ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಮತ್ತೊಬ್ಬರು ಬಲಿ, ಕಳೆದೊಂದು ತಿಂಗಳಲ್ಲಿ ಹೃದಯಾಘಾತದಿಂದ 16ನೇ ದುರ್ಮರಣ
ಕಳೆದ ಒಂದು ತಿಂಗಳ ಅವಧಿಯಲ್ಲಿ ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೊಳಗಾಗಿ ಸಾಯುತ್ತಿರರುವವರಲ್ಲಿ ಗೋವಿಂದ 16ನೇಯವರು. ಜಿಲ್ಲಾ ಉಸ್ತುವಾರಿ ಸಚಿವರು, ವೈದ್ಯಾಧಿಕಾರಿಗಳು ಮತ್ತು ಸಂಬಂಧಪಟ್ಟವರೆಲ್ಲ ಸೇರಿ ಕಾರಣ ಕಂಡುಹಿಡಿಯಬೇಕು ಎಂದು ಗೋವಿಂದ ಸ್ನೇಹಿತರು ಹೇಳುತ್ತಾರೆ. ಉಸ್ತುವಾರಿ ಸಚಿವರು ಹುಟ್ಟುಹಬ್ಬ ಆಚರಿಸಿಕೊಳ್ಳುವುದರಲ್ಲಿ, ಸೆಪ್ಟೆಂಬರ್ ಕ್ರಾಂತಿಯ ಬಗ್ಗೆ ಹೇಳಿಕೆ ನೀಡೋದ್ರಲ್ಲಿ ಮಗ್ನರಾಗಿದ್ದಾರೆ.
ಹಾಸನ, ಜೂನ್ 28: ಹಾಸನ ಜಿಲ್ಲೆಯಲ್ಲಿ ಚಿಕ್ಕ ವಯಸ್ಸಿನ ಜನ ಹೃದಯಾಘಾತಕ್ಕೊಳಗಾಗಿ ಸಾಯುತ್ತಿರುವುದು ಒಂದು ದೊಡ್ಡ ಮಿಸ್ಟರಿಯಾಗಿ ಪರಿಣಮಿಸಿದೆ. ಇಂದು ಬೆಳಗ್ಗೆ ಸುಮಾರು 7 ಗಂಟೆಗೆ 37-ವರ್ಷ ವಯಸ್ಸಿನ ಆಟೋ ಚಾಲಕ ಗೋವಿಂದ (Govind, autorickshaw driver) ಎನ್ನುವವರು ಹಾರ್ಟ್ ಅಟ್ಯಾಕ್ನಿಂದ ಸಾವನ್ನಪ್ಪಿದ್ದಾರೆ. ಆಟೋ ಓಡಿಸುವಾಗಲೇ ಅವರಿಗೆ ಎದೆನೋವು ಕಾಣಿಸಿಕೊಂಡಿದೆ ಮತ್ತು ವಾಹನವನ್ನು ಓಡಿಸಿಕೊಂಡೇ ಜಿಲ್ಲಾಸ್ಪತ್ರೆವರೆಗೆ ಹೋಗಿದ್ದಾರೆ. ಅವರನ್ನು ದಾಖಲಿಸಿಕೊಲ್ಳುವಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿದೆ. ಅವರ ಸ್ನೇಹಿತರು ಹೇಳುವ ಪ್ರಕಾರ ಗೋವಿಂದ್ಗೆ ಹೇಳಿಕೊಳ್ಳುವಂಥ ದುರಭ್ಯಾಸಗಳು ಇರಲಿಲ್ಲ, ವಾರದಲ್ಲಿ 2-3 ಸಲ ಮದ್ಯ ಸೇವಿಸುತ್ತಿದ್ದರಂತೆ, ಸಿಗರೇಟು ಸೇದುವ ಗುಟ್ಕಾ ಜಗಿಯುವ ಅಭ್ಯಾಸ ಅವರಿಗೆ ಇರಲಿಲ್ಲ.
ಇದನ್ನೂ ಓದಿ: ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಸ್ಫೋಟಕ ಕಾರಣ ಬಿಚ್ಚಿಟ್ಟ ಡಿಹೆಚ್ಓ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ

ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ

ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ

ಕೀಟನಾಶಕ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
