ಮೈಸೂರಿನ ಅರ್ಲಿ ಬರ್ಡ್ ಸಂಸ್ಥೆಯ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಈ ಸಂಸ್ಥೆಯು ಮಕ್ಕಳಿಗೆ ಪಕ್ಷಿ, ಪ್ರಕೃತಿಯ ಮಹತ್ವವನ್ನು ತಿಳಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ 116ನೇ ಮನ್ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ನೇಚರ್ ಎಜುಕೇಷನ್ ನೀಡುತ್ತಿರುವ ಸಂಸ್ಥೆ ಇದಾಗಿದ್ದು, ನಗರದಲ್ಲಿರುವ ಮಕ್ಕಳನ್ನು ಹಳ್ಳಿಗಳಿಗೆ ಕರೆದೊಯ್ದು ಪಕ್ಷಿ ಸಂಕುಲದ ಪರಿಚಯ ಮಾಡಿಕೊಡುವುದಷ್ಟೇ ಅಲ್ಲದೆ ಅದರಿಂದಾಗುವ ಪ್ರಯೋಜನಗಳ ಬಗ್ಗೆಯೂ ತಿಳಿ ಹೇಳುತ್ತಿದ್ದು, ಉತ್ತಮ ನಾಗರಿಕರನ್ನಾಗಿ ಮಾಡಲು ಶ್ರಮ ಪಡುತ್ತಿದ್ದಾರೆ. ಅರ್ಲಿ ಬರ್ಡ್ ಸಂಸ್ಥೆಯು ವಿಶೇಷ ಗ್ರಂಥಾಲಯ, ಸ್ಟೋರಿ ಬುಕ್ಗಳನ್ನು ಅಲ್ಲಿರಿಸಿದೆ ಎಂದು ಮೋದಿ ಹೇಳಿದರು.
ಈ ಸಂಸ್ಥೆಯು ಮಕ್ಕಳಿಗೆ ಪಕ್ಷಿಗಳನ್ನು ಪರಿಚಯಿಸಲು ಶಿಕ್ಷಣತಜ್ಞರು ಮತ್ತು ಹವ್ಯಾಸಿ ಪಕ್ಷಿವೀಕ್ಷಕರಿಗೆ ತರಬೇತಿ ನೀಡುತ್ತಾರೆ ಮತ್ತು ಸಮಾನ ಮನಸ್ಕ ಸಂಸ್ಥೆಗಳ ಸಹಭಾಗಿತ್ವದಲ್ಲಿ ಭಾರತದಾದ್ಯಂತ ಕಾರ್ಯಾಗಾರಗಳನ್ನು ನಡೆಸುತ್ತಾರೆ.
ಮಕ್ಕಳೊಂದಿಗೆ ಕೆಲಸ ಮಾಡುವ ಸ್ಥಳೀಯ ಗುಂಪುಗಳೊಂದಿಗೆ ಪಾಲುದಾರಿಕೆ ಮಾಡುವ ಮೂಲಕ ಸಾಧ್ಯವಾದಷ್ಟು ಜನರನ್ನು ತಲುಪುವ ಗುರಿ ಹೊಂದಿದೆ.
ಫ್ಲ್ಯಾಶ್ಕಾರ್ಡ್, ಪಾಕೆಟ್ ಮಾರ್ಗದರ್ಶಿಗಳು, ಪೋಸ್ಟ್ರ್ಗಳು, ಜಿಗ್ಸಾ ಪಸಲ್, ಹೊರಾಂಗಣ ಆಟಗಳು, ಸೃಜನಾತ್ಮಕ ಚಟುವಟಿಕೆಗಳನ್ನು ಹೊಂದಿವೆ.
ಜೀವವೈವಿಧ್ಯದಲ್ಲಿ ಗುಬ್ಬಚ್ಚಿಯ ಪ್ರಮುಖ ಕೊಡುಗೆ
ನೀವೆಲ್ಲರೂ ನಿಮ್ಮ ಬಾಲ್ಯದಲ್ಲಿ ಗುಬ್ಬಚ್ಚಿಯನ್ನು ನೋಡಿರಬೇಕು ಎಂದು ಪ್ರಧಾನಿ ಮೋದಿ ಹೇಳಿದರು. ನಮ್ಮ ಸುತ್ತಲಿನ ಜೀವವೈವಿಧ್ಯವನ್ನು ಕಾಪಾಡುವಲ್ಲಿ ಗುಬ್ಬಚ್ಚಿಗಳು ಪ್ರಮುಖ ಪಾತ್ರವಹಿಸುತ್ತವೆ. ಹೆಚ್ಚುತ್ತಿರುವ ನಗರೀಕರಣದಿಂದಾಗಿ ಗುಬ್ಬಚ್ಚಿ ನಮ್ಮಿಂದ ದೂರವಾಗಿದೆ. ಇಂದಿನ ಪೀಳಿಗೆಯ ಮಕ್ಕಳು ಈ ಪಕ್ಷಿಯನ್ನು ಚಿತ್ರಗಳಲ್ಲಿ ಮಾತ್ರ ನೋಡಿದ್ದಾರೆ. ಈಗ ಈ ಹಕ್ಕಿಯ ವಾಪಸಾತಿಗೆ ಹಲವು ಪ್ರಯತ್ನಗಳು ನಡೆಯುತ್ತಿವೆ. ನೀವೂ ಸಹ ನಿಮ್ಮ ಸುತ್ತ ಪ್ರಯತ್ನ ಮಾಡಿದರೆ, ಗುಬ್ಬಚ್ಚಿಗಳು ನಮ್ಮ ಜೀವನದ ಭಾಗವಾಗುತ್ತವೆ ಎಂದು ಮೋದಿ ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ