ತ್ರಿಕೋನ ಪ್ರೇಮ: ವ್ಯಕ್ತಿಯನ್ನು ಹೊಡೆದು ಕೊಂದ ಗೆಳತಿಯ ಪ್ರಿಯಕರ, ಐವರ ಬಂಧನ

ವ್ಯಕ್ತಿಯೊಬ್ಬನನ್ನು ಗೆಳತಿಯ ಪ್ರಿಯಕರ ತನ್ನ ಸ್ನೇಹಿತರೊಟ್ಟಿಗೆ ಸೇರಿ ಕೊಲೆ ಮಾಡಿರುವ ಘಟನೆ ಛತ್ತೀಸ್​ಗಢದಲ್ಲಿ ನಡೆದಿದೆ. ಯುವತಿಯ ಪ್ರಿಯಕರ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ರಾತ್ರಿ 9.30ರ ಸುಮಾರಿಗೆ ಕೆಲವರು ದೊಣ್ಣೆಗಳಿಂದ ಅಮಾನುಷವಾಗಿ ಥಳಿಸಿದ್ದರಿಂದ ಚೇತನ್ ಎಂಬ ವ್ಯಕ್ತಿಗೆ ತುಂಬಾ ಗಾಯಗಳಾಗಿತ್ತು, ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ತ್ರಿಕೋನ ಪ್ರೇಮ: ವ್ಯಕ್ತಿಯನ್ನು ಹೊಡೆದು ಕೊಂದ ಗೆಳತಿಯ ಪ್ರಿಯಕರ, ಐವರ ಬಂಧನ
ಮನೆ
Image Credit source: India Today

Updated on: Dec 31, 2024 | 2:18 PM

ತ್ರಿಕೋನ ಪ್ರೇಮ ಪ್ರಕರಣವೊಂದರಲ್ಲಿ ಕೊಲೆಯೇ ನಡೆದು ಹೋಗಿದೆ. ವ್ಯಕ್ತಿಯೊಬ್ಬನನ್ನು ಗೆಳತಿಯ ಪ್ರಿಯಕರ ತನ್ನ ಸ್ನೇಹಿತರೊಟ್ಟಿಗೆ ಸೇರಿ ಕೊಲೆ ಮಾಡಿರುವ ಘಟನೆ ಛತ್ತೀಸ್​ಗಢದಲ್ಲಿ ನಡೆದಿದೆ. ಯುವತಿಯ ಪ್ರಿಯಕರ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ರಾತ್ರಿ 9.30ರ ಸುಮಾರಿಗೆ ಕೆಲವರು ದೊಣ್ಣೆಗಳಿಂದ ಅಮಾನುಷವಾಗಿ ಥಳಿಸಿದ್ದರಿಂದ ಚೇತನ್ ಎಂಬ ವ್ಯಕ್ತಿಗೆ ತುಂಬಾ ಗಾಯಗಳಾಗಿತ್ತು, ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ, ಅದರ ಪ್ರಕಾರ ಚೇತನ್ ಯುವತಿಯೊಂದಿಗೆ ಸಂಬಂಧ ಹೊಂದಿದ್ದ. ಇವರಿಬ್ಬರ ತಾಯಂದಿರು ಪೊಲೀಸ್ ಇಲಾಖೆಯಲ್ಲಿದ್ದಾರೆ. ಕೆಲವು ದಿನಗಳ ಹಿಂದೆ, ಹುಡುಗಿಯ ತಾಯಿಯನ್ನು ಸುರ್ಗುಜಾ ಜಿಲ್ಲೆಯ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು, ನಂತರ ಹುಡುಗಿಯೂ ಆ ಜಾಗ ಬಿಡಬೇಕಾಯಿತು.

ಬಳಿಕ ಆಕೆ ಸುರ್ಗುಜಾಗೆ ಹೋದಾಗ ಅಲ್ಲಿ ಲೋಕೇಶ್ ಸಾಹು ಎಂಬುವವನನ್ನು ಭೇಟಿಯಾದಳು, ಕ್ರಮೇಣ ಅದು ಪ್ರೀತಿಗೆ ತಿರುಗಿತ್ತು. ಇದೇ ವೇಳೆ ಚೇತನ್ ಆಕೆಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದ, ಆತನ ಕರೆಗೆ ಪ್ರತಿಕ್ರಿಯೆ ಕೂಡ ನೀಡುತ್ತಿರಲಿಲ್ಲ.
ಡಿಸೆಂಬರ್ 24 ರಂದು ಯುವತಿ ತನ್ನ ತಾಯಿಯೊಂದಿಗೆ ದುರ್ಗಕ್ಕೆ ಬಂದಿದ್ದಳು, ಅದು ಚೇತನ್‌ಗೆ ತಿಳಿದಾಗ, ತನ್ನನ್ನು ಭೇಟಿಯಾಗುವಂತೆ ಕೇಳಿದ್ದ, ಆದರೆ ಆಕೆ ನಿರಾಕರಿಸಿದ್ದಳು.

ಮತ್ತಷ್ಟು ಓದಿ: ವೆಬ್​ ಸೀರೀಸ್​ ನೋಡಿ ಮಹಿಳೆಯ ಕತ್ತು ಸೀಳಿದ ವಿದ್ಯಾರ್ಥಿ

ಯುವತಿ ಲೋಕೇಶ್​ಗೆ ಚೇತನ್ ಬಗ್ಗೆ ತಿಳಿಸಿದ್ದಾಳೆ, ಬಳಿಕ ಆತನಿಗೆ ಕರೆ ಮಾಡಿ ಭೇಟಿಯಾಗುವಂತೆ ಕೇಳಿದ್ದಳು. ಆತ ಆಕೆಯನ್ನು ಭೇಟಿಯಾಗಲು ಬಂದಾಗ ಲೋಕೇಶ್ ತನ್ನ ಸ್ನೇಹಿತರೊಂದಿಗೆ ಅಲ್ಲಿಯೇ ಇದ್ದ. ಇದಾದ ಕೆಲವೇ ಹೊತ್ತಿನಲ್ಲಿ ಇಬ್ಬರ ನಡುವೆ ವಾಗ್ವಾದ ನಡೆಯಿತು.

ಲೋಕೇಶ್ ವ್ಯಕ್ತಿಯ ಮೇಲೆ ದೊಣ್ಣೆಯಿಂದ ಅಮಾನುಷವಾಗಿ ಥಳಿಸಿದ್ದಾನೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದ ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದಾರೆ. ಯುವತಿಯನ್ನೂ ವಶಕ್ಕೆ ಪಡೆಯಲಾಗಿದೆ. ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ