ಉತ್ತಮ ಮಳೆ, ರೈತನ ಮುಖದಲ್ಲಿ ಮಂದಹಾಸ; ಈ ಬಾರಿ ವಿಜೃಂಭಣೆಯಿಂದ ದಸರಾ ಮಹೋತ್ಸವ: ಸಿದ್ದರಾಮಯ್ಯ
ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗುತ್ತಿದೆ ಮತ್ತು ರೈತರು ಅಪಾರ ಸಂತಸದಲ್ಲಿದ್ದಾರೆ, ಕೃಷಿ ಚಟುಬಟಿಕೆಗಳು ರಾಜ್ಯಾದ್ಯಂತ ನಡೆಯುತ್ತಿವೆ, ಸರ್ಕಾರದ ಆಡಳಿತ ಬಗ್ಗೆ ಅವರಲ್ಲಿ ತೃಪ್ತಿಯಿದೆ, ಇದೇ ಹಿನ್ನೆಲೆಯಲ್ಲಿ 2025 ರ ದಸರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸರ್ಕಾರ ನಿರ್ಧರಿಸಿದೆ, ತಮ್ಮ ಅಂದಾಜಿನ ಪ್ರಕಾರ ಈ ಸಲ 10 ಲಕ್ಷಕ್ಕೂ ಹೆಚ್ಚು ಜನ ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು, ಜೂನ್ 28: ವಿಧಾನಸೌಧದಲ್ಲಿ ದಸರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಉನ್ನತ ಸಮಿತಿ ಸಭೆ ನಡೆಸಿದ ಬಳಿಕ ಪ್ರೆಸ್ ಬ್ರೀಫಿಂಗ್ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಾರಿಯ ದಸರಾ ಕೊಂಚ ಮುಂಚಿತವಾಗಿ ಬಂದಿದ್ದು ಸೆಪ್ಟಂಬರ್ 22 ರಿಂದ ಅಕ್ಟೋಬರ್ 2ರವರೆಗೆ ನಡೆಯಲಿದೆ ಎಂದರು. ಅಧಿಕ ಪಂಚಮಿ ನಿಮಿತ್ತ 2025ರ ದಸರಾ ಉತ್ಸವ 10 ದಿನಗಳ ಬದಲಿಗೆ 11 ದಿನಗಳ ಕಾಲ ನಡೆಯಲಿದೆ, 11 ದಿನಗಳ ದಸರಾ ಮಹೋತ್ಸವ ಮೊದಲ ಸಲವೇನೂ ಬಂದಿಲ್ಲ, ಇದಕ್ಕಿಂತ ಮೊದಲು 8 ಸಲ ಹೀಗಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಕಾವೇರಿ ಆರತಿ ನಡೆವ ಬಗ್ಗೆ ಸಿದ್ದರಾಮಯ್ಯ ಅಪ್ಡೇಟ್ ನೀಡಲಿಲ್ಲ.
ಇದನ್ನೂ ಓದಿ: ಈವರೆಗೆ ಯಾರೂ ಮಾಡದ ದಾಖಲೆ ಬರೆಯಲು ಸಿಎಂ ಸಿದ್ದರಾಮಯ್ಯ ಸಿದ್ಧ!
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos