ದೆಹಲಿ: ದೆಹಲಿ ಉಪಮುಖ್ಯಮಂತ್ರಿ ಹುದ್ದೆಗೆ ಮನೀಶ್ ಸಿಸೋಡಿಯಾ (Manish Sisodia )ರಾಜೀನಾಮೆ ನೀಡಿದ್ದಾರೆ. ಇದರ ಜೊತೆಗೆ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಕೂಡ ರಾಜೀನಾಮೆ ನೀಡಿದ್ದಾರೆ, ಇಬ್ಬರ ರಾಜೀನಾಮೆಯನ್ನು ಮುಖ್ಯಮಂತ್ರಿ ಅಂಗೀಕಾರ ಮಾಡಿದ್ದಾರೆ. ಡಿಸಿಎಂ ಮನೀಶ್ ಸಿಸೋಡಿಯಾ ತಮ್ಮ ಮೇಲೆ ಸುಳ್ಳ ಆರೋಪವನ್ನು ಮಾಡಿ ಬಂಧಿಸಿದ್ದಾರೆ, ಜೊತೆಗೆ ಸಿಬಿಐ ತನಿಖೆಯ ಬಗ್ಗೆ ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು, ಸುಪ್ರೀಂ ಕೋರ್ಟ್ ಈ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಮಾಡಬೇಕು ಹಾಗೂ ಈ ಅರ್ಜಿಯನ್ನು ವಜಾಗೊಳಿಸಿತ್ತು. ಈ ಮೂಲಕ ಸಿಸೋಡಿಯಾ ಹಿನ್ನಡೆಯಾಗಿದ್ದು, ಹಲವು ಪ್ರಕರಣಗಳ ಆರೋಪ ಹೊತ್ತಿರುವ ಸಿಸೋಡಿಯಾ ಅವರು ಸಿಬಿಐ ಬಂಧನದಲ್ಲಿದ್ದರೆ, ಸುಪ್ರೀಂ ಕೋರ್ಟ್ನಲ್ಲಿ ಹಿನ್ನಡೆಯಾದ ಕಾರಣ ಸಿಸೋಡಿಯಾ ಪರ ವಕೀಲರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದೀಗ ಸಿಸೋಡಿಯಾ ಅವರು ತಮ್ಮ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಮುಖ್ಯಮಂತ್ರಿ ಅರವಿಂದ್ ಕ್ರೇಜಿವಾಲ್ಗೆ ಸಲ್ಲಿಸಿದ್ದಾರೆ. ಇದರ ಜೊತೆಗೆ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇದೀಗ ಈ ಇಬ್ಬರ ರಾಜೀನಾಮೆಯನ್ನು ಮುಖ್ಯಮಂತ್ರಿಗಳು ಅಂಗೀಕರ ಮಾಡಿದ್ದಾರೆ. ಇದೀಗ ಗೆಹ್ಲೋಟ್, ರಾಜ್ಕುಮಾರ್ ಆನಂದ್ಗೆ ಹೆಚ್ಚುವರಿ ಖಾತೆಗಳ ಹೊಣೆ ನೀಡಲಾಗಿದೆ ಮನೀಶ್ ಸಿಸೋಡಿಯಾ ಬಳಿ ಇದ್ದ ಹಣಕಾಸು, ಶಿಕ್ಷಣ, ಗೃಹ ಇಲಾಖೆ, PWD, ಜಾಗೃತ ದಳ, ಪ್ರವಾಸೋದ್ಯಮ, ಕಾರ್ಮಿಕ ಇಲಾಖೆ, ಕಲೆ-ಸಂಸ್ಕೃತಿ ಭಾಷೆ, ಉದ್ಯೋಗ ಖಾತೆ ಇಬ್ಬರಿಗೆ ಹಂಚಿಕೆ ಮಾಡಲಾಗಿದೆ ಸಿಬಿಐ ಬಂಧನ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಈ ಬಗ್ಗೆ ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡುವಂತೆ ಸಿಜೆಐ ಪೀಠ ಸೂಚನೆ ನೀಡಿದೆ. ದೆಹಲಿಯಲ್ಲಿ ಘಟನೆ ಎಂದಾಕ್ಷಣ ಸುಪ್ರೀಂಕೋರ್ಟ್ಗೆ ಬರುವಂತಿಲ್ಲ, ನೇರವಾಗಿ ಸುಪ್ರೀಂಕೋರ್ಟ್ಗೆ ಬರುವ ಅಗತ್ಯವಿಲ್ಲವೆಂದ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ಹೇಳಿದ್ದಾರೆ. ಮೊದಲು ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡಿ, ನಂತರ ಅಲ್ಲಿನ ತೀರ್ಪಿನ ಆಧಾರದ ಮೇಲೆ ಸುಪ್ರೀಂಗೆ ಅರ್ಜಿ ಸಲ್ಲಿಸಿ ಎಂದು ಹೇಳಿದ್ದಾರೆ.
Delhi ministers Manish Sisodia and Satyendar Jain resign from their posts in the state cabinet; CM Arvind Kejriwal accepts their resignation. pic.twitter.com/rODxWkSoc9
— ANI (@ANI) February 28, 2023
ಸಿಸೋಡಿಯಾ ಅವರ ವಕೀಲ ಅಭಿಷೇಕ್ ಸಿಂಘ್ವಿ ಅವರು ಸಿಬಿಐ ಆರೋಪಪಟ್ಟಿಯಲ್ಲಿ ಅವರ ಹೆಸರಿಲ್ಲದ ಕಾರಣ ಅವರ ಬಂಧನ ಕಾನೂನುಬಾಹಿರವಾಗಿದೆ ಮತ್ತು ಅವರು ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಸಿಬಿಐ ಆರೋಪವು ದುರ್ಬಲ ಕ್ಷಮಿಸಿ ಎಂದು ಹೇಳಿದರು.
ಇದನ್ನೂ ಓದಿ: Manish Sisodia: ಬಂಧನ, ಸಿಬಿಐ ತನಿಖೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಮನೀಶ್ ಸಿಸೋಡಿಯಾ
ಇದಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಹೈಕೋರ್ಟ್‌ಗೆ ಹೋಗಿ, ನಮ್ಮಲ್ಲಿ ಈ ಬಗ್ಗೆ ಚರ್ಚೆ ನಡೆಸಬಹುದು ಆದರೆ ಈ ಹಂತದಲ್ಲಿ ಅದನ್ನು ಕೇಳಲು ನಾವು ಸಿದ್ಧರಿಲ್ಲ ಎಂದು ಹೇಳಿದರು. ಇದು ಅತ್ಯಂತ ಕೆಟ್ಟ ಪೂರ್ವನಿದರ್ಶನವಾಗಿದೆ. ನೀವು ದೆಹಲಿಯಲ್ಲಿದ್ದೀರಿ ಎಂಬ ಕಾರಣಕ್ಕೆ ನೀವು ಸುಪ್ರೀಂಗೆ ಅರ್ಜಿ ಸಲ್ಲಿಸುವಂತಿಲ್ಲ ಎಂದು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರು, ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನ ಬಂಧನವನ್ನು ಅಕ್ರಮ ಎಂದು ತೀರ್ಪು ನೀಡುವ ಸಿಸೋಡಿಯಾ ಅವರ ಕೋರಿಕೆಯ ಅರ್ಜಿಯನ್ನು ಉಲ್ಲೇಖಿಸಿ ಹೇಳಿದರು.
Published On - 6:06 pm, Tue, 28 February 23