
ಇಂದೋರ್, ಆಗಸ್ಟ್ 30: ವಾರದಿಂದ ನಾಪತ್ತೆಯಾಗಿರುವ ಕಾಲೇಜು ವಿದ್ಯಾರ್ಥಿನಿ ಎಲೆಕ್ಟ್ರಿಷಿಯನ್ನ ಮದುವೆ(Marriage)ಯಾಗಿ ಹಿಂದಿರುಗಿರುವ ಘಟನೆ ಇಂದೋರ್ನಲ್ಲಿ ನಡೆದಿದೆ. ಅಂತಿಮ ವರ್ಷದ ಬಿಬಿಎ ವಿದ್ಯಾರ್ಥಿನಿ ಏಳು ದಿನಗಳ ನಂತರ ಹಿಂತಿರುಗಿದ್ದು, ರತ್ಲಂಗೆ ಹೋಗುವ ರೈಲಿನಲ್ಲಿ ಭೇಟಿಯಾಗಿದ್ದ ಎಲೆಕ್ಟ್ರಿಷಿಯನ್‌ನನ್ನು ಮದುವೆಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.
ವಿದ್ಯಾರ್ಥಿನಿ ಶ್ರದ್ಧಾ ತನ್ನ ಗೆಳೆಯ ಸಾರ್ಥಕ್ ಜೊತೆ ಓಡಿಹೋಗಲು ಯೋಜಿಸಿದ್ದಾಗಿ ಬಹಿರಂಗಪಡಿಸಿದಳು. ಆದರೆ, ಸಾರ್ಥಕ್ ರೈಲ್ವೆ ನಿಲ್ದಾಣಕ್ಕೆ ಬಾರದಿದ್ದಾಗ, ಅವಳು ರತ್ಲಂಗೆ ರೈಲು ಹತ್ತಿದ್ದಳು. ಅಲ್ಲಿ ಅವಳು ಎಲೆಕ್ಟ್ರಿಷಿಯನ್ನ ಭೇಟಿಯಾಗಿ ಆತನನ್ನು ಮದುವೆಯಾಗಿರುವುದಾಗಿ ಹೇಳಿದ್ದಾರೆ.
ಕರಣ್‌ದೀಪ್ ಇಂದೋರ್‌ನ ಕಾಲೇಜಿನಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದಾನೆ.ಕರಣ್‌ದೀಪ್ ಹಾಗೂ ತಾನು ಒಂದೇ ರೈಲಿನಲ್ಲಿ ಪ್ರಯಾಣಿಸುತ್ತಿರುವುದನ್ನು ನೋಡಿ ಆಶ್ಚರ್ಯವಾಯಿತು ಎಂದು ಶ್ರದ್ಧಾ ಹೇಳಿದ್ದಾಳೆ.ಮತ್ತು ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಮೊದಲು ಅವರು ಮಂದ್ಸೌರ್‌ಗೆ ಹೋಗಿ ನಂತರ ಸುಮಾರು 250 ಕಿಲೋಮೀಟರ್ ದೂರದಲ್ಲಿರುವ ಮಹೇಶ್ವರಕ್ಕೆ ಹೋಗಿ, ಅಲ್ಲಿ ದೇವಸ್ಥಾನದಲ್ಲಿ ವಿವಾಹವಾದರು. ಬಳಿಕ ಅವರು ನೇರವಾಗಿ ಇಂದೋರ್ ಪೊಲೀಸ್ ಠಾಣೆಗೆ ಮರಳಿದರು.
ಮತ್ತಷ್ಟು ಓದಿ: ಬೆಳಗ್ಗೆ ತಾಳಿ ಕಟ್ಟುವಾಗ ಮದುವೆ ಬೇಡವೆಂದ್ಲು, ಸಂಜೆಯೇ ಪ್ರಿಯಕರನ ಜತೆ ವಿವಾಹವಾದ್ಲು!
ಏತನ್ಮಧ್ಯೆ, ಪೊಲೀಸರು ಶ್ರದ್ಧಾಳ ಹೇಳಿಕೆಯಿಂದ ಇನ್ನೂ ಮನವರಿಕೆಯಾಗಿಲ್ಲ ಮತ್ತು ಮದುವೆ ಪ್ರಮಾಣಪತ್ರವನ್ನು ಒದಗಿಸುವಂತೆ ಕೇಳಿದ್ದಾರೆ. ಸಾರ್ಥಕ್ನ ಪ್ರಶ್ನಿಸಿದಾಗ ಆತ ಶ್ರದ್ಧಾಳೊಂದಿಗೆ ಹಲವು ದಿನಗಳಿಂದ ಸಂಪರ್ಕದಲ್ಲಿ ಇರಲಿಲ್ಲ ಎಂದು ಹೇಳಿಕೊಂಡಿದ್ದಾನೆ. ಮಗಳು ಮದುವೆಯಾಗಿರುವುದಾಗಿ ಹೇಳಿಕೊಂಡಾಗ ಆಘಾತಕ್ಕೊಳಗಾದ ಆಕೆಯ ತಂದೆ ಅನಿಲ್ ತಿವಾರಿ, ನಾನು ಈ ಮದುವೆಗೆ ಒಪ್ಪುವುದಿಲ್ಲ ಎಂದಿದ್ದಾರೆ.
ಶ್ರದ್ಧಾಳ ಮಾನಸಿಕ ಸ್ಥಿತಿಯ ಬಗ್ಗೆ ಮತ್ತಷ್ಟು ಕಳವಳ ವ್ಯಕ್ತಪಡಿಸಿದ್ದು, ಕರಣ್‌ದೀಪ್ ಆಕೆ ಆತ್ಮಹತ್ಯೆ ಮಾಡಿಕೊಳ್ಳದಂತೆ ರಕ್ಷಿಸಿದ್ದಾಗಿ ಹೇಳಿಕೊಂಡಿದ್ದಾನೆ. ಆದರೆ ನನ್ನ ಮಗಳು ಮಾನಸಿಕವಾಗಿ ಸ್ಥಿರವಾಗಿಲ್ಲ. ಅವಳು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದಾಗ ನಿಲ್ದಾಣದಲ್ಲಿ ಅವಳನ್ನು ಭೇಟಿಯಾಗಿದ್ದಾಗಿ ಕರಣ್‌ದೀಪ್ ಸ್ವತಃ ನನಗೆ ಹೇಳಿದ್ದರು, ಈಗ ಆಕೆ ಬೇರೆಯದ್ದೇ ಕಥೆ ಹೇಳುತ್ತಿದ್ದಾಳೆ ಎಂದಿದ್ದಾರೆ. ಅವಳು ಕಾಣೆಯಾದಾಗ ಅವಳ ಬಗ್ಗೆ ಮಾಹಿತಿ ನೀಡುವವರಿಗೆ ಕುಟುಂಬವು 51,000 ರೂ. ಬಹುಮಾನವನ್ನು ಘೋಷಿಸಿತ್ತು.
ಆಗಸ್ಟ್ 23 ರಂದು, ಹತ್ತಿರದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಶ್ರದ್ಧಾ ಮೊಬೈಲ್ ಫೋನ್ ಇಲ್ಲದೆ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಮನೆಯಿಂದ ಹೊರಗೆ ಹೋಗುತ್ತಿರುವುದು ಕಂಡುಬಂದಿದ್ದವು. ಆಕೆಯ ಕಣ್ಮರೆಯಾದ ನಂತರ, ಕುಟುಂಬ ಮತ್ತು ಪೊಲೀಸರಿಗೆ ಒಂದು ವಾರದವರೆಗೆ ಯಾವುದೇ ಮಹತ್ವದ ಸುಳಿವುಗಳು ಸಿಗಲಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:02 am, Sat, 30 August 25