King of Spices: MDH ಗ್ರೂಪ್‌ ಮಾಲೀಕ ಮಹಾಶಯ ಧರ್ಮಪಾಲ್ ಗುಲಾಟಿ ನಿಧನ

|

Updated on: Dec 04, 2020 | 6:49 AM

ಭಾರತೀಯ ಮಸಾಲೆ ಇಂಡಸ್ಟ್ರಿಯ ಪಿತಾಮಹ ಎಂದೇ ಖ್ಯಾತಿ ಪಡೆದಿದ್ದ MDH ಗ್ರೂಪ್‌ ಮುಖ್ಯಸ್ಥ ಮಹಾಶಯ ಧರ್ಮಪಾಲ್ ಗುಲಾಟಿ(98) ಕೊನೆಯುಸಿರೆಳೆದಿದ್ದಾರೆ.

King of Spices: MDH ಗ್ರೂಪ್‌ ಮಾಲೀಕ ಮಹಾಶಯ ಧರ್ಮಪಾಲ್ ಗುಲಾಟಿ ನಿಧನ
MDH ಗ್ರೂಪ್‌ ಮುಖ್ಯಸ್ಥ ಮಹಾಶಯ ಧರ್ಮಪಾಲ್
Follow us on

ದೆಹಲಿ: ಭಾರತೀಯ ಮಸಾಲೆ ಇಂಡಸ್ಟ್ರಿಯ ಪಿತಾಮಹ ಎಂದೇ ಖ್ಯಾತಿ ಪಡೆದಿದ್ದ MDH ಗ್ರೂಪ್‌ ಮುಖ್ಯಸ್ಥ ಮಹಾಶಯ ಧರ್ಮಪಾಲ್ ಗುಲಾಟಿ (98) ಕೊನೆಯುಸಿರೆಳೆದಿದ್ದಾರೆ. ಧರ್ಮಪಾಲ್ ನಿಧನಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಂತಾಪ ಸೂಚಿಸಿದ್ದಾರೆ.

ಮಸಾಲೆ ಪದಾರ್ಥಗಳಲ್ಲಿ ಭಾರತ ಅತಿ ದೊಡ್ಡ ಹೆಸರು ಮಾಡಿದೆ. ಭಾರತದಲ್ಲಿ ಸಿಗುವ ಮಸಾಲೆಗಳು ಬೇರೆಲ್ಲೂ ಸಿಗುವುದಿಲ್ಲ. ಹೀಗಾಗಿ ಯೂರೋಪಿಯನ್ನರು ಸಹ ನಮ್ಮ ದೇಶದ ಮಸಾಲೆಗೆ ಮಾರು ಹೋಗಿದ್ದಾರೆ. ಇಂತಹ ಮಸಾಲೆ ಬ್ರಾಂಡ್ MDH ಮಾಲೀಕ ಮಹಾಶಯ ಧರ್ಮಪಾಲ್ ಗುಲಾಟಿ ಅವರು ಇಂದು ನಿಧನರಾಗಿದ್ದಾರೆ. ವರದಿಗಳ ಪ್ರಕಾರ, ಅವರು ಕಳೆದ ಮೂರು ವಾರಗಳಿಂದ ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಿಗ್ಗೆ 5:30 ಕ್ಕೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ದೇಶದಲ್ಲಿ ಮಸಾಲೆ ಪದಾರ್ಥಗಳಿಂದಲೇ ಖ್ಯಾತಿ ಪಡೆದಿದ್ದ ಮಹಾಶಯ:
‘ದಾದಾಜಿ’ ಮತ್ತು ‘ಮಹಾಶಯ’ ಎಂದು ಪ್ರೀತಿಯಿಂದ ಕರೆಯಲ್ಪಡುವ ಧರ್ಮಪಾಲ್ 1923 ರಲ್ಲಿ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಜನಿಸಿದರು. ಶಾಲೆಯಿಂದ ಹೊರಗುಳಿದ ಇವರು ತಮ್ಮ ಆರಂಭಿಕ ಜೀವನವನ್ನು ತಂದೆಯ ಜೊತೆ ಸೇರಿ ಮಸಾಲೆ ವ್ಯವಹಾರದಲ್ಲೇ ಕಳೆದಿದ್ದಾರೆ.

1947 ಭಾರತ-ಪಾಕಿಸ್ತಾನ ವಿಭಜನೆಯ ನಂತರ, ಅವರು ಭಾರತಕ್ಕೆ ಬಂದು ಅಮೃತಸರದ ನಿರಾಶ್ರಿತರ ಶಿಬಿರದಲ್ಲಿ ತಂಗಿದ್ದರು. ನಂತರ ಅವರು ದೆಹಲಿಯ ಕರೋಲ್ ಬಾಗ್‌ಗೆ ತೆರಳಿ ಅಲ್ಲಿ ಒಂದು ಅಂಗಡಿಯನ್ನು ತೆರೆದರು. ಬಳಿಕ 1959 ರಲ್ಲಿ MDH ಮಸಾಲೆ ಅಂಗಡಿಯನ್ನು ಬ್ರಾಂಡ್ ಆಗಿ ಪ್ರಾರಂಭಿಸಿದರು. ದೇಶದಲ್ಲಿ 2ನೇ ಅತಿದೊಡ್ಡ ಮಸಾಲೆ ಪದಾರ್ಥ ಉತ್ಪನ್ನಗಳನ್ನ ಉತ್ಪಾದಿಸೋ ಕಂಪನಿ ಅನ್ನೋ ಖ್ಯಾತಿ ಎಂಡಿಹೆಚ್​ಗೆ ಸಲ್ಲುವಂತೆ ಗ್ರೂಪ್​ನ ಅಧ್ಯಕ್ಷ ಧರ್ಮಪಾಲ್​ ಮಾಡಿದ್ದರು.

Mahashian Di Hatti Private Limited

Published On - 9:49 am, Thu, 3 December 20