AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎದೆನೋವು ಕಾಣಿಸಿಕೊಂಡಾಗ ಆಸ್ಪತ್ರೆಗೆ ಹೋಗುವುದನ್ನು ಮುಂದೂಡುವುದು ಸರಿಯಲ್ಲ: ಡಾ ಕೆಎಸ್ ರವೀಂದ್ರನಾಥ್

ಎದೆನೋವು ಕಾಣಿಸಿಕೊಂಡಾಗ ಆಸ್ಪತ್ರೆಗೆ ಹೋಗುವುದನ್ನು ಮುಂದೂಡುವುದು ಸರಿಯಲ್ಲ: ಡಾ ಕೆಎಸ್ ರವೀಂದ್ರನಾಥ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 30, 2025 | 3:27 PM

Share

ಕಳೆದ ವರ್ಷಕ್ಕೆ ಹೋಲಿಸಿದರೆ, ಹೃದ್ರೋಗಗಳಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆಯಲ್ಲಿ ಶೇಕಡ 8ರಿಂದ 10ರಷ್ಟು ಹೆಚ್ಚಾಗಿದೆ, ಜಯದೇವ ಆಸ್ಪತ್ರೆ ಬೆಂಗಳೂರು, ಮೈಸೂರು ಮತ್ತು ಕಲಬುರಗಿ ಸೇರಿದಂತೆ ಕೆಸಿ ಆಸ್ಪತ್ರೆ ಹಾಗೂ ಈಎಸ್ಐ ಆಸ್ಪತ್ರೆಗಳಲ್ಲಿರುವ ಸ್ಯಾಟೆಲೈಟ್ ಕೆಂದ್ರಗಳಲ್ಲಿ ಸೇರಿ ಪ್ರತಿದಿನ ಏನಿಲ್ಲವೆಂದರೂ 3,000 ಹೊರರೋಗಿಗಳ ಹೃದಯ ಸಂಬಂಧೀ ಕಾಯಿಲೆ ತಪಾಸಣೆ ನಡೆಯುತ್ತಿದೆ ಎಂದು ಡಾ ರವೀಂದ್ರನಾಥ್ ಹೇಳುತ್ತಾರೆ.

ಬೆಂಗಳೂರು, ಜೂನ್ 30: ಹಾಸನ ಜಿಲ್ಲೆ ಪುನಃ ಸುದ್ದಿಯಲ್ಲಿದೆ, ನಿನ್ನೆ 4ಜನ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. ಒಂದು ತಿಂಗಳಿಗೂ ಕೊಂಚ ಹೆಚ್ಚಿನ ಅವಧಿಯಲ್ಲಿ ಒಟ್ಟು 21 ಜನ ಹಾರ್ಟ್ ಅಟ್ಯಾಕ್ ನಿಂದ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರು ಜಯದೇವ ಹೃದಯ ರಕ್ತನಾಳ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಪ್ರಭಾರ ನಿರ್ದೇಶಕರಾಗಿರುವ ಡಾ ಕೆಎನ್ ರವೀಂದ್ರನಾಥ್ (Dr KN Ravindranath) ಅವರು ಹೇಳುವ ಪ್ರಕಾರ ಹಾಸನ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಸ್ಟೆಮಿ (ಎಸ್​ಟಿ ಸೆಗ್ಮೆಂಟ್ ಎಲಿವೇಶನ್ ಮಯೋಕಾರ್ಡಿಯಲ್ ಇಂಫಾಕ್ಷನ್) ಇಲ್ಲ, ಜಿಲ್ಲಾಸ್ಪತ್ರೆಯಲ್ಲಿ ಹೃದ್ರೋಗ ತಜ್ಞರಿದ್ದ್ದಾರೆ ಮತ್ತು ಆ್ಯಂಜಿಯೋಗ್ರಾಮ್ ಹಾಗೂ ಅ್ಯಂಜಿಯೋಪ್ಲಾಸ್ಟ್ರಿ ಮಾಡುವ ಸೌಲಭ್ಯಗಳಿವೆ. ಹಾಸನ ಜಿಲ್ಲೆಯಲ್ಲಿ ಹೃದಯಾಘಾ ಪ್ರಮಾಣ ಹೆಚ್ಚುತ್ತಿರುವುದರ ಹಿಂದೆ ಕೋವಿಡ್ ಲಸಿಕೆಯ ಪಾತ್ರವೇನಾದರೂ ಇದೆಯಾ ಅಂತ ತನಿಖೆ ಮಾಡಲು ತಮ್ಮ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಲಾಗಿದೆ, ಶೀಘ್ರದಲ್ಲೇ ಒಂದು ವರದಿಯನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಗುವುದು ಎಂದು ಡಾ ರವೀಂದ್ರನಾಥ್ ಹೇಳಿದರು.

 

ಇದನ್ನೂ ಓದಿ:  ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಮತ್ತೊಬ್ಬರು ಬಲಿ, ಕಳೆದೊಂದು ತಿಂಗಳಲ್ಲಿ ಹೃದಯಾಘಾತದಿಂದ 16ನೇ ದುರ್ಮರಣ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ