
ತಿರುಚ್ಚಿ, ನವೆಂಬರ್ 02: ಎರಡು ದಿನಗಳಿಂದ ನಾಪತ್ತೆ(Missing)ಯಾಗಿದ್ದ ಯುವತಿ ಕಾಡಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ತಮಿಳುನಾಡಿನ ತಿರುಚ್ಚಿಯಲ್ಲಿ ನಡೆದಿದೆ. ಶ್ರೀನಿವಾಸಪುರಂ ನಿವಾಸಿಯಾಗಿರುವ ಈ ಮಹಿಳೆ ಗುರುವಾರದಿಂದ ಕೆಲಸಕ್ಕೆ ಇಂಟರ್ವ್ಯೂಗೆಂದು ಮನೆಯಿಂದ ಹೊರಟಿದ್ದಳು ಹಿಂದಿರುಗಿರಲಿಲ್ಲ.
ಆಕೆಯ ಪೋಷಕರು ನಾಪತ್ತೆಯಾದ ಮಗಳ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸ್ಥಳೀಯ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ತನಿಖೆಯ ನಂತರ, ಪೊಲೀಸರು ಸಣಮಂಗಲಂ ಅರಣ್ಯ ಪ್ರದೇಶದಲ್ಲಿ ಆಕೆಯ ಮೊಬೈಲ್ ಫೋನ್ ಸಿಗ್ನಲ್ ಪತ್ತೆಹಚ್ಚಿದರು.
ಅದೇ ಕಾಡಿನಲ್ಲಿ ಶವವೊಂದು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎನ್ನುವ ಮಾಹಿತಿ ಪೊಲೀಸರಿಗೆ ಬಂದಿತ್ತು. ಪೊಲೀಸರು ಶವವನ್ನು ವಶಪಡಿಸಿಕೊಂಡು, ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದರು ಮತ್ತು ಪತ್ತೆಯಾದ ಶವ ಕಾಣೆಯಾದ ಆಕೆಯ ಮಗಳದ್ದೇ ಎಂದು ಗುರುತಿಸಲು ಬಲಿಪಶುವಿನ ತಾಯಿಗೆ ಕರೆ ಮಾಡಿದರು.
ಆ ತಾಯಿ ಆ ಶವ ತನ್ನ ಮಗಳದ್ದು ಎಂದು ಗುರುತಿಸಿದ ತಕ್ಷಣ ದುಃಖ ಉಮ್ಮಳಿಸಿ ಬಂದಿತ್ತು. ಪೊಲೀಸರು ಈಗ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಮಹಿಳೆಯ ಕೊಲೆಯ ಹಿಂದಿನ ಎಲ್ಲಾ ಕೋನಗಳನ್ನು ಹುಡುಕುತ್ತಿದ್ದಾರೆ.
ಮತ್ತಷ್ಟು ಓದಿ: ಕಾಲೇಜು ವಿದ್ಯಾರ್ಥಿನಿ ನಾಪತ್ತೆ, ಎಲೆಕ್ಟ್ರಿಷಿಯನ್ನ ಮದುವೆಯಾಗಿ ಹಿಂದಿರುಗಿದ ಶ್ರದ್ಧಾ
ಏತನ್ಮಧ್ಯೆ, ಈ ಘಟನೆಯು ರಾಜ್ಯದಲ್ಲಿ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ ಮತ್ತು ಬಿಜೆಪಿ ನಡುವೆ ರಾಜಕೀಯ ಸಮರಕ್ಕೆ ನಾಂದಿ ಹಾಡಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ವಿನೋಜ್ ಪಿ ಸೆಲ್ವಂ ಅವರು ಡಿಎಂಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಡಿಎಂಕೆ ಆಡಳಿತದಲ್ಲಿ ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ ಎಂದು ಹೇಳಿದ್ದಾರೆ.
ನಿದ್ರೆಯಲ್ಲಿರುವ ಡಿಎಂಕೆ ಸರ್ಕಾರ ತಾಯಿಯ ಕೂಗಿಗೆ ಸ್ಪಂದಿಸುತ್ತದೆಯೇ? ತಿರುಚ್ಚಿ ಬಳಿ, ಅರಣ್ಯ ಪ್ರದೇಶದಿಂದ ಸುಟ್ಟ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ. ಬೆಳಗ್ಗೆ ಇಂಟರ್ವ್ಯೂಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ತನ್ನ ಮಗಳನ್ನು ಚಿತ್ರಹಿಂಸೆ ನೀಡಿ ಕ್ರೂರವಾಗಿ ಕೊಲ್ಲಲಾಗಿದೆ ಎಂದು ತಿಳಿದಾಗ ತಾಯಿಯ ಹೃದಯ ಭಯ ಮತ್ತು ಸಂಕಟದಿಂದ ನಡುಗುತ್ತಿರಬೇಕು ಎಂದು ಸೆಲ್ವಂ ಹೇಳಿದರು.
ರಾಜ್ಯದಲ್ಲಿ ಐದು ವರ್ಷಗಳ ಡಿಎಂಕೆ ಆಡಳಿತವನ್ನು ಕೊನೆಗೊಳಿಸಲು ಕರೆ ನೀಡಿದ ಬಿಜೆಪಿ ನಾಯಕರು, ಈ ಡಿಎಂಕೆ ಆಡಳಿತ ಸಾಕು, ಜನರ ಸಂಕಷ್ಟಗಳು ಕೊನೆಗೊಳ್ಳಬೇಕು ಎಂದು ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ