AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು, ಡಿಕೆ ಶಿವಕುಮಾರ್ ಚೆನ್ನಾಗಿಯೇ ಇದ್ದೇವೆ, ಸರ್ಕಾರ ಬಂಡೆಯಂತೆ ಭದ್ರ: ಡಿಸಿಎಂ ಕೈಹಿಡಿದೆತ್ತಿ ಸಿದ್ದರಾಮಯ್ಯ ಘೋಷಣೆ

ನಾನು, ಡಿಕೆ ಶಿವಕುಮಾರ್ ಚೆನ್ನಾಗಿಯೇ ಇದ್ದೇವೆ, ಸರ್ಕಾರ ಬಂಡೆಯಂತೆ ಭದ್ರ: ಡಿಸಿಎಂ ಕೈಹಿಡಿದೆತ್ತಿ ಸಿದ್ದರಾಮಯ್ಯ ಘೋಷಣೆ

ರಾಮ್​, ಮೈಸೂರು
| Updated By: Ganapathi Sharma|

Updated on:Jun 30, 2025 | 2:06 PM

Share

ಶಾಸಕರ ಬಹಿರಂಗ ಹೇಳಿಕೆ, ಸಚಿವರಿಂದಲೇ ಭ್ರಷ್ಟಾಚಾರ ಆರೋಪ ಮತ್ತು ಕಾಂಗ್ರೆಸ್ ಆಂತರಿಕ ಸಂಘರ್ಷದ ಸಂಭದರ್ಭದಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಕೈಹಿಡಿದೆತ್ತಿ ನಾವಿಬ್ಬರೂ ಜತೆಯಾಗಿದ್ದೇವೆ ಎಂಬ ಸಂದೇಶವನ್ನು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಸಾರಿದರು. ಅಲ್ಲದೆ, ಸರ್ಕಾರ 5 ವರ್ಷ ಬಂಡೆಯಂತೆ ಸುಭದ್ರ ಎಂದರು. ವಿಡಿಯೋ ಇಲ್ಲಿದೆ ನೋಡಿ.

ಮೈಸೂರು, ಜೂನ್ 30: ‘ನಾನು ಮತ್ತು ಡಿಕೆ ಶಿವಕುಮಾರ್ ಚೆನ್ನಾಗಿಯೇ ಇದ್ದೇವೆ. ಈ ಸರ್ಕಾರ ಬಂಡೆ ತರ ಐದು ವರ್ಷ ಗಟ್ಟಿಯಾಗಿರುತ್ತದೆ’ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಕಾಂಗ್ರೆಸ್ ಆಂತರಿಕ ಸಂಘರ್ಷ, ಮತ್ತೊಂದೆಡೆ ಶಾಸಕರ ಬಳಿ ಮಾತುಕತೆಗೆ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಬೆಂಗಳೂರಿಗೆ ಬರುವ ಸಂದರ್ಭದಲ್ಲೇ ಸಿಎಂ ಈ ಹೇಳಿಕೆ ನೀಡಿದ್ದಾರೆ. ಕೆಆರ್​ಎಸ್​ ಡ್ಯಾಂಗೆ ಬಾಗಿನ ಅರ್ಪಿಸುವುದಕ್ಕೂ ಮುನ್ನ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಬರೀ ಸುಳ್ಳು ಹೇಳುತ್ತಾರೆ. ನಾನು ಮತ್ತು ಡಿಕೆ ಶಿವಕುಮಾರ್ ಚೆನ್ನಾಗಿಯೇ ಇದ್ದೇವೆ ಎಂದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jun 30, 2025 02:04 PM