ಗುರುಗ್ರಾಮದಲ್ಲಿ ಕೊರೊನಾ ಲಸಿಕೆ ಪಡೆದ ವ್ಯಕ್ತಿ ಮೃತ: ಸಾವಿಗೆ ಕಾರಣ ಗೊತ್ತಾಗಿಲ್ಲ ಎಂದ ವೈದ್ಯರು

|

Updated on: Jan 22, 2021 | 8:16 PM

ಮರಣೋತ್ತರ ಪರೀಕ್ಷೆ ನಂತರವಷ್ಟೇ ನಾವು ಸಾವಿಗೆ ನಿಜವಾದ ಕಾರಣ ತಿಳಿದುಕೊಳ್ಳಬಹುದು. ಕೊರೊನಾ ಲಸಿಕೆಯಿಂದಲೇ ಅವರು ಮೃತಪಟ್ಟಿದ್ದಾರೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ.

ಗುರುಗ್ರಾಮದಲ್ಲಿ ಕೊರೊನಾ ಲಸಿಕೆ ಪಡೆದ ವ್ಯಕ್ತಿ ಮೃತ: ಸಾವಿಗೆ ಕಾರಣ ಗೊತ್ತಾಗಿಲ್ಲ ಎಂದ ವೈದ್ಯರು
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಕೊರೊನಾ ಲಸಿಕೆ ಪಡೆದ ಮತ್ತೋರ್ವ ಆರೋಗ್ಯ ಕಾರ್ಯಕರ್ತ ದೆಹಲಿಯಲ್ಲಿಂದು ಮೃತಪಟ್ಟಿದ್ದಾರೆ. ಅವರಿಗೆ ಕಳೆದ ಶನಿವಾರ ಕೊರೊನಾ ಲಸಿಕೆ ನೀಡಲಾಗಿತ್ತು. ಸಾವಿಗೆ ಕೊರೊನಾ ಲಸಿಕೆ ಕಾರಣವೇ ಎನ್ನುವ ವಿಚಾರ ಇನ್ನೂ ಅಧಿಕೃತವಾಗಿಲ್ಲ.

ರಾಜ್ವಾಂತಿ ಮೃತ ವ್ಯಕ್ತಿ. ಇವರು ಕಳೆದ ಶನಿವಾರ ಕೊರೊನಾ ಲಸಿಕೆ ಪಡೆದಿದ್ದರು. ಕೊರೊನಾ ಲಸಿಕೆ ಪಡೆದ ನಂತರ ಅವರು ಸಹಜವಾಗಿದ್ದರು. ಆದರೆ, ಇಂದು ಮುಂಜಾನೆ ಅವರು ಕೊಠಡಿಯಿಂದ ಹೊರ ಬಂದಿರಲಿಲ್ಲ. ನಂತರ ಅವರನ್ನು ಆಸ್ಪತ್ರೆಗೆ ಕರೆತಂದಾಗ ಮೃತಪಟ್ಟಿರುವ ವಿಚಾರ ದೃಢವಾಗಿದೆ.

ಮರಣೋತ್ತರ ಪರೀಕ್ಷೆ ನಂತರವಷ್ಟೇ ನಾವು ಸಾವಿಗೆ ನಿಜವಾದ ಕಾರಣ ತಿಳಿದುಕೊಳ್ಳಬಹುದು. ಕೊರೊನಾ ಲಸಿಕೆಯಿಂದಲೇ ಅವರು ಮೃತಪಟ್ಟಿದ್ದಾರೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಗುರುಗ್ರಾಮದ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ವಿರೇಂದ್ರ ಯಾದವ್​ ಹೇಳಿದ್ದಾರೆ.

ಕಳೆದ ಶನಿವಾರದಿಂದ ಕೊರೊನಾ ಲಸಿಕೆ ನೀಡವ ಕಾರ್ಯಕ್ರಮ ಆರಂಭವಾಗಿದೆ. ಕೋವಿಶೀಲ್ಡ್​ ಲಸಿಕೆಯನ್ನು ದೇಶದಲ್ಲಿ ನೀಡಲಾಗುತ್ತಿದೆ. ಈಗಾಗಲೆ ಕೊರೊನಾ ಲಸಿಕೆ ಪಡೆದ ಮೂವರು ಮೃತಪಟ್ಟಿದ್ದಾರೆ. ಆದರೆ, ಇವರ ಸಾವಿಗೆ ಕೊರೊನಾ ಲಸಿಕೆ ಕಾರಣವೇ ಎನ್ನುವುದು ತಿಳಿದುಬಂದಿಲ್ಲ.

ಫೈಜರ್​ ಲಸಿಕೆ ಪಡೆದ 12,400 ಜನರಿಗೆ ಕೊರೊನಾ!

Published On - 8:16 pm, Fri, 22 January 21