ಬ್ರಿಟಿಷರಿಗೆ ಪತ್ರ ಬರೆಯುವಂತೆ ಸಾವರ್ಕರ್‌ಗೆ ಹೇಳಿದ್ದು ಗಾಂಧೀಜಿ: ದೇವೇಂದ್ರ ಫಡ್ನವಿಸ್
Veer Savarkar Gaurav Yatra: ನೀವು ಇತರ ಕೈದಿಗಳನ್ನು ಬಿಡುಗಡೆ ಮಾಡಿದ್ದೀರಿ, ನನ್ನನ್ನೂ (ಸಾವರ್ಕರ್) ಬಿಡುಗಡೆ ಮಾಡಿ ಎಂದು ಬ್ರಿಟಿಷರಿಗೆ ಹೇಳಬೇಕು ಎಂದು ಗಾಂಧಿ ಸಾವರ್ಕರ್‌ಗೆ ಹೇಳಿದ್ದರು ಎಂದು ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
ವೀರ್ ಸಾವರ್ಕರ್ (Veer Savarkar)ಅವರು ಕ್ಷಮೆಯಾಚಿಸಿ ಬ್ರಿಟಿಷರಿಗೆ ಪತ್ರ ಬರೆದಿದ್ದಾರೆ ಎಂದು ನೀವು ಹೇಳಿದ್ದೀರಿ. ಇಲ್ಲ, ಅದು ತಪ್ಪು. ಬ್ರಿಟಿಷರು ತನ್ನನ್ನು ಬಿಡುಗಡೆ ಮಾಡುವುದಿಲ್ಲ ಎಂದು ತಿಳಿದಿತ್ತು. ಹಾಗಾಗಿ ಸಾವರ್ಕರ್ ಪತ್ರ ಬರೆದರು. ನನ್ನನ್ನು (ಸಾವರ್ಕರ್) ಬಿಡುಗಡೆ ಮಾಡಬೇಡಿ. ಆದರೆ ನಿಮ್ಮ (ಬ್ರಿಟಿಷರ) ವಿರುದ್ಧ ಏನೂ ಮಾಡದ ಇತರ ಕೈದಿಗಳನ್ನು ಬಿಡುಗಡೆ ಮಾಡಿ ಎಂದು ಅವರು ಬರೆದಿದ್ದರು ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Devendra Fadnavis) ಹೇಳಿದ್ದಾರೆ. ಸೋಮವಾರ ಮುಂಬೈನಲ್ಲಿ ನಡೆದ ‘ವೀರ್ ಸಾವರ್ಕರ್ ಗೌರವ್ ಯಾತ್ರೆ’ಯಲ್ಲಿ (Veer Savarkar Gaurav Yatra) ಮಾತನಾಡುತ್ತಿದ್ದರವರು.
ಸಾವರ್ಕರ್ ಜತೆ ಹಲವು ವರ್ಷಗಳಿಂದ ಜೈಲಿನಲ್ಲಿದ್ದ ಅವರ ಸಂಬಂಧಿಕರಿಗೆ ಮಹಾತ್ಮ ಗಾಂಧಿಯವರು ಪತ್ರಗಳನ್ನು ಬರೆದಿದ್ದರು. ಸಾವರ್ಕರ್ ಜತೆಗಿದ್ದ ಇತರ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು. ನಂತರ ಗಾಂಧೀಜಿ ನೀವು ಅವರನ್ನು ಬಿಡುಗಡೆ ಮಾಡಿದ್ದೀರಿ, ನನ್ನನ್ನೂ (ಸಾವರ್ಕರ್) ಬಿಡುಗಡೆ ಮಾಡಿ ಎಂದು ಬ್ರಿಟಿಷರಿಗೆ ಹೇಳಬೇಕು ಎಂದು ಸಾವರ್ಕರ್‌ಗೆ ಹೇಳಿದ್ದರು ಎಂದು ಫಡ್ನವಿಸ್ ಹೇಳಿದ್ದಾರೆ.
Mahatma Gandhi wrote letters to Savarkar’s relatives, who were also in jail with him (Savarkar) for many years, and said – other prisoners were released. He then told Savarkar that he should also tell the British that you released them, release me (Savarkar) too: Maharashtra… pic.twitter.com/di991dGeze
— ANI (@ANI) April 3, 2023
ಚಿನ್ನದ ಚಮಚ ಹೊಂದಿರುವವರು ವೀರ್ ಸಾವರ್ಕರ್ ಬಗ್ಗೆ ಮಾತನಾಡುತ್ತಿದ್ದಾರೆ. ನಿಮ್ಮ ಪಕ್ಷದ ನಾಯಕರು ಕೂಡಾ ವೀರ್ ಸಾವರ್ಕರ್ ಅವರನ್ನು ಗೌರವಿಸುತ್ತಿದ್ದರು. ಇಂದಿರಾಗಾಂಧಿ, ಯಶವಂತರಾವ್ ಚವಾಣ್ – ಅವರು ಸಾವರ್ಕರ್ ಅವರನ್ನು ಗೌರವಿಸುತ್ತಿದ್ದರು ಮತ್ತು ನೀವು ಅವರನ್ನು ಪ್ರಶ್ನಿಸುತ್ತಿದ್ದೀರಿ. ಯಾರು ನೀವು? ಎಂದು ದೇವೇಂದ್ರ ಫಡ್ನವೀಸ್ ಕೇಳಿದ್ದಾರೆ.
ನಾವು ಸ್ವಾತಂತ್ರ್ಯ ಭಿಕ್ಷೆ ಬೇಡಲು ಬಯಸಲಿಲ್ಲ. ಇದು ಸಶಸ್ತ್ರ ಕ್ರಾಂತಿಗೆ ಕಾರಣವಾಯಿತು. ವೀರ್ ಸಾವರ್ಕರ್ ಅವರು 1857 ರ ಸ್ವಾತಂತ್ರ್ಯ ಹೋರಾಟದ ಕುರಿತು ಪುಸ್ತಕವನ್ನು ಬರೆದರು. ಅವರು ಲಕ್ಷಾಂತರ ಕ್ರಾಂತಿಕಾರಿಗಳಿಗೆ ಸ್ಫೂರ್ತಿ ನೀಡಿದರು. ರಾಹುಲ್ ಗಾಂಧಿಯವರೇ ನೀವು ಹೇಳುತ್ತೀರಿ, ನಾನು ಸಾವರ್ಕರ್ ಅಲ್ಲ. ಆದರೆ, ನೀವು ಸಾವರ್ಕರ್ ಅಲ್ಲ. ನೀವು ಗಾಂಧಿಯೂ ಅಲ್ಲ. ನಿಮಗೆ ಸಾವರ್ಕರ್ ಆಗುವ ಅವಕಾಶವಿಲ್ಲ.
ಇದನ್ನೂ ಓದಿ: Rahul Gandhi: ಪ್ರಜಾಪ್ರಭುತ್ವವನ್ನು ಉಳಿಸಲು ಮಿತ್ರಕಾಲದ ವಿರುದ್ಧ ಹೋರಾಟ ಇದು: ರಾಹುಲ್ ಗಾಂಧಿ
ಬಂಗಾಳದ ಸಂಸದರೊಬ್ಬರು ಸಂಸತ್ತಿನಲ್ಲಿ ವೀರ್ ಸಾವರ್ಕರ್ ಅವರನ್ನು ಗೌರವಿಸುವ ನಿರ್ಣಯವನ್ನು ಮಂಡಿಸಿದಾಗ ಅದನ್ನು ಬೆಂಬಲಿಸಿದವರು ನಿಮ್ಮ ಅಜ್ಜ ಫಿರೋಜ್ ಗಾಂಧಿ ಎಂದು ಫಡ್ನವಿಸ್ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:46 pm, Mon, 3 April 23