ತುಮಕೂರುನಲ್ಲಿ ವಿಶ್ವದಲ್ಲೇ ಅತಿಎತ್ತರದ ಅಕ್ವಾಡಕ್ಟ್ ಕೆನಾಲ್ ನಿರ್ಮಾಣ, ಇದರ ಉದ್ದ 10 ಕಿಮೀಗಿಂತ ಹೆಚ್ಚು
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಶಿರಾ ಶಾಸಕ ಟಿಬಿ ಜಯಚಂದ್ರ ಅವರು ಅಕ್ವಾಡಕ್ಟ್ ಕೆನಾಲ್ ವೀಕ್ಷಿಸುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಡ್ರೋಣ್ ಕೆಮೆರಾದಿಂದ ಸೆರೆಹಿಡಿದಿರುವ ವಿಹಂಗಮ ದೃಶ್ಯವನ್ನು ನೀವು ಇಲ್ಲಿ ವೀಕ್ಷಿಸುತ್ತಿರುವಿರಿ. ನೀರನ್ನು ಅದರ ಮೂಲದಿಂದ ದೂರದ ಸ್ಥಳಗಳಿಗೆ ಸಾಗಿಸಲು ಅಕ್ವಾಡಕ್ಟ್ ಕೆನಾಲ್ಗಳನ್ನು ನಿರ್ಮಿಸಲಾಗುತ್ತದೆ.
ತುಮಕೂರು, ಜೂನ್ 30: ತುಮಕೂರು ಜಿಲ್ಲೆ ವಿವಿಧ ಕಾರಣಗಳಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಕನ್ನಡಿಗರಿಗೆ ಹೆಮ್ಮೆ ಮತ್ತು ಅಭಿಮಾನದ ಸಂಗತಿ. ಸೌರಶಕ್ತಿಯ ಪಾರ್ಕ್ ಬಳಿಕ ಅಕ್ವಾಡಕ್ಟ್ ಕೆನಾಲ್ ಜಿಲ್ಲೆಯ ಗುಬ್ಬಿ ತಾಲೂಕಿನ ಬೇಳೂರು-ಶಿರಾ ರಸ್ತೆಯಿಂದ ಶುರುಗೊಂಡು ಬೆಳ್ಳಾವಿವರಗೆ ನಿರ್ಮಾಣಗೊಂಡಿದೆ ಮತ್ತು ಇದು ವಿಶ್ವದಲ್ಲೇ ಅತಿಎತ್ತರದ ಅಕ್ವಾಡಕ್ಟ್ ನಾಲೆ ಆಗಿರೋದು ಜಿಲ್ಲೆಯ ಹಿರಿಮೆಗಳಿಗೆ ಮತ್ತೊದು ಗರಿಸೇರಿದೆ. ನಮ್ಮ ತುಮಕೂರು ವರದಿಗಾರ ನೀಡುವ ಮಾಹಿತಿ ಪ್ರಕಾರ ನಾಲೆಯನ್ನು 120 ಅಡಿಗಳ ಎತ್ತರದಲ್ಲಿ ನಿರ್ಮಿಸಲಾಗಿದೆ, 2 ಕಾರುಗಳು ಸಲೀಸಾಗಿ ಪಾಸ್ ಆಗುವಷ್ಟು ಅಗಲವಾಗಿದೆ ಮತ್ತು 10.5 ಕಿಮೀನಷ್ಟು ಉದ್ದವಾಗಿದೆ. ಅಕ್ವಾಡಕ್ಟ್ ಕೆನಾಲ್ 3,600 ಕ್ಯೂಸೆಕ್ಸ್ ನೀರನ್ನು ಹರಸುವ ಸಾಮರ್ಥ್ಯ ಹೊಂದಿದೆ.
ಇದನ್ನೂ ಓದಿ: ಇ-ಖಾತೆ ಮಾಡಿಸಿಕೊಳ್ಳಿ, ವಂಚನೆಯಿಂದ ತಪ್ಪಿಸಿಕೊಳ್ಳಿ: ಡಿಸಿಎಂ ಡಿ. ಕೆ. ಶಿವಕುಮಾರ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ