Centre approves: ಮಹಾರಾಷ್ಟ್ರದ ಔರಂಗಾಬಾದ್ ಮತ್ತು ಉಸ್ಮಾನಾಬಾದ್ ಇನ್ನು ಕ್ರಮವಾಗಿ ಛತ್ರಪತಿ ಸಾಂಭಾಜಿನಗರ್ ಹಾಗೂ ಧಾರಾಶಿವ್ ಅಂತ ಕರೆಸಿಕೊಳ್ಳಲಿವೆ

|

Updated on: Feb 25, 2023 | 12:20 PM

ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಅವರು ಉಸ್ಮಾನಾಬಾದ್ ಹಾಗೂ ಔರಂಗಾಬಾದ್ ಜಿಲ್ಲೆಗಳ ಹೆಸರುಗಳನ್ನು ಬದಲಾಯಿಸುವ ಮೂಲಕ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ತನ್ನ ಧೃಡಸಂಕಲ್ಪ ಪ್ರದರ್ಶಿಸಿದೆ ಎಂದು ಹೇಳಿದ್ದಾರೆ.

Centre approves: ಮಹಾರಾಷ್ಟ್ರದ ಔರಂಗಾಬಾದ್ ಮತ್ತು ಉಸ್ಮಾನಾಬಾದ್ ಇನ್ನು ಕ್ರಮವಾಗಿ ಛತ್ರಪತಿ ಸಾಂಭಾಜಿನಗರ್ ಹಾಗೂ ಧಾರಾಶಿವ್ ಅಂತ ಕರೆಸಿಕೊಳ್ಳಲಿವೆ
ಔರಂಗಾಬಾದ್ ಈಗ ಛತ್ರಪತಿ ಸಾಂಭಾಜಿನಗರ್
Follow us on

ಮುಂಬೈ: ಮಹಾರಾಷ್ಟ್ರ ರಾಜ್ಯದ ಪ್ರಮುಖ ಜಿಲ್ಲೆಗಳೆನಿಸಿಕೊಂಡಿರುವ ಔರಂಗಾಬಾದ್ (Aurangabad) ಹಾಗೂ ಉಸ್ಮಾನಾಬಾದ್ ಗಳ (Osmanabad) ಹೆಸರುಗಳನ್ನು ಅನುಕ್ರಮವಾಗಿ ಛತ್ರಪತಿ ಸಾಂಭಾಜಿನಗರ್ (Chhatrapati Sambhajinagar) ಹಾಗೂ ಧಾರಾಶಿವ್ (Dharashiv) ಅಂತ ಬದಲಾಯಿಸಲು ಕೇಂದ್ರ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ. ಕೇಂದ್ರ ಗೃಹ ಸಚಿವಾಲಯವು ರಾಜ್ಯ ಸರ್ಕಾರದ ಪ್ರಸ್ತಾಪಕ್ಕೆ ಸಮ್ಮತಿ ಸೂಚಿಸಿ ಮಹಾರಾಷ್ಟ್ರದಲ್ಲಿರುವ ಜಿಲ್ಲೆಗಳ ಹೆಸರುಗಳನ್ನು ಬದಲಾಯಿಸಲು ಕೇಂದ್ರ ಸರ್ಕಾರಕ್ಕೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ಶುಕ್ರವಾರ ಬಿಡುಗಡೆಯಾಗಿರುವ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಅವರು ಉಸ್ಮಾನಾಬಾದ್ ಹಾಗೂ ಔರಂಗಾಬಾದ್ ಜಿಲ್ಲೆಗಳ ಹೆಸರುಗಳನ್ನು ಬದಲಾಯಿಸುವ ಮೂಲಕ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ತನ್ನ ಧೃಡಸಂಕಲ್ಪ ಪ್ರದರ್ಶಿಸಿದೆ ಎಂದು ಹೇಳಿದ್ದಾರೆ.

ಇದನ್ನೂಓದಿ:  ಮದ್ಯಪಾನ ವಯಸ್ಸು 21ರಿಂದ 18ಕ್ಕೆ ಇಳಿಕೆ ಖಂಡನೀಯ: ಸರ್ಕಾರ ಕೂಡಲೇ ಈ ಆದೇಶವನ್ನು ಹಿಂಪಡೆಯುಂತೆ ಮುತಾಲಿಕ್ ಆಗ್ರಹ

‘ಔರಂಗಾಬಾದ್ ಹೆಸರನ್ನು ಛತ್ರಪತಿ ‘ಸಾಂಭಾಜಿನಗರ್’ ಎಂದು ಮತ್ತು ಉಸ್ಮಾನಾಬಾದ್ ಹೆಸರು ‘ಧಾರಾಶಿವ್’ ಅಂತ ಬದಲಾಯಿಸಲು ರಾಜ್ಯ ಸರ್ಕಾರ ಕಳಿಸಿದ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಆದರಣೀಯ ಪ್ರಧಾನ ಮಂತ್ರಿ ನರೇಣದ್ರ ಮೋದಿ ಹಾಗೂ ಗೃಹ ಸಚಿವ ಆದರಣೀಯ ಅಮಿತ್ ಭಾಯ್ ಶಾಹ ಅವರಿಗೆ ಸಹಸ್ರಾರು ಧನ್ಯವಾದಗಳು. ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರವು ತಮ್ಮ ಸಂಕಲ್ಪವನ್ನು ಪ್ರದರ್ಶಿಸಿದೆ,’ ಎಂದು ಫಡ್ನಾವಿಸ್ ತಮ್ಮ ಟ್ವೀಟೊಂದರಲ್ಲಿ ಹೇಳಿದ್ದಾರೆ.

ಇದನ್ನೂಓದಿ: Hop Shoots: ವಿಶ್ವದ ಅತ್ಯಂತ ದುಬಾರಿ ತರಕಾರಿ ‘ಹಾಪ್ ಚಿಗುರು’ ಪ್ರತಿ ಕೆಜಿಗೆ 85 ಸಾವಿರ ರೂ.! ಇದರ ಆರೋಗ್ಯ ಲಾಭಗಳು ಇಲ್ಲಿವೆ

ಕೇಂದ್ರ ಗೃಹ ಸಚಿವಾಲಯದ ಅನಮೋದನಾ ಪತ್ರದ ಪ್ರತಿಯನ್ನು ಫಡ್ನಾವಿಸ್ ತಮ್ಮ ಟ್ವೀಟ್ ಗೆ ಲಗತ್ತಿಸಿದ್ದಾರೆ.
ಹಿಂದೆ ಅಧಿಕಾರದಲ್ಲಿದ್ದ ಮಹಾ ವಿಕಾಸ್ ಆಗಾಧಿ ಸರ್ಕಾರದ ಮುಖ್ಯಭಾಗವಾಗಿದ್ದ ಶಿವಸೇನೆಯು ಉಸ್ಮಾನಾಬಾದ್ ಹಾಗೂ ಔರಂಗಾಬಾದ್ ಜಿಲ್ಲೆಗಳ ಹೆಸರುಗಳನ್ನು ಬದಲಾಯಿಸಲು ಬಹಳ ದಿನಗಳಿಂದ ಪ್ರಯತ್ನಶೀಲವಾಗಿತ್ತು. ಕಳೆದ ವರ್ಷ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಈ ಎರಡು ಜಿಲ್ಲೆಗಳ ಹೆಸರುಗಳನ್ನು ಬದಲಾಯಿಸುವ ಪ್ರಸ್ತಾಪವನ್ನು ಸದನದಲ್ಲಿ ಪಾಸು ಮಾಡಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ