ ಅವರ ಪ್ರತಿಮೆಗಳನ್ನು ರಚಿಸಿದ್ದಾರೆ. ಇಲ್ಲಿ ದುರ್ಗಾ ಮಾತೆಯ ಕೈಯಲ್ಲಿ ಭಾರತದ ನಕ್ಷೆ ಇದೆ. 2024ರಲ್ಲಿ ನರೇಂದ್ರ ಮೋದಿಯವರಿಗೆ ದೇಶವನ್ನು ಆಳುವ ಜವಾಬ್ದಾರಿಯನ್ನು ದುರ್ಗಾ ಮಾ ಹಸ್ತಾಂತರಿಸುತ್ತಿದ್ದಾರೆ ಎಂಬ ರೀತಿಯಲ್ಲಿ ಇದನ್ನು ಚಿತ್ರಿಸಲಾಗಿದೆ. ಏತನ್ಮಧ್ಯೆ , ಪೂಜೆಗೆ ರಾಜಕೀಯ ಥೀಮ್ ಬಳಸಿರುವ ಬಗ್ಗೆ ಆಕ್ಷೇಪವೆದ್ದಿದೆ.

ಇಂದು ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ ಅಮಿತ್ ಶಾ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ ಕೋಲ್ಕತ್ತಾದಲ್ಲಿ ಪ್ರಖ್ಯಾತ ದುರ್ಗಾಪೂಜಾ ಪೆಂಡಾಲ್ ಉದ್ಘಾಟಿಸಲಿದ್ದಾರೆ ಎಂದು ಪಕ್ಷದ ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ಮಧ್ಯಾಹ್ನ 3 ಗಂಟೆಗೆ ಪೂರ್ವ ಮಹಾನಗರಕ್ಕೆ ಆಗಮಿಸುತ್ತಾರೆ. ಸಂಜೆ ನವದೆಹಲಿಗೆ ಹಿಂದಿರುಗುತ್ತಾರೆ ಎಂದು ಮೂಲಗಳು ಹೇಳಿವೆ.

ಸಂಜೆ 4 ಗಂಟೆ ಸುಮಾರಿಗೆ ನಮ್ಮ ಸಂತೋಷ್ ಮಿತ್ರ ಚೌಕದ ಪೂಜೆಯನ್ನು ಅಮಿತ್ ಶಾ ಉದ್ಘಾಟಿಸಲಿದ್ದಾರೆ ಎಂದು ಬಿಜೆಪಿ ಕೌನ್ಸಿಲರ್ ಮತ್ತು ಪೂಜಾ ಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ. 2019 ರಲ್ಲಿ, ಶಾ ಅವರು ನಗರದ ಪೂರ್ವ ಅಂಚಿನಲ್ಲಿರುವ ಸಾಲ್ಟ್ ಲೇಕ್‌ನಲ್ಲಿ ಬಿಜೆ ಬ್ಲಾಕ್ ಸಮುದಾಯ ದುರ್ಗಾ ಪೂಜೆಯನ್ನು ಉದ್ಘಾಟಿಸಿದ್ದರು.

ಇದನ್ನೂ ಓದಿ: ಈ ನವರಾತ್ರಿಯಲ್ಲಿ ನೀವು ಭೇಟಿ ನೀಡಬೇಕಾದ ದೇಶದ ದುರ್ಗಾ ದೇವಸ್ಥಾನಗಳು

ಪಶ್ಚಿಮ ಬಂಗಾಳದ ಬಿಜೆಪಿಯು 2020 ರಲ್ಲಿ ತನ್ನದೇ ಆದ ದುರ್ಗಾಪೂಜಾ ಆಚರಣೆಯನ್ನು ಪ್ರಾರಂಭಿಸಿತು, ರಾಜ್ಯದಲ್ಲಿ ಹಾಗೆ ಮಾಡಿದ ಮೊದಲ ಮತ್ತು ಏಕೈಕ ಪಕ್ಷವಾಯಿತು. 2021 ಮತ್ತು 2022 ರಲ್ಲಿ ಆಯೋಜಿಸಲಾಗಿತ್ತು.ಆದರೆ, 2023ರಿಂದ ಪೂಜೆ ಆಯೋಜಿಸುವುದಿಲ್ಲ ಎಂದು ರಾಜ್ಯ ಬಿಜೆಪಿ ಕಳೆದ ವರ್ಷ ಘೋಷಿಸಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ