ಸಾಮಾಜಿಕ ನ್ಯಾಯ ಸಭೆ ಮೂಲಕ ವಿರೋಧ ಪಕ್ಷಗಳನ್ನು ಒಗ್ಗೂಡಿಸಿದ ಎಂಕೆ ಸ್ಟಾಲಿನ್

|

Updated on: Apr 03, 2023 | 8:04 PM

ಎರಡು ಅಥವಾ ಮೂರು ಪಕ್ಷಗಳು ಬಿಜೆಪಿ ವಿರುದ್ಧ ಹೋರಾಡಲು ಬಯಸುವುದಿಲ್ಲ. ಇದು ಅದೋ ಇದೋ ಎಂಬ ನಿರ್ಣಯದ ಸಮಯವಿಲ್ಲ. ಇದು ದಿಟ್ಟ ನಿರ್ದಾರದ ಸಮಯ. ನಮಗೆ ಒಂದು ಕೆಲಸವಿದೆ. ಅವರು ಒಟ್ಟಾಗಿ ಬರಬೇಕು ಎಂದು ನಾನು ಬಿಜೆಡಿಗೆ ಮನವಿ ಮಾಡುತ್ತೇನೆ. ನವೀನ್ ಪಟ್ನಾಯಕ್ ಇಲ್ಲಿಯೇ ಇರಬೇಕು, ವೈಎಸ್ಆರ್ ಕಾಂಗ್ರೆಸ್ ಪಕ್ಷ ಕೂಡ  ಎಂದು ಡೆರಿಕ್ ಹೇಳಿದರು.

ಸಾಮಾಜಿಕ ನ್ಯಾಯ ಸಭೆ ಮೂಲಕ ವಿರೋಧ ಪಕ್ಷಗಳನ್ನು ಒಗ್ಗೂಡಿಸಿದ ಎಂಕೆ ಸ್ಟಾಲಿನ್
ಎಂಕೆ ಸ್ಟಾಲಿನ್
Image Credit source: Twitter
Follow us on

ಚೆನ್ನೈ: ತಮಿಳುನಾಡಿನ ಆಡಳಿತಾರೂಢ ಡಿಎಂಕೆ (DMK) ಮುಖ್ಯಸ್ಥ ಎಂಕೆ ಸ್ಟಾಲಿನ್ (MK Stalin)ಸೋಮವಾರ ಕರೆದಿದ್ದ ಸಾಮಾಜಿಕ ನ್ಯಾಯ ಸಭೆಗೆ(Social Justice Meet) ಸೇರಿದ ಬಹುತೇಕ ವಿರೋಧ ಪಕ್ಷದ ನಾಯಕರು ಜಾತಿ ಗಣತಿಯ ಅಗತ್ಯವನ್ನು ಒತ್ತಿ ಹೇಳಿದರು. ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುನ್ನ ಪ್ರತಿಪಕ್ಷಗಳ ಒಗ್ಗಟ್ಟಿಗೆ ಒತ್ತು ನೀಡುವ ಸಂವಾದಕರಾಗಿ ಹೊರಹೊಮ್ಮಿರುವ ತಮಿಳುನಾಡು ಮುಖ್ಯಮಂತ್ರಿ ನಡೆಸಿದ ಎರಡನೇ ಪ್ರತಿಪಕ್ಷ ಸಭೆ ಇದಾಗಿದೆ. ಆದಾಗ್ಯೂ, ರಾಜಕೀಯ ಕೋನವನ್ನು ನಿರಾಕರಿಸಿದ ಡಿಎಂಕೆ ಇದು ಸಾಮಾಜಿಕ ನ್ಯಾಯ ಚಳುವಳಿಯನ್ನು ಮುಂದಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತಿದೆ ಎಂದು ಹೇಳಿದೆ. ಆದರೆ ತೃಣಮೂಲ ಕಾಂಗ್ರೆಸ್‌ನ ಡೆರೆಕ್ ಒ’ಬ್ರೇನ್, ಇದು ರಾಜಕೀಯ ವೇದಿಕೆ ಎಂಬ ಅಂಶದಿಂದ ನಾವು ಹಿಂದೆ ಸರಿಯಬಾರದು ಎಂದು ಹೇಳಿದ್ದಾರೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮತ್ತು ಆಂಧ್ರಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ಇಂತಹ ವೇದಿಕೆಗಳಲ್ಲಿ ಸೇರಲು ಒತ್ತಾಯಿಸಿದರು.

ಎರಡು ಅಥವಾ ಮೂರು ಪಕ್ಷಗಳು ಬಿಜೆಪಿ ವಿರುದ್ಧ ಹೋರಾಡಲು ಬಯಸುವುದಿಲ್ಲ. ಇದು ಅದೋ ಇದೋ ಎಂಬ ನಿರ್ಣಯದ ಸಮಯವಿಲ್ಲ. ಇದು ದಿಟ್ಟ ನಿರ್ದಾರದ ಸಮಯ. ನಮಗೆ ಒಂದು ಕೆಲಸವಿದೆ. ಅವರು ಒಟ್ಟಾಗಿ ಬರಬೇಕು ಎಂದು ನಾನು ಬಿಜೆಡಿಗೆ ಮನವಿ ಮಾಡುತ್ತೇನೆ. ನವೀನ್ ಪಟ್ನಾಯಕ್ ಇಲ್ಲಿಯೇ ಇರಬೇಕು, ವೈಎಸ್ಆರ್ ಕಾಂಗ್ರೆಸ್ ಪಕ್ಷ ಕೂಡ  ಎಂದು ಅವರು ಹೇಳಿದರು.

ಸಾಮಾಜಿಕ ನ್ಯಾಯದ ಎರಡನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್, ಹೇಮಂತ್ ಸೊರೆನ್, ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ ಮತ್ತು ಅಖಿಲೇಶ್ ಯಾದವ್, ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ತೃಣಮೂಲದ ಡೆರೆಕ್ ಒ’ಬ್ರೇನ್, ಎಡಪಕ್ಷದ ಸೀತಾರಾಮ್ ಯೆಚೂರಿ ಮತ್ತು ಡಿ ರಾಜಾ ಭಾಗವಹಿಸಿದ್ದಾರೆ.

ಇತರ ವಿರೋಧ ಪಕ್ಷಗಳಾದ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ, ತೆಲಂಗಾಣದ ಭಾರತ್ ರಾಷ್ಟ್ರ ಸಮಿತಿ, ಶರದ್ ಪವಾರ್ ಅವರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ ಕೂಡ ಇಲ್ಲಿ ಭಾಗಿಯಾಗಿವೆ

ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸಿದ ನಂತರ ಇದೇ ಮೊದಲ ಪ್ರಯತ್ನವಾಗಿದ್ದು, ಇದು ಪ್ರತಿಪಕ್ಷಗಳನ್ನು ಒಟ್ಟುಗೂಡಿಸಿದೆ.ಇತ್ತೀಚಿಗೆ ಡಿಎಂಕೆ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ 70 ನೇ ಹುಟ್ಟುಹಬ್ಬದಂದು ಅನೇಕ ವಿರೋಧ ಪಕ್ಷದ ನಾಯಕರನ್ನು ಒಟ್ಟುಗೂಡಿಸಿ ರ್ಯಾಲಿಯನ್ನು ನಡೆಸಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ