ಮಹಾರಾಷ್ಟ್ರ: ಶರದ್ ಪವಾರ್ ಭೇಟಿ ನಂತರ ದೆಹಲಿಗೆ ತೆರಳಿದ ಅಜಿತ್ ಪವಾರ್

|

Updated on: Nov 10, 2023 | 5:55 PM

ಭೇಟಿ ಕುರಿತು ಮಾಧ್ಯಮ ಪ್ರತಿನಿಧಿಗಳು ಶರದ್ ಪವಾರ್ ಅವರನ್ನು ಕೇಳಿದಾಗ, ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಅಜಿತ್ ಪವಾರ್ ಅವರೊಂದಿಗಿನ ಭೇಟಿಯು ಕುಟುಂಬದ ವಿಚಾರವಾಗಿದೆ ಎಂದು ಶರದ್ ಪವಾರ್ ಹೇಳಿದ್ದಾರೆ.

ಮಹಾರಾಷ್ಟ್ರ: ಶರದ್ ಪವಾರ್ ಭೇಟಿ ನಂತರ ದೆಹಲಿಗೆ ತೆರಳಿದ ಅಜಿತ್ ಪವಾರ್
ಶರದ್ ಪವಾರ್- ಅಜಿತ್ ಪವಾರ್
Follow us on

ಪುಣೆ ನವೆಂಬರ್ 10: ಮಹಾರಾಷ್ಟ್ರದಲ್ಲಿ (Maharashtra) ರಾಜಕೀಯ ವಿದ್ಯಮಾನಗಳು ಮತ್ತೊಮ್ಮೆ ವೇಗ ಪಡೆದಿವೆ. ಎನ್‌ಸಿಪಿಯಲ್ಲಿ ಚಟುವಟಿಕೆ ಹೆಚ್ಚಿವೆ. ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ (Sharad Pawar) ಮತ್ತು ಉಪ ಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಇಂದು ಭೇಟಿಯಾಗಿದ್ದಾರೆ. ಶರದ್ ಪವಾರ್ ಅವರ ಸೋದರ ಸಂಬಂಧಿ ಪ್ರತಾಪ್ರರಾವ್ ಪವಾರ್ ಪುಣೆಯ ಬನೇರ್ ನಲ್ಲಿ ನೆಲೆಸಿದ್ದಾರೆ. ಶರದ್ ಪವಾರ್, ಅಜಿತ್ ಪವಾರ್ ಮತ್ತು ಪವಾರ್ ಕುಟುಂಬದ ಇತರ ಸದಸ್ಯರು ಅಲ್ಲಿಗೆ ಬಂದಿದ್ದರು. ಈ ಸಭೆಯ ನಂತರ ಅಜಿತ್ ಪವಾರ್ ದೆಹಲಿಗೆ ತೆರಳಿದ್ದಾರೆ.

ಶರದ್ ಪವಾರ್ ಅವರು ಪ್ರತಾಪ್ರರಾವ್ ಅವರ ಮನೆಯಿಂದ ಹೊರಬಂದ ನಂತರ ಮಾಧ್ಯಮದವರು ಅವರನ್ನು ಭೇಟಿ ಮಾಡಿದ್ದಾರೆ. ಭೇಟಿ ಕುರಿತು ಮಾಧ್ಯಮ ಪ್ರತಿನಿಧಿಗಳು ಶರದ್ ಪವಾರ್ ಅವರನ್ನು ಕೇಳಿದಾಗ, ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಅಜಿತ್ ಪವಾರ್ ಅವರೊಂದಿಗಿನ ಭೇಟಿಯು ಕುಟುಂಬದ ವಿಚಾರವಾಗಿದೆ ಎಂದು ಶರದ್ ಪವಾರ್ ಹೇಳಿದ್ದಾರೆ. ಅಜಿತ್ ಪವಾರ್ ದೆಹಲಿ ಭೇಟಿ ಬಗ್ಗೆ ಶರದ್ ಪವಾರ್ ಮಾತನಾಡಿಲ್ಲ.

ಪ್ರತಾಪರಾವ್‌ ಪವಾರ್‌ ಅವರ ನಿವಾಸಕ್ಕೆ ಭೇಟಿ ನೀಡಿರುವ ಕುರಿತು ನಾನಾ ರೀತಿಯ ಸುದ್ದಿ ಕೇಳಿಬರುತ್ತಿವೆ. ಪ್ರತಿ ವರ್ಷ ದೀಪಾವಳಿಯ ಸಮಯದಲ್ಲಿ, ಪವಾರ್ ಕುಟುಂಬವು ಬಾರಾಮತಿಯಲ್ಲಿರುವ ಗೋವಿಂದ್ ಬಾಗ್‌ನಲ್ಲಿ ಸೇರುತ್ತದೆ. ಅಲ್ಲಿ ಪವಾರ್ ಕುಟುಂಬ ಸಾಮಾನ್ಯ ನಾಗರಿಕರಿಂದ ದೀಪಾವಳಿ ಶುಭಾಶಯಗಳನ್ನು ಸ್ವೀಕರಿಸುತ್ತದೆ. ಪ್ರತಾಪರಾವ್ ಪವಾರ್ ಅವರ ಪತ್ನಿಯ ಆರೋಗ್ಯ ಸರಿಯಿಲ್ಲ. ಗೋವಿಂದ್ ಬಾಗ್‌ಗೆ ಬರಲು ಸಾಧ್ಯವಿಲ್ಲ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದ್ದು, ಇಂದು ಪವಾರ್ ಕುಟುಂಬ ಪ್ರತಾಪವಾರ್ ಪವಾರ್ ನಿವಾಸದಲ್ಲಿ ಒಟ್ಟು ಸೇರಿದೆ. ಪ್ರತಾಪ್ರಾವ್ ಪವಾರ್ ಶರದ್ ಪವಾರ್ ಅವರ ಸೋದರ ಸಂಬಂಧಿ. ಶರದ್ ಪವಾರ್, ಅಜಿತ್ ಪವಾರ್ ಮತ್ತು ಸುಪ್ರಿಯಾ ಸುಳೆ ನಡುವೆ ಪ್ರತಾಪ್ರರಾವ್ ಪವಾರ್ ಅವರ ನಿವಾಸದಲ್ಲಿ ಒಂದು ಗಂಟೆ ಸುದೀರ್ಘ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: 2024ರ ಲೋಕಸಭೆ ಚುನಾವಣೆಯಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಸ್ಪರ್ಧಿಸುವುದಿಲ್ಲ: ಮೂಲಗಳು

ಈ ಎಲ್ಲಾ ಪ್ರಶ್ನೆಗಳಿಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ

ಈ ಸಭೆಯ ನಂತರ ಅಜಿತ್ ಪವಾರ್ ದೆಹಲಿಗೆ ತೆರಳಿದರು. ಅಜಿತ್ ಪವಾರ್ ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ವರದಿಯಾಗಿದೆ. ಅಜಿತ್ ಪವಾರ್ ಅವರಿಗೆ ಡೆಂಗ್ಯೂ ಇತ್ತು. ಹಾಗಾಗಿ ಕಳೆದ ಕೆಲವು ದಿನಗಳಿಂದ ಅವರು ಕಾಣಲಿಲ್ಲ. ಕಠಿಣ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದರು. ಇದೀಗ ಅಜಿತ್ ಪವಾರ್ ದಿಢೀರ್ ದೆಹಲಿಗೆ ತೆರಳಿರುವುದರಿಂದ ಹಿಂದೆ-ಮುಂದೆ ಚರ್ಚೆ ಶುರುವಾಗಿದೆ. ಅಜಿತ್ ಪವಾರ್ ಅಸಮಾಧಾನಗೊಂಡಿದ್ದಾರೆ ಎಂಬ ಮಾತು ಕೂಡ ಇದೆ. ಕುಟುಂಬ ಸಭೆಯಲ್ಲಿ ಶರದ್ ಪವಾರ್ ಮತ್ತು ಅಜಿತ್ ಪವಾರ್ ನಡುವೆ ಏನು ಚರ್ಚಿಸಲಾಯಿತು? ದೆಹಲಿಗೆ ಭೇಟಿ ನೀಡುವ ಉದ್ದೇಶವೇನು? ಈ ಎಲ್ಲಾ ಪ್ರಶ್ನೆಗಳಿಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ. ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶರದ್ ಪವಾರ್ ಅವರ ಗುಂಪಿಗಿಂತ ಅಜಿತ್ ಪವಾರ್ ಅವರ ಗುಂಪು ಹೆಚ್ಚು ಗ್ರಾಮ ಪಂಚಾಯಿತಿಗಳನ್ನು ಗೆದ್ದುಕೊಂಡಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 5:19 pm, Fri, 10 November 23