Video: ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆಯಲ್ಲಿ ಪತ್ನಿ ಪ್ರೀತಿ ಜೊತೆ ಗೌತಮ್ ಅದಾನಿ ಭಾಗಿ
ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆ ಪ್ರಾರಂಭವಾಗಿದೆ. ಗೌತಮ್ ಅದಾನಿ ಮತ್ತು ಅವರ ಪತ್ನಿ ಪ್ರೀತಿ ಅದಾನಿ ಭಾಗವಹಿಸಿದ್ದಾರೆ. ಅದಾನಿ ಗ್ರೂಪ್ 40 ಲಕ್ಷ ಜನರಿಗೆ ಉಚಿತ ಆಹಾರ ಮತ್ತು ಪಾನೀಯ ಒದಗಿಸುತ್ತಿದೆ. ಇದು ಪ್ರಯಾಗ್‌ರಾಜ್‌ನ ಕುಂಭಮೇಳದ ನಂತರದ ಅವರ ಮತ್ತೊಂದು ದೊಡ್ಡ ಸೇವಾ ಕಾರ್ಯಕ್ರಮ. ರಥಯಾತ್ರೆ ಜುಲೈ 4 ರವರೆಗೆ ನಡೆಯಲಿದೆ.
ನಿನ್ನೆಯಿಂದ ವಿಶ್ವಪ್ರಸಿದ್ಧ ಪುರಿಯ ಜಗನ್ನಾಥ ರಥಯಾತ್ರೆ ಪ್ರಾರಂಭವಾಗಿದೆ. ಈ ರಥಯಾತ್ರೆಯಲ್ಲಿ ಜಗನ್ನಾಥ, ಬಲರಾಮ ಹಾಗೂ ಸುಭದ್ರೆಯರ ವಿಗ್ರಹಗಳನ್ನು ಜಗನ್ನಾಥ ದೇಗುಲದಿಂದ ಗುಂಡಿಚಾ ದೇಗುಲದವರೆಗೆ ರಥದಲ್ಲಿ ಕರೆದೊಯ್ಯಲಾಗುತ್ತದೆ. ಎರಡನೇ ದಿನವಾದ ಇಂದು ದೇಶದ ಶ್ರೀಮಂತ ಉದ್ಯಮಿ, ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಮತ್ತು ಅವರ ಪತ್ನಿ ಪ್ರೀತಿ ಅದಾನಿ, ಪುತ್ರ ಕರಣ್ ಅದಾನಿ ಜೊತೆಗೆ ರಥಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಇದಲ್ಲದೇ ಅದಾನಿ ಗ್ರೂಪ್ ಈ ಹಿಂದೆ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಲಕ್ಷಾಂತರ ಭಕ್ತರಿಗೆ ಸಹಾಯ ಮಾಡಿದ ಹಾಗೆಯೇ ಜುಲೈ 8ರವರೆಗೂ ವಿಶ್ವಖ್ಯಾತ ಜಗನ್ನಾಥ ರಥಯಾತ್ರೋತ್ಸವದಲ್ಲಿ ವಿವಿಧ ಸೇವೆ ನಡೆಸುತ್ತಿದೆ. ಪುರಿಯ ವಿವಿಧೆಡೆ ಆಹಾರ ಮತ್ತು ಪಾನೀಯದ ಸ್ಟಾಲ್ಗಳನ್ನು ಇಟ್ಟು 40 ಲಕ್ಷ ಉಚಿತ ಆಹಾರ ಮತ್ತು ಪಾನೀಯದ ವ್ಯವಸ್ಥೆ ಮಾಡಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ