ಮೇಘಾಲಯ: ತಂದೆಯ ಎದುರೇ ಮಗಳ ಕತ್ತು ಸೀಳಿ ಹತ್ಯೆ

ತಂದೆಯ ಎದುರೇ ಮಗಳ ಕತ್ತು ಸೀಳಿ ಹತ್ಯೆ(Murder) ಮಾಡಿರುವ ಘಟನೆ ಮೇಘಾಲಯದ ಪಶ್ಚಿಮ ಖಾಸಿ ಹಿಲ್ಸ್​ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 25 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿ ತನ್ನ ತಂದೆಯೊಂದಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಮೈರಾಂಗ್​ ಪಿಂಡೆನ್​ಗುಮಿಯೊಂಗ್ ಗ್ರಾಮದ ಮಾರುಕಟ್ಟೆಗೆ ಹೋಗಿದ್ದಳು. ಮೃತರನ್ನು ಮೌಖಾಪ್ ಗ್ರಾಮದ ನಿವಾಸಿ ಫಿರ್ನೈಲಿನ್ ಖಾರ್ಸಿನ್ಟೀವ್ ಎಂದು ಗುರುತಿಸಲಾಗಿದೆ.

ಮೇಘಾಲಯ: ತಂದೆಯ ಎದುರೇ ಮಗಳ ಕತ್ತು ಸೀಳಿ ಹತ್ಯೆ
ಸಾವು

Updated on: Jul 01, 2025 | 3:17 PM

ಮೇಘಾಲಯ, ಜುಲೈ 01: ತಂದೆಯ ಎದುರೇ ಮಗಳ ಕತ್ತು ಸೀಳಿ ಹತ್ಯೆ(Murder) ಮಾಡಿರುವ ಘಟನೆ ಮೇಘಾಲಯದ ಪಶ್ಚಿಮ ಖಾಸಿ ಹಿಲ್ಸ್​ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 25 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿ ತನ್ನ ತಂದೆಯೊಂದಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಮೈರಾಂಗ್​ ಪಿಂಡೆನ್​ಗುಮಿಯೊಂಗ್ ಗ್ರಾಮದ ಮಾರುಕಟ್ಟೆಗೆ ಹೋಗಿದ್ದಳು.

ಮೃತರನ್ನು ಮೌಖಾಪ್ ಗ್ರಾಮದ ನಿವಾಸಿ ಫಿರ್ನೈಲಿನ್ ಖಾರ್ಸಿನ್ಟೀವ್ ಎಂದು ಗುರುತಿಸಲಾಗಿದೆ.ಪೊಲೀಸ್ ಅಧಿಕಾರಿಯ ಪ್ರಕಾರ, ಆರೋಪಿಯೇ  ಅವರ ಬಳಿಗೆ ಬಂದು ಯುವತಿಯೊಂದಿಗೆ ವಾಗ್ವಾದ ನಡೆಸಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿರುವುದಾಗಿ ಹೇಳಿದ್ದಾರೆ.

ಇದ್ದಕ್ಕಿದ್ದಂತೆ ಆ ವ್ಯಕ್ತಿ ಯುವತಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಯುವತಿಯನ್ನು ತಕ್ಷಣ ಮೈರಾಂಗ್ ಸಿವಿಲ್ ಆಸ್ಪತ್ರೆಗೆ ದಾಖಲಿಸಯಿತು. ಆದರೆ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಳು. ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮತ್ತಷ್ಟು ಓದಿ: ಬೆದರಿಕೆ ಹಾಕಿದ್ದಕ್ಕೆ ಪತಿಯನ್ನೇ ಕೊಂದ ಪತ್ನಿ: ಕೊಲೆ ಸುಳಿವು ಕೊಟ್ಟ ಖಾರದಪುಡಿ

ಮತ್ತೊಂದು ಘಟನೆ
ಆಸ್ಪತ್ರೆಯಲ್ಲಿ ಎಲ್ಲರೆದುರೇ ವಿದ್ಯಾರ್ಥಿನಿ ಮೈಮೇಲೆ ಕುಳಿತು ಕತ್ತು ಸೀಳಿದ ಯುವಕಆಸ್ಪತ್ರೆಯಲ್ಲಿ ಎಲ್ಲರೆದುರೇ ಯುವಕನೊಬ್ಬ ವಿದ್ಯಾರ್ಥಿನಿ ಮೈಮೇಲೆ ಹತ್ತಿ ಕುಳಿತು ಆಕೆಯ ಕತ್ತು ಸೀಳಿ ಕೊಲೆ(Murder) ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಜೂನ್ 27ರಂದು ನರಸಿಂಗ್​​ಪುರದ ಸರ್ಕಾರಿ ಜಿಲ್ಲಾ ಆಸ್ಪತ್ರೆಯೊಳಗೆ 12ನೇ ತರಗತಿ ವಿದ್ಯಾರ್ಥಿನಿಯನ್ನು ಅಭಿಷೇಕ್ ಕೋಶ್ಟಿ ಎಂಬಾತ ಎಲ್ಲರ ಕಣ್ಣೆದುರೇ ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ.

ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿ ಅಭಿಷೇಕ್ ಕೋಶ್ಟಿ ಬಾಲಕಿಯ ಕತ್ತು ಸೀಳುತ್ತಿರುವುದನ್ನು ತೋರಿಸಲಾಗಿದೆ. ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ಅಲ್ಲಿದ್ದ ಜನರು ಏನೂ ಮಾಡದೆ ನೋಡುತ್ತಲೇ ನಿಂತಿದ್ದರು. ಆಸ್ಪತ್ರೆಯ ನೆಲದ ಮೇಲೆ ರಕ್ತದ ಕೋಡಿಯೇ ಹರಿದಿತ್ತು. ಆದರೆ ಯಾರೂ ಸಹಾಯಕ್ಕೆ ಧಾವಿಸಿರಲಿಲ್ಲ.

ರೋಗಿಯನ್ನು ಗುಣಪಡಿಸಬೇಕಿದ್ದ ಜಾಗ ಪ್ರಾ ಕಸಾಯಿಖಾನೆಯಾಗಿ ಮಾರ್ಪಟ್ಟಿತ್ತು.ಕಪ್ಪು ಶರ್ಟ್ ಧರಿಸಿದ ಅಭಿಷೇಕ್, ಸಂಧ್ಯಾಳನ್ನು ಕಪಾಳಮೋಕ್ಷ ಮಾಡಿ, ನೆಲಕ್ಕೆ ಎಸೆದು, ಎದೆಯ ಮೇಲೆ ಕೂತು, ಚಾಕುವಿನಿಂದ ಕುತ್ತಿಗೆ ಕತ್ತರಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ