Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಐಪಿ ಕಾರಿನಲ್ಲಿ ಬಂದು G20 ಸಮಾವೇಶದಿಂದ ಹೂ ಕುಂಡಗಳನ್ನು ಕದ್ದ ಖತರ್ನಾಕ್​ಗಳು!

ಇಬ್ಬರು ಪುರುಷರು ಹೂವಿನ ಕುಂಡಗಳನ್ನು ತೆಗೆದುಕೊಂಡು ತಮ್ಮ ಐಷಾರಾಮಿ ಕಾರಿನ ಡಿಕ್ಕಿಯಲ್ಲಿ ಇರಿಸುವುದನ್ನು ವೀಡಿಯೊದಲ್ಲಿ ಕಾಣಬಹುದು, ಇದರ ಜೊತೆಗೆ ಜಿ20 ಶೃಂಗಸಭೆಯ ಪೋಸ್ಟರ್‌ನ, ಸುತ್ತಮುತ್ತ ಅರಳಿದ ವರ್ಣರಂಜಿತ ಹೂವಿನ ಕುಂಡಗಳೂ ಈ ಪ್ರದೇಶದಲ್ಲಿ ಕಾಣಬಹುದು.

ವಿಐಪಿ ಕಾರಿನಲ್ಲಿ ಬಂದು G20 ಸಮಾವೇಶದಿಂದ ಹೂ ಕುಂಡಗಳನ್ನು ಕದ್ದ ಖತರ್ನಾಕ್​ಗಳು!
ಜಿ20 ಸಮಾವೇಶ, ಹೂ ಕುಂಡಗಳುImage Credit source: G20 Flower pot
Follow us
ನಯನಾ ಎಸ್​ಪಿ
|

Updated on: Feb 28, 2023 | 4:29 PM

Gurugram: ಇತ್ತೀಚೆಗೆ, ಗುರಗಾಂವ್​ನಲ್ಲಿ ನಡೆದ ಜಿ 20 ಸಮಾವೇಶದಲ್ಲಿಅಲಂಕಾರಕ್ಕೆಂದು ತಂದಿಟ್ಟ ಹೂವಿನ ಕುಂಡಗಳನ್ನು ಕದ್ದು ಇಬ್ಬರು ವ್ಯಕ್ತಿಗಳು ಸಿಕ್ಕಿಬಿದ್ದಿದ್ದಾರೆ. ವಿಐಪಿ ಲೈಸೆನ್ಸ್ ಪ್ಲೇಟ್ ಹೊಂದಿರುವ ಅತ್ಯಾಧುನಿಕ ವಾಹನದಲ್ಲಿ ಈ ವ್ಯಕ್ತಿಗಳು ಬಂದು ಇಂತಹ ಕೃತ್ಯವನ್ನು ಹಾಡು ಹಗಲೇ ಎಸಗಿದ್ದಾರೆ. ಈ ಇಬ್ಬರು ಪುರುಷರು ಹೂವಿನ ಕುಂಡಗಳನ್ನು ತೆಗೆದುಕೊಂಡು ತಮ್ಮ ಐಷಾರಾಮಿ ಕಾರಿನ ಡಿಕ್ಕಿಯಲ್ಲಿ ಇರಿಸುವುದನ್ನು ವೀಡಿಯೊದಲ್ಲಿ ಕಾಣಬಹುದು, ಇದರ ಜೊತೆಗೆ ಜಿ20 ಶೃಂಗಸಭೆಯ ಪೋಸ್ಟರ್‌ನ, ಸುತ್ತಮುತ್ತ ಅರಳಿದ ವರ್ಣರಂಜಿತ ಹೂವಿನ ಕುಂಡಗಳೂ ಈ ಪ್ರದೇಶದಲ್ಲಿ ಕಾಣಬಹುದು.

ಗುರುಗ್ರಾಮ್‌ನ ಶಂಕರ್ ಚೌಕ್‌ನಲ್ಲಿ ನಡೆದ ಜಿ20 ಕಾರ್ಯಕ್ರಮದಿಂದ ಇಬ್ಬರು ವ್ಯಕ್ತಿಗಳು ಹೂವಿನ ಕುಂಡಗಳನ್ನು ಕದಿಯುತ್ತಿರುವ ವೀಡಿಯೊವನ್ನು ಪತ್ರಕರ್ತ ರಾಜ್ ವರ್ಮಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ವೀಡಿಯೊ ಆನ್‌ಲೈನ್‌ನಲ್ಲಿ ತ್ವರಿತವಾಗಿ ಎಲ್ಲರ ಗಮನ ಸೆಳೆಯಿತು, ಅನೇಕರು ಅದನ್ನು ಹಂಚಿಕೊಂಡಿದ್ದಾರೆ ಮತ್ತು ಘಟನೆಯ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ವರ್ಮಾ ಅವರು ವೀಡಿಯೊ ಜೊತೆಗೆ, “ಗುರುಗ್ರಾಮ್‌ನ ಶಂಕರ್ ಚೌಕ್‌ನಲ್ಲಿ #ಕಿಯಾ ಕಾರ್ ಸವಾರ ಹಾಡು ಹಗಲೇ ಸಸ್ಯಗಳ ಕುಂಡಗಳನ್ನು ಕದಿಯುತ್ತಿದ್ದಾನೆ” ಎಂದು ಬರೆದಿದ್ದಾರೆ. ಈ ವಿಷಯವನ್ನು ಪರಿಶೀಲಿಸಲು ಗುರುಗ್ರಾಮ್ ಪೊಲೀಸ್ ಅಧಿಕಾರಿಗಳು ಮತ್ತು ಡೆಪ್ಯೂಟಿ ಕಮಿಷನರ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಹೀಗಾಗಿ ಪ್ರಕರಣ ಜಿಲ್ಲಾಧಿಕಾರಿಗೆ ತಲುಪಿದ್ದು, ತನಿಖೆ ಆರಂಭಿಸುವಂತೆ ಪೊಲೀಸರಿಗೆ ಜಿಲ್ಲಾಧಿಕಾರಿ ತಿಳಿಸಿದರು.

ಈ ವ್ಯಕ್ತಿಗಳಿಬ್ಬರು ಹೂವಿನ ಕುಂಡಗಳನ್ನು ಏಕೆ ಕದಿಯುತ್ತಿದ್ದರು ಎಂಬುದು ಅಸ್ಪಷ್ಟವಾಗಿದ್ದರೂ, ಈ ವಿಡಿಯೋ ಕಳ್ಳತನ ಮತ್ತು ವಿಧ್ವಂಸಕತೆಯ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ. ಈ ವಿಡಿಯೋ ವೈರಲ್ ಆದ ನಂತರ, ನೆಟ್ಟಿಗರು ದುಷ್ಕರ್ಮಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಮತ್ತು ಗುರುಗ್ರಾಮ್ ಪೊಲೀಸರಿ ತನಿಖೆ ನಡೆಸುವಂತೆ ಒತ್ತಾಯಿಸಿದರು. ಕೆಲವು ಬಳಕೆದಾರರು ವಾಹನದ ನಂಬರ್ ಪ್ಲೇಟ್ ಅನ್ನು ಗುರುತಿಸಲು ವೀಡಿಯೊ ತುಣುಕನ್ನು ಜೂಮ್ ಇನ್ ಮಾಡಿದ್ದಾರೆ, ಅದು ವಿಐಪಿ ಗಾಡಿ ಎಂದು ಗುರುತಿಸಿದ್ದಾರೆ.

“ನಾಚಿಕೆಗೇಡು. ಅಧಿಕಾರಿಗಳು ಕ್ರಮಕೈಗೊಳ್ಳಬೇಕು!” ಎಂದು ಒಬ್ಬರು ಕಾಮೆಂಟ್ ಮಾಡಿ್ದರೆ, ಮತ್ತೊಬ್ಬರು “ವಾಹನ ಸಂಖ್ಯೆ ವಿಡಿಯೋದಲ್ಲಿ ಕಾಣಿಸುತ್ತದೆ, ಕಳ್ಳತನವಾಗಿದ್ದಾರೆ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕು’ ಎಂದು ದುಬಾರಿ ಕಾರಿನ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಈ ವಿಡಿಯೋಗೆ ಕಾಮೆಂಟ್ ಮಾಡಿದ ಒಬ್ಬರ ಪ್ರಕಾರ, “ವದಂತಿಗಳನ್ನು ಹಬ್ಬಿಸುವುದನ್ನು ನಿಲ್ಲಿಸಿ, ಅವರು ನಮ್ಮ ಪರಿಸರವಾದಿ ಅಂಕಲ್. ಅವರು ರಸ್ತೆಗಳಲ್ಲಿ ಸಾಯುತ್ತಿರುವ ಸಸ್ಯಗಳನ್ನು ದತ್ತು ತೆಗೆದುಕೊಂಡು ಅವುಗಳಿಗೆ ಆರೈಕೆ ಮಾಡುತ್ತಾರೆ. ಸಸ್ಯಗಳನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ತೋರಿಸಲು ಅವುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಅವರು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ