ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯ ವ್ಯಕ್ತಿಯೊಬ್ಬರು ಭೂಗತವಾಗಿ (Under ground) ಎರಡು ಅಂತಸ್ತಿನ ಮನೆಯನ್ನು ನಿರ್ಮಿಸಿದ್ದಾರೆ. ಮನೆ ಬಾಲ್ಕನಿ, ಮೆಟ್ಟಿಲುಗಳು ಮತ್ತು ಡ್ರಾಯಿಂಗ್ ರೂಮ್ ಜೊತೆಗೆ 11 ಕೊಠಡಿಗಳನ್ನು ಒಳಗೊಂಡಿದೆ. ಈ ಭೂಗತ ಸ್ಥಳದಲ್ಲಿ ಮಸೀದಿಯೂ (Mosque) ಇದೆ. ವರದಿಗಳ ಪ್ರಕಾರ, ಪಪ್ಪು ಬಾಬಾ ಎಂದೂ ಕರೆಯಲ್ಪಡುವ ಇರ್ಫಾನ್ ಅವರು 2011 ರಲ್ಲಿ ನಿರ್ಮಿಸಲು ಪ್ರಾರಂಭಿಸಿದ ಭೂಗತ ಮನೆಯನ್ನು ನಿರ್ಮಿಸಲು 12 ವರ್ಷಗಳನ್ನು ತೆಗೆದುಕೊಂಡರು. ಅವರು ಮನೆಯ ಗೋಡೆಗಳ ಮೇಲೆ ಆಕರ್ಷಕ ಕೆತ್ತನೆಯನ್ನೂ ಕೆತ್ತಿಸಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
“10-11 ಕೋಣೆಗಳಿವೆ ಮತ್ತು ಮೆಟ್ಟಿಲುಗಳೂ ಇವೆ. ಸಣ್ಣ ಬಾಲ್ಕನಿಯೂ ಇದೆ, ನಾನು ಇಲ್ಲಿ ಒಂದು ಬಾವಿಯನ್ನು ತೋಡಿದ್ದೇನೆ … ನಾವು ಅದನ್ನು ಎರಡು ಅಂತಸ್ತಿನೆಂದು ಕರೆಯಬಹುದು. ನಾನು ಅದನ್ನು 2011 ರಲ್ಲಿ ನಿರ್ಮಿಸಲು ಪ್ರಾರಂಭಿಸಿದೆ … ಈ ಮನೆಯ ನಿರ್ಮಾಣವನ್ನು ನಾನು ಇನ್ನೂ ಮುಂದುವರಿಸುತ್ತಿದ್ದೇನೆ ” ಎಂದು ಇರ್ಫಾನ್ ಎಎನ್‌ಐಗೆ ತಿಳಿಸಿದ್ದಾರೆ.
#WATCH | Uttar Pradesh | In Hardoi, a man builds an underground two-storeyed house with 11 rooms, over a span of 12 years. pic.twitter.com/2siU0K5LHc
— ANI UP/Uttarakhand (@ANINewsUP) August 30, 2023
ಯಾರ ಸಹಾಯವೂ ಇಲ್ಲದೆ ವರ್ಷಗಟ್ಟಲೆ ಈ ಮನೆಯನ್ನು ಕಟ್ಟುತ್ತಿರುವುದರಿಂದ ತನ್ನ ಜೀವನದ ಬಹುಪಾಲು ಈ ಮನೆಯನ್ನು ಕಟ್ಟಲು ಕಳೆದಿದ್ದೇನೆ ಎಂದು ಇರ್ಫಾನ್ ಉಲ್ಲೇಖಿಸಿದ್ದಾರೆ. ಅವರು ಹಗಲಿನಲ್ಲಿ ಮನೆ ನಿರ್ಮಿಸುತ್ತಿದ್ದರು ಮತ್ತು ನಂತರ ರಾತ್ರಿಯ ಊಟಕ್ಕೆ ತಮ್ಮ ಕುಟುಂಬವನ್ನು ಸೇರಿಕೊಳ್ಳುತ್ತಿದ್ದರು. ಅವರು 2010 ರವರೆಗೆ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದರು, ಆದರೆ ತಮ್ಮ ತಂದೆಯ ಮರಣದ ನಂತರ ತಮ್ಮ ಜೀವನವು ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಂಡಿದೆ ಎಂದು ಅವರು ಹೇಳಿದರು. ಈ ಮಧ್ಯೆ ಅವರು ತಮ್ಮ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು, ಆದರೆ ಯಶ ಕಾಣಲಿಲ್ಲ. ಆ ಸಮಯದಲ್ಲಿ, ಅವರು ತಮ್ಮ ಪೂರ್ವಜರಿಂದ ಬಂದಿದ್ದ ಜಮೀನಿನಲ್ಲಿ ಭೂಗತ ಅರಮನೆಯನ್ನು ಮಾಡಲು ನಿರ್ಧರಿಸಿದರಂತೆ.
#WATCH | Irfan Ahmad, the man says, “There are 10-11 rooms and there are stairs too. There’s a small balcony as well. I have dug a well here… We can call it two-storey. I started building it in 2011… I am still continuing the construction of this house…” pic.twitter.com/6q4ILEfSDD
— ANI UP/Uttarakhand (@ANINewsUP) August 30, 2023
ಅರಮನೆಯನ್ನು ನಿರ್ಮಿಸಲು ನಿರ್ಧರಿಸಿದ ನಂತರ, ಇರ್ಫಾನ್ ಜಮೀನಿನ ಒಂದು ಭಾಗವನ್ನು ಕೃಷಿ ಉದ್ದೇಶಗಳಿಗಾಗಿ ಬಳಸಿದರು. ಇದುವರೆಗೆ ಕೃಷಿಯೇ ಇವರ ಮುಖ್ಯ ಆದಾಯದ ಮೂಲವಾಗಿತ್ತು. ಕುಡಿಯುವ ನೀರು ಮತ್ತು ತಮ್ಮ ಕೃಷಿ ನೀರಾವರಿಗಾಗಿ ಮಾಡಿಕೊಂಡಿದ್ದ ಬಾವಿಯನ್ನು ಸ್ಥಳೀಯ ಕೆಲವು ಪುಂಡಪೋಕರಿಗಳು ನಾಶಪಡಿಸಿದ್ದಾರೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ