ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪುರಿ ಕಡಲತೀರದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಮಾಸಿಕ ರೇಡಿಯೊ ಪ್ರಸಾರವಾದ ಮನ್ ಕೀ ಬಾತ್ನ 100 ನೇ ಸಂಚಿಕೆಯ ಅಂಗವಾಗಿ ಹಲವಾರು ರೇಡಿಯೊಗಳೊಂದಿಗೆ ಮರಳು ಶಿಲ್ಪವನ್ನು ರಚಿಸಿದ್ದಾರೆ. ಪಟ್ನಾಯಕ್ ಸುಮಾರು 7 ಟನ್ ಮರಳನ್ನು ಬಳಸಿ 100 ರೇಡಿಯೋಗಳೊಂದಿಗೆ ಪ್ರಧಾನಿಯನ್ನು ಒಳಗೊಂಡ ಎಂಟು ಅಡಿ ಎತ್ತರದ ಮರಳು ಕಲೆಯನ್ನು ರಚಿಸಿದ್ದಾರೆ.
ಅವರ ಮರಳು ಕಲಾ ಶಾಲೆಯ ವಿದ್ಯಾರ್ಥಿಗಳು ಕಲಾಕೃತಿಯನ್ನು ಪೂರ್ಣಗೊಳಿಸಲು ಸಹಾಯ ಮಾಡಿದರು.
‘ಮನ್ ಕಿ ಬಾತ್’ ನ 100ನೇ ಸಂಚಿಕೆ ಇಂದು ಬೆಳಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ.
ಮನ್ ಕೀ ಬಾತ್ನ ರಾಜ್ಯದ ಸಾಧಕರ ಬಗ್ಗೆ ಪ್ರಧಾನಿ ಮೋದಿಯವರು ಪ್ರಸ್ತಾಪಿಸಿದ್ದು, ರಾಜ್ಯದ ಸಾಧಕರಿಗೆ ರಾಜಭವನಕ್ಕೆ ಬರುವಂತೆ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಮನ್ ಕೀ ಬಾತ್ನ 100ನೇ ಸಂಚಿಕೆಯ ಧ್ವನಿಮುದ್ರಣ ಪ್ರಯುಕ್ತ ಕರ್ನಾಟಕದ 7 ಮಂದಿ ಸಾಧಕರನ್ನು ಪ್ರಸಾರ ಭಾರತಿ ಆಹ್ವಾನಿಸಿದ್ದು, ಇವರು ಏಪ್ರಿಲ್ 26ರಂದು ದೆಹಲಿಗೆ ತೆರಳಿದ್ದರು ಎಂದು ತಿಳಿದು ಬಂದಿದೆ.
ಮತ್ತಷ್ಟು ಓದಿ: Mann Ki Baat: ಮನದ ಮಾತಿಗೆ ಶತ ಸಂಭ್ರಮ, 100 ಕೋಟಿ ಜನರನ್ನು ತಲುಪಿದ ಮನ್ ಕೀ ಬಾತ್
ಮನ್ ಕೀ ಬಾತ್ನ 100ನೇ ಸಂಚಿಕೆಯ ಪ್ರಸಾರವನ್ನು ರಾಜ್ಯದ ಸಾಧಕರು ಪ್ರಧಾನಿ ಅವರ ಜತೆಗೇ ಇದ್ದು ಕೇಳಲಿದ್ದಾರೆ. 7 ಜನ ಅತಿಥಿಗಳನ್ನು ರಾಜಭವನಕ್ಕೆ ಆಹ್ವಾನಿಸಲಾಗಿದೆ. ಬೆಳಿಗ್ಗೆ ಸುಮಾರಿಗೆ ರಾಜಭವನದಲ್ಲಿ ಹಾಜರಿರುವಂತೆ ಅವರಿಗೆ ಆಹ್ವಾನ ಕಳುಹಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
#WATCH | Odisha: Sand artist Sudarsan Pattnaik creates sand art at Puri Beach, ahead of the 100th episode of PM Narendra Modi’s monthly #MannKiBaat. pic.twitter.com/VIvmMsNABj
— ANI (@ANI) April 30, 2023
ಬೆಂಗಳೂರಿನ ಸುರೇಶ್, ಗದಗದ ಕಾವೆಂಶ್ರೀ ಅವರು ಕಲಾ ಚೇತನ ದ ಮೂಲಕ ಮಾಡುವ ಕಲೆ ಮತ್ತು ಸಂಸ್ಕೃತಿ ಸೇವೆ, ಅಡಿಕೆ ನಾರಿನಿಂದ ತಯಾರಿಸಿದ ಅನೇಕ ವಿಶಿಷ್ಟ ಉತ್ಪನ್ನಗಳನ್ನು ಲಂಡನ್ ಮತ್ತು ಯುರೋಪ್‌ನಂತಹ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಕಳುಹಿಸುತ್ತಿರುವ ಶಿವಮೊಗ್ಗದ ಸುರೇಶ್ ಮತ್ತು ಅವರ ಪತ್ನಿ ಮೈಥಿಲಿ ಅವರ ಬಗ್ಗೆ ಮೋದಿ ಮನ್ ಕೀ ಬಾತ್ನ ವಿವಿಧ ಆವೃತ್ತಿಗಳಲ್ಲಿ ಉಲ್ಲೇಖಿಸಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ