ಗಾಲ್ವಾನ್ ಕಣಿವೆ ಘರ್ಷಣೆಯಲ್ಲಿ ಹುತಾತ್ಮನಾದ ಮಗನಿಗೆ ಸ್ಮಾರಕ ನಿರ್ಮಿಸಿದ್ದಕ್ಕೆ ಯೋಧನ ಅಪ್ಪನಿಗೆ ಥಳಿಸಿ ಬಂಧಿಸಿದ ಪೊಲೀಸ್
ಬಿಹಾರದ ವೈಶಾಲಿಯಲ್ಲಿರುವ ಸರ್ಕಾರಿ ಭೂಮಿಯಲ್ಲಿ ತನ್ನ ಮಗನಿಗೆ ಸ್ಮಾರಕ ನಿರ್ಮಿಸಿದ್ದಕ್ಕಾಗಿ ಯೋಧ ಜೈ ಕಿಶೋರ್ ಸಿಂಗ್ ಅವರ ಅಪ್ಪನಿಗೆ ಥಳಿಸಲಾಗಿದೆ ಎಂದು ಯೋಧನ ಕುಟುಂಬ ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ
2020 ರ ಗಾಲ್ವಾನ್ ಕಣಿವೆ ಘರ್ಷಣೆಯಲ್ಲಿ (Galwan clash) ಹುತಾತ್ಮನಾದ ಯೋಧನ ತಂದೆಯನ್ನು ಬಿಹಾರದಲ್ಲಿ (Bihar) ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಪೊಲೀಸರು ಥಳಿಸಿ ನಂತರ ಬಂಧಿಸಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಬಿಹಾರದ ವೈಶಾಲಿಯಲ್ಲಿರುವ ಸರ್ಕಾರಿ ಭೂಮಿಯಲ್ಲಿ ತನ್ನ ಮಗನಿಗೆ ಸ್ಮಾರಕ ನಿರ್ಮಿಸಿದ್ದಕ್ಕಾಗಿ ಯೋಧ ಜೈ ಕಿಶೋರ್ ಸಿಂಗ್ ಅವರ ಅಪ್ಪನಿಗೆ ಥಳಿಸಲಾಗಿದೆ ಎಂದು ಯೋಧನ ಕುಟುಂಬ ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.ಎಎನ್‌ಐ ಜೊತೆ ಮಾತನಾಡಿದ ಸಿಂಗ್ ಅವರ ಸಹೋದರ, “ಡಿಎಸ್‌ಪಿ ಮೇಡಮ್ ಭೇಟಿ ನೀಡಿ 15 ದಿನಗಳಲ್ಲಿ ಪ್ರತಿಮೆಯನ್ನು ತೆಗೆದುಹಾಕುವಂತೆ ನಮಗೆ ತಿಳಿಸಿದ್ದರು. ನಂತರ ಪೊಲೀಸ್ ಠಾಣೆಯ ಉಸ್ತುವಾರಿ ನಮ್ಮ ಮನೆಗೆ ಬಂದು ಅಪ್ಪನನ್ನು ಬಂಧಿಸಿ ಥಳಿಸಿದ್ದಾರೆ ಎಂದಿದ್ದಾರೆ.
Bihar | DSP ma’am had visited and told us to remove the statue within 15 days. Later police station in charge came to our home and arrested my father and also beat him. I am also an armed forces personnel: Brother of Jai Kishore Singh pic.twitter.com/VQN0Rgx7sy
— ANI (@ANI) February 28, 2023
ಈ ಪ್ರಕರಣವು ವೈಶಾಲಿಯ ಜಂಡಹಾದಲ್ಲಿ ನಡೆದ ವಿವಾದಕ್ಕೆ ಸಂಬಂಧಿಸಿದೆ. ಅಲ್ಲಿ ಜನವರಿಯಲ್ಲಿ, ಹರಿನಾಥ ರಾಮನ ಭೂಮಿಯಲ್ಲಿ ಮತ್ತು ಜಿಲ್ಲೆಯ ಸರ್ಕಾರಿ ಭೂಮಿಯಲ್ಲಿ ಪ್ರತಿಮೆಯನ್ನು ಸ್ಥಾಪಿಸುವ ಬಗ್ಗೆ ಎಸ್‌ಸಿ / ಎಸ್‌ಟಿ ಕಾಯ್ದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಯಿತು. ನಂತರ, ಪ್ರತಿಮೆಯ ಸುತ್ತ ಗೋಡೆಗಳನ್ನು ನಿರ್ಮಿಸಲಾಗಿದೆ. ಈ ವಿಷಯದಲ್ಲಿ ಅಕ್ರಮ ಒತ್ತುವರಿಯಿಂದಾಗಿ ಭೂಮಾಲೀಕರ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ಮಹುವಾ ಹೇಳಿದ್ದಾರೆ.
ಇದನ್ನೂ ಓದಿ: ಗ್ರೇಟರ್ ನೋಯ್ಡಾ ರಸ್ತೆ ಮಧ್ಯೆ ಪಟಾಕಿ ತುಂಬಿದ್ದ ಇ ರಿಕ್ಷಾಗೆ ತಗುಲಿದ ಬೆಂಕಿ; ಓರ್ವ ವ್ಯಕ್ತಿ ಸಾವು
ಜೂನ್ 15, 2020 ರಂದು ಪೂರ್ವ ಲಡಾಖ್‌ನಲ್ಲಿ ವಾಸ್ತವ ನಿಯಂತ್ರಣ ರೇಖೆಯ ಬಳಿ ಚೀನಾದ ಸೈನಿಕರ ವಿರುದ್ಧ ಹೋರಾಡಿ ಗಾಲ್ವಾನ್ ಕಣಿವೆಯ ಸಂಘರ್ಷದಲ್ಲಿ ಭಾರತೀಯ ಸೇನೆಯ 20 ಯೋಧರು ಹುತಾತ್ಮರಾಗಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ