ಬೆದರಿಕೆ ಹಾಕಿದ್ದಕ್ಕೆ ಪತಿಯನ್ನೇ ಕೊಂದ ಪತ್ನಿ: ಕೊಲೆ ಸುಳಿವು ಕೊಟ್ಟ ಖಾರದಪುಡಿ
ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆ ಬಳಿ ರೈತನ ಮೃತದೇಹ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ನಾಪತ್ತೆಯಾಗಿದ್ದ ಐದು ದಿನಗಳ ನಂತರ ಶಂಕರ್ ಮೂರ್ತಿ ( 51) ಅವರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದ್ದು, ಪತ್ನಿಯೇ ಕೊಲೆ ಮಾಡಿರುವುದು ದೃಢಪಟ್ಟಿದೆ. ಇನ್ನು ಖಾರದಪುಡಿ ಕೊಟ್ಟ ಸುಳಿವಿನಿಂದ ಕೊಲೆಗಾತಿ ಪತ್ನಿಯ ನವರಂಗಿ ಆಟ ಬಟಾಬಲಾಗಿದೆ.

ತುಮಕೂರು, (ಜೂನ್ 29): ಜಿಲ್ಲೆ ತಿಪಟೂರು ತಾಲೂಕಿನ ಶಂಕರ್ ಮೂರ್ತಿ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ನಾಪತ್ತೆಯಾಗಿದ್ದ ಶಂಕರ್ ಮೂರ್ತಿ ಮೃತದೇಹ ನೊಣವಿನಕೆರೆ ಬಳಿ ಪತ್ತೆಯಾಗಿದ್ದು, ಪತ್ನಿಯೇ ಕೊಲೆ ಮಾಡ ಗಂಡ ಕಾಣೆಯಾಗಿದ್ದಾನೆಂದು ದೂರು ನೀಡಿ ನಾಟಕವಾಡಿರುವುದು ಬಟಾಬಯಲಾಗಿದೆ. ನಾಪತ್ತೆಯಾಗಿದ್ದ ಐದು ದಿನಗಳ ನಂತರ ಶಂಕರ್ ಮೂರ್ತಿ ( 51) ಅವರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದ್ದು, ಪತ್ನಿ ಸುಮಂಗಲಾ ತನ್ನ ಸಂಬಂಧಿ ನಾಗರಾಜನೊಂದಿಗೆ ಸೇರಿಕೊಂಡು ಶಂಕರ್ ಮೂರ್ತಿಯನ್ನು ಕೊಲೆ ಮಾಡಿದ್ದಾಳೆ. ಬಳಿಕ ಶವವನ್ನು ಗೋಣಿ ಚೀಲದಲ್ಲಿ ತುಂಬಿಕೊಂಡು ಸುಮಾರು 30 ಕಿ.ಮೀ ದೂರದಲ್ಲಿರುವ ತರುವೇಕೆರೆ ತಾಲೂಕಿನ ದಂಡನಶಿವಾರ ಪೊಲೀಸ್ ಠಾಣೆ ವ್ಯಾಪ್ತಿಯ ಜಮೀನಿನ ಬಾವಿಗೆ ಎಸೆದಿದ್ದಾರೆ.
ಜೂನ್ 24 ರಂದು ನೊಣವಿನಕೆರೆಯ ಕಾಡುಶೆಟ್ಟಿಹಳ್ಳಿಯಿಂದ ಶಂಕರ್ ಮೂರ್ತಿ ಕಾಣೆಯಾಗಿದ್ದರು. ಈ ಸಂಬಂಧ ಆತಂಕಗೊಂಡ ಕುಟುಂಬಸ್ಥರು ಮಿಸ್ಸಿಂಗ್ ಕೇಸ್ ದಾಖಲು ಮಾಡಿದ್ದರು. ಪ್ರಕರಣದ ತನಿಖೆ ವೇಳೆ ಖಾರದಪುಡಿ ಕೊಟ್ಟ ಸುಳಿವಿನಿಂದ ಶಂಕರ್ ಪತ್ನಿ ಸುಮಂಗಲ ಮೇಲೆ ಅನುಮಾನ ಬಂದಿದ್ದು, ಕೂಡಲೇ ಪೊಲೀಸರು ನಡೆಸಿದಾಗ ಪತಿಯ ಹತ್ಯೆಗೆ ಪತ್ನಿ ಸುಮಂಗಲ ಹಾಗೂ ಸಂಬಂಧಿ ನಾಗರಾಜ್ ಭಾಗಿಯಾಗಿರುವುದು ನಿಖರವಾಗಿದೆ.
ಇದನ್ನೂ ಓದಿ: ಪ್ರೇಮಿಗಳ ನಡುವೆ ಕಿರಿಕ್: ಆ ವಿಡಿಯೋದಿಂದಲೇ ದುರಂತ ಸಾವುಕಂಡ ಪ್ರೇಯಸಿ
ಹತ್ಯೆಯನ್ನು ಪೂರ್ವನಿಯೋಜಿತವಾಗಿ ಜೂನ್ 24ರ ರಾತ್ರಿ ರೂಪಿಸಿ ಕೈಗೊಂಡಿದ್ದು, ಕಾರದಪುಡಿ ಹಾಕಿ ತಲೆ ಹಾಗೂ ಕಾಲಿಗೆ ಬಲವಾಗಿ ಹೊಡೆದು, ಬಳಿಕ ಕುತ್ತಿಗೆ ಹಿಸುಕಿ ಶಂಕರ್ ಮೂರ್ತಿಯನ್ನು ಕೊಂದಿದ್ದರು. ಬಳಿಕ ಮೃತ ದೇಹವನ್ನು ಕಟ್ಟಿ ಚೀಲದಲ್ಲಿ ಹಾಕಿ, ಹೊಂಡಾ ಆ್ಯಕ್ಟೀವಾ ಬೈಕ್ ನಲ್ಲಿ ಗುಬ್ಬಿ ತಾಲೂಕಿನ ದೊಡ್ಡಗುಣಿಯ ಅರಣ್ಯ ಪ್ರದೇಶದ ಬಾವಿ ಬಳಿಯ ಪಂಪ್‌ಹೌಸ್ ಗೆ ತೆಗೆದುಕೊಂಡು ಹೋಗಿ ಬಿಸಾಡಿದ್ದರು.
ಕೊಲೆ ಸುಳಿವು ಕೊಟ್ಟ ಖಾರದಪುಡಿ
ಮೊದಲು ನಾನ್‌ವಿನಕೆರೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿತ್ತು. ಆದರೆ, ತನಿಖೆ ನಡೆಸುವಾಗ ಶಂಕರಮೂರ್ತಿ ಮಲಗುವ ಕೋಣೆಯಲ್ಲಿ ಮೆಣಸಿನ ಪುಡಿ ಎರಚಿರುವ ಗುರುತುಗಳು ಸಿಕ್ಕಿವೆ. ಇದರಿಂದ ಪೊಲೀಸರಿಗೆ ಅನುಮಾನ ಬಂದಿದೆ. ಪೊಲೀಸರು ಸುಮಂಗಲಾನನ್ನು ವಿಚಾರಣೆ ಮಾಡಿದ್ದಾರೆ. ಆಕೆಯ ಮೊಬೈಲ್‌ನ ಸಿಡಿಆರ್ ಪರಿಶೀಲನೆ ನಡೆಸಿದಾಗ ಅನ್ನು ಕೊಲೆ ರಹಸ್ಯ ಬಯಲಾಗಿದೆ. ಕೊನೆಗೆ ಸುಮಂಗಲಾ ತಾನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿರುವುದನ್ನು ಪೊಲೀಸರು ತಿಳಿಸಿದ್ದಾರೆ.
ಕೊಲೆ ಬೆದರಿಕೆ ಹಾಕಿದ್ದಕ್ಕೆ ಹತ್ಯೆ
ಮೃತ ಪತಿ ಶಂಕರ್ ಮೂರ್ತಿ ಹಿಂದಿನ ಅಕ್ರಮ ಸಂಬಂಧದ ಶಂಕೆಯಿಂದಾಗಿ ಇಬ್ಬರ ನಡುವೆ ಆಗಾಗ ಜಗಳ ಆಗುತ್ತಿದ್ದವು. ಗಲಾಟೆ ದಿನೇ ದಿನೇ ಹೆಚ್ಚಾಗಿದ್ದರಿಂದ ಕಳೆದ ಆರು ತಿಂಗಳ ಹಿಂದೆ ಶಂಕರ್ ಮೂರ್ತಿ ಹಾಗೂ ಸುಮಂಗಲಾ ದೂರಾಗಿದ್ದರು. ಬಳಿಕ ಸುಮಂಗಲಾ ಮಗಳ ಮದುವೆಯನ್ನು ಪತಿಗೆ ತಿಳಿಸದೇ ನೆರವೇರಿಸಿದ್ದಳು. ಇದು ಪತ್ನಿ ಶಂಕರ ಮೂರ್ತಿಯನ್ನು ಕೆರಳಿಸಿದ್ದು, ಪತ್ನಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಆತಂಕದಿಂದಲೇ ಸುಮಂಗಲಾ ತನ್ನ ಸಂಬಂಧಿ ನಾಗರಾಜ್ ನೊಂದಿಗೆ ಪತಿ ಶಂಕರಮೂರ್ತಿಯನ್ನು ಕೊಲೆ ಮಾಡಿದ್ದಾಳೆ. ಹೀಗಂತ ಸ್ವತಃ ಸುಮಂಗಲ ಪೊಲೀಸ್ ತನಿಖೆಯಲ್ಲಿ ಒಪ್ಪಿಕೊಂಡಿದ್ದಾಳೆ.
ಕೇವಲ ಇದೊಂದೇ ಕಾರಣಕ್ಕೆ ಕೊಲೆ ಮಾಡಲಾಗಿದ್ಯಾ ಅಥವಾ ಈ ಕೊಲೆ ಹಿಂದೆ ಇನ್ನೇನಾದರೂ ಕಾರಣ ಇದೆಯಾ ಎನ್ನುವ ಬಗ್ಗೆ ನೊಣವಿನಕೆರೆ ಪೊಲೀಸರು, ಸುಮಂಗಲ ಮತ್ತು ನಾಗರಾಜ್ ನನ್ನು ಇನ್ನಷ್ಟು ವಿಚಾರಣೆಗೊಳಪಡಿಸಿದ್ದಾರೆ.



