ಪಾಟ್ನಾದ ಸ್ಲಂನಲ್ಲಿ ಬೆಂಕಿ ಅವಘಡ; ಮನೆಯಲ್ಲಿದ್ದ ವಸ್ತುಗಳನ್ನು ಹೊತ್ತು ಜೀವಭಯದಿಂದ ಓಡಿದ ಜನ

|

Updated on: Apr 06, 2023 | 5:17 PM

ಭಯಭೀತರಾದ ನಿವಾಸಿಗಳು ತಮ್ಮ ವೈಯಕ್ತಿಕ ವಸ್ತುಗಳಾದ ಗ್ಯಾಸ್ ಸಿಲಿಂಡರ್‌ಗಳು, ಟ್ರಂಕ್‌ಗಳು ಮತ್ತು ಪೀಠೋಪಕರಣಗಳು ಮತ್ತು ಇತರ ವಸ್ತುಗಳ ಜೊತೆಗೆ ಪ್ರದೇಶದಿಂದ ಓಡಿಹೋಗುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ

ಪಾಟ್ನಾದ ಸ್ಲಂನಲ್ಲಿ ಬೆಂಕಿ ಅವಘಡ; ಮನೆಯಲ್ಲಿದ್ದ ವಸ್ತುಗಳನ್ನು ಹೊತ್ತು ಜೀವಭಯದಿಂದ ಓಡಿದ ಜನ
ಪಾಟ್ನಾ ಸ್ಲಂನಲ್ಲಿ ಬೆಂಕಿ
Follow us on

ಗುರುವಾರ ಮಧ್ಯಾಹ್ನ ಪಾಟ್ನಾದ (Patna)ಕೊಳೆಗೇರಿ ಪ್ರದೇಶದಲ್ಲಿ ಬೆಂಕಿ ಅವಘಡ (Fire Accident) ಸಂಭವಿಸಿದೆ. ಸುದ್ದಿ ಸಂಸ್ಥೆ ಎಎನ್‌ಐ ಹಂಚಿಕೊಂಡ ವಿಡಿಯೊದಲ್ಲಿ, ಶಾಸ್ತ್ರಿ ನಗರ (Shastri Nagar)ಪ್ರದೇಶದಿಂದ ಹೊಗೆ ಹೊರಹೊಮ್ಮುತ್ತಿರುವುದನ್ನು ಕಾಣಬಹುದು. ಈ ಬೆಂಕಿ ಅಲ್ಲಿನ ಗುಡಿಸಲುಗಳನ್ನು ಆವರಿಸಿದೆ. ಭಯಭೀತರಾದ ನಿವಾಸಿಗಳು ತಮ್ಮ ವೈಯಕ್ತಿಕ ವಸ್ತುಗಳಾದ ಗ್ಯಾಸ್ ಸಿಲಿಂಡರ್‌ಗಳು, ಟ್ರಂಕ್‌ಗಳು ಮತ್ತು ಪೀಠೋಪಕರಣಗಳು ಮತ್ತು ಇತರ ವಸ್ತುಗಳ ಜೊತೆಗೆ ಪ್ರದೇಶದಿಂದ ಓಡಿಹೋಗುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಒಬ್ಬ ವ್ಯಕ್ತಿಯು ಬೆಂಕಿಯಿಂದ ಬೇಗನೆ ದೂರವಿರಲು ನಿವಾಸಿಗಳನ್ನು ಕೇಳುವುದನ್ನು ಕೇಳಬಹುದು. ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಜನರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಪ್ರದೇಶದಿಂದ ಹೊರಕ್ಕೆ ಧಾವಿಸುತ್ತಿದ್ದು ಬೆಂಕಿ ಧಗಧಗನೆ ಉರಿಯುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು


ಗುರುವಾರ ಮುಂಜಾನೆ ಒಡಿಶಾದ ಝಾರ್ಸುಗುಡಾ ಜಿಲ್ಲೆಯಲ್ಲಿ ವಾಹನಗಳು ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಮೂವರು ಟ್ರಕ್ ಚಾಲಕರು ಸಜೀವ ದಹನಗೊಂಡ ನಂತರ  ಪಾಟ್ನಾದಲ್ಲಿ ಈ ಘಟನೆ  ಸಂಭವಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಜಾರ್ಸುಗುಡ ಸದರ್ ಪೊಲೀಸ್ ಠಾಣೆ ಬಳಿ ರಾಷ್ಟ್ರೀಯ ಹೆದ್ದಾರಿ 49 ರಲ್ಲಿ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ನಂತರ ಮೂರು ಟ್ರಕ್‌ಗಳ ಚಾಲಕರು ತಮ್ಮ ವಾಹನಗಳಿಂದ ಹೊರಬರಲು ಸಾಧ್ಯವಾಗಲಿಲ್ಲ, ನಂತರ ಅವರು ಜೀವಂತವಾಗಿ ಸುಟ್ಟುಹೋದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸಂತ್ರಸ್ತರನ್ನು ಇನ್ನೂ ಗುರುತಿಸಲಾಗಿಲ್ಲ ಎಂದು ಅವರು ಹೇಳಿದರು.

ಮತ್ತೊಂದು ರಸ್ತೆ ಅಪಘಾತದಲ್ಲಿ, ಬುಧವಾರ ರಾತ್ರಿ ಕಟಕ್‌ನ ಬಿದನಾಸಿ ಸ್ಕ್ವೇರ್ ಬಳಿ ಕಾರು ಮತ್ತು ಟ್ರಕ್ ಮುಖಾಮುಖಿ ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದಲ್ಲಿ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯಲ್ಲಿ ನಡೆದ ಘಟನೆಯೊಂದರಲ್ಲಿ ಮಾರುಕಟ್ಟೆಯೊಂದರಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ನಾಶವಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಬೆಂಕಿ ಹರಡುವ ಮೊದಲು ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳವನ್ನು ಕರೆಸಲಾಗಿದೆ,, ಯಾವುದೇ ಜೀವ ಹಾನಿ ವರದಿಯಾಗಿಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ: Anil Antony: ಹಿರಿಯ ಕಾಂಗ್ರೆಸ್ ನಾಯಕ ಎಕೆ ಆಂಟನಿ ಪುತ್ರ ಅನಿಲ್ ಆಂಟನಿ ಬಿಜೆಪಿಗೆ ಸೇರ್ಪಡೆ

ಉತ್ತರಾಖಂಡದ ನಂದಪ್ರಯಾಗದ ನಂದನಗರಕ್ಕೆ ಹೋಗುವ ಹೆದ್ದಾರಿಯಲ್ಲಿ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಅರ್ಧ ಡಜನ್‌ಗೂ ಹೆಚ್ಚು ಅಂಗಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ” ಎಂದು ಎಎನ್‌ಐ ಉಲ್ಲೇಖಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ