ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್ನ (Mann ki Baat) 100ನೇ ಸಂಚಿಕೆ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ(United Nations headquarters) ನೇರಪ್ರಸಾರವಾಗಲಿದೆ. ಪ್ರಧಾನಿ ಮೋದಿಯವರ ಮನ್ ಕಿ ಬಾತ್ನ 100 ನೇ ಸಂಚಿಕೆಯು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿರುವ ಟ್ರಸ್ಟಿಶಿಪ್ ಕೌನ್ಸಿಲ್ ಚೇಂಬರ್‌ನಲ್ಲಿ ಏಪ್ರಿಲ್ 30 ರಂದು ನೇರಪ್ರಸಾರವಾಗಲಿರುವುದರಿಂದ ಐತಿಹಾಸಿಕ ಕ್ಷಣಕ್ಕೆ ಸಿದ್ಧರಾಗಿ ಎಂದು ಯುಎನ್‌ಗೆ ಭಾರತದ ಖಾಯಂ ಆಯೋಗ ಟ್ವೀಟ್‌ನಲ್ಲಿ ತಿಳಿಸಿದೆ.ಪ್ರಧಾನಿ ಮೋದಿಯವರ ಮಾಸಿಕ ರೇಡಿಯೋ ಭಾಷಣದ 100 ನೇ ಸಂಚಿಕೆಯು ಏಪ್ರಿಲ್ 30 ರಂದು ಬೆಳಿಗ್ಗೆ 11 ಕ್ಕೆ ಪ್ರಸಾರವಾಗಲಿದೆ. ಅದು ಭಾನುವಾರ ಮಧ್ಯರಾತ್ರಿ 1:30 ಕ್ಕೆ ನ್ಯೂಯಾರ್ಕ್‌ನಲ್ಲಿ ನಡೆದಿದೆ. ಯುಎನ್ ಪ್ರಧಾನ ಕಛೇರಿಯಲ್ಲಿ ಭಾನುವಾರದ ಮುಂಜಾನೆ ಕಾರ್ಯಕ್ರಮದ ನೇರ ಪ್ರಸಾರವು ಐತಿಹಾಸಿಕ ಮತ್ತು ಅಭೂತಪೂರ್ವವಾಗಿರುತ್ತದೆ. ಇದು ಯುಎನ್‌ನ ಟ್ರಸ್ಟಿಶಿಪ್ ಕೌನ್ಸಿಲ್ ಚೇಂಬರ್‌ನಲ್ಲಿ ಪ್ರಸಾರವಾಗಲಿದೆ. ಮನ್ ಕಿ ಬಾತ್ ಮಾಸಿಕ ಕಾರ್ಯಕ್ರಮವಾಗಿದ್ದು ಭಾರತದ ಅಭಿವೃದ್ಧಿಯ ಪ್ರಯಾಣದಲ್ಲಿ ಭಾಗವಹಿಸಲು ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತದೆ ಎಂದು ಖಾಯಂ ಆಯೋಗ ಹೇಳಿದೆ.
ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್, ಸಮುದಾಯ ಸಂಸ್ಥೆಗಳ ಜೊತೆಗೆ, ನ್ಯೂಜೆರ್ಸಿಯಲ್ಲಿರುವ ಭಾರತೀಯ-ಅಮೆರಿಕನ್ ಮತ್ತು ಡಯಾಸ್ಪೊರಾ ಸಮುದಾಯದ ಸದಸ್ಯರಿಗೆ 1:30 ಕ್ಕೆ ವಿಶೇಷ ಕಾರ್ಯಕ್ರಮದ ಸಂದರ್ಭದಲ್ಲಿ ‘ಮನ್ ಕಿ ಬಾತ್’ ನ 100 ನೇ ಸಂಚಿಕೆಯ ಪ್ರಸಾರವನ್ನು ಆಯೋಜಿಸುತ್ತಿದೆ.
Get ready for a historic moment ? as the 100th episode of PM Modi’s “Mann Ki Baat”?️ is set to go live on April 30th in Trusteeship Council Chamber at @UN HQ!
? #MannKiBaat has become a monthly national tradition, inspiring millions to participate in ??’s developmental journey pic.twitter.com/6ji4t1flmu
— India at UN, NY (@IndiaUNNewYork) April 28, 2023
ಏಪ್ರಿಲ್ 30, 2023 ರಂದು 01.30 ಗಂಟೆಗೆ #MannKiBaat100 ಅನ್ನು ಮಿಸ್ ಮಾಡಿಕೊಳ್ಳಬೇಡಿ! ಗೌರವಾನ್ವಿತ ಪ್ರಧಾನಿ ಮೋದಿ, ಭಾರತೀಯರು, ಭಾರತೀಯ ವಲಸಿಗರು ಮತ್ತು ಪ್ರಪಂಚದಾದ್ಯಂತದ ಕೇಳುಗರೊಂದಿಗೆ ಮನ್ ಕಿ ಬಾತ್ ನನ ಹೆಗ್ಗುರುತು 100 ನೇ ಸಂಚಿಕೆಯನ್ನು ಆಚರಿಸೋಣ ಎಂದು ಕಾನ್ಸುಲೇಟ್ ಟ್ವೀಟ್‌ನಲ್ಲಿ ಹೇಳಿದೆ.
ಇದನ್ನೂ ಓದಿ:Mann Ki Baat: ಪ್ರಧಾನಿ ಮೋದಿ ಜತೆ ಮನ್ ಕೀ ಬಾತ್ ಕೇಳಲಿದ್ದಾರೆ ಕರ್ನಾಟಕದ ಸಾಧಕರು
ಪ್ರಧಾನಿ ಮೋದಿ ‘ಮನ್ ಕಿ ಬಾತ್’ ನಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಇದನ್ನು ಮೊದಲು ಅಕ್ಟೋಬರ್ 3, 2014 ರಂದು ಪ್ರಸಾರ ಮಾಡಲಾಯಿತು. ಇದು ಪ್ರತಿ ತಿಂಗಳ ಕೊನೆಯ ಭಾನುವಾರದಂದು ಬೆಳಿಗ್ಗೆ 11 ಗಂಟೆಗೆ ಆಲ್ ಇಂಡಿಯಾ ರೇಡಿಯೋ (AIR) ಮತ್ತು ದೂರದರ್ಶನ (DD) ನೆಟ್‌ವರ್ಕ್‌ನಲ್ಲಿ ಪ್ರಸಾರವಾಗುತ್ತದೆ. 30 ನಿಮಿಷಗಳ ಕಾರ್ಯಕ್ರಮದ 100 ನೇ ಸಂಚಿಕೆ ಇಂದು( ಏಪ್ರಿಲ್ 30) ರಂದು ಪ್ರಸಾರವಾಗಲಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ