ಅಮೃತಾ ಫಡ್ನವಿಸ್ಗೆ ಲಂಚ, ಬೆದರಿಕೆ ಪ್ರಕರಣ: ಡಿಸೈನರ್ ಅನಿಕ್ಷಾ ತಂದೆ ಅನಿಲ್ ಜೈಸಿಂಘಾನಿ ಬಂಧನ
ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ಗೆ ಲಂಚ ನೀಡಲು ಬಂದ ಆರೋಪದ ಮೇರೆಗೆ ಡಿಸೈನರ್ ಅನಿಕ್ಷಾ ಸಿಂಘಾನಿ ತಂದೆ ಅನಿಲ್ ಜೈಸಿಂಘಾನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ಗೆ ಲಂಚ ನೀಡಲು ಬಂದ ಆರೋಪದ ಮೇರೆಗೆ ಡಿಸೈನರ್ ಅನಿಕ್ಷಾ ಸಿಂಘಾನಿ ತಂದೆ ಅನಿಲ್ ಜೈಸಿಂಘಾನಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಮೃತಾ ಫಡ್ನವಿಸ್ಗೆ ಡಿಸೈನ್ ಅನಿಕ್ಷಾ ಹಾಗೂ ಅವರ ತಂದೆ ಅನಿಲ್ ಜೈಸಿಂಘಾನಿ ಬೆದರಿಕೆ ಹಾಗೂ ಬ್ಲ್ಯಾಕ್ಮೇಲ್ ಮಾಡಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ.
ಡಿಸೈನರ್ ಅನಿಕ್ಷಾ ಜೈಸಿಂಘಾನಿ ಮತ್ತು ಆಕೆಯ ತಂದೆ ಅನಿಲ್ ವಿರುದ್ಧ ಅಮೃತಾ ಫಡ್ನವಿಸ್ ಅವರು ಕಳೆದ ತಿಂಗಳು ಮಲಬಾರ್ ಹಿಲ್ ಸ್ಟೇಷನ್ನಲ್ಲಿ ಎಫ್ಐಆರ್ ದಾಖಲಿಸಿದ್ದರು. ತನ್ನ ತಂದೆಯೊಂದಿಗೆ ಸೇರಿಕೊಂಡು ತನಗೆ ಬೆದರಿಕೆ ಹಾಕಿದ್ದಾರೆ, ಹಾಗೂ ನನ್ನ ವಿರುದ್ಧ ಸಂಚು ರೂಪಿಸಿದ್ದಾರೆ ಎಂದು ಅಮೃತಾ ಆರೋಪಿಸಿದ್ದರು.ದೇವೇಂದ್ರ ಫಡ್ನವಿಸ್ ಕೂಡ ಈ ಕುರಿತು ಮಾಹಿತಿ ನೀಡಿದ್ದಾರೆ.
ಅನಿಕ್ಷಾ ಅವರು ತನ್ನ ತಂದೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಸಹಾಯ ಮಾಡುವಂತೆ 1 ಕೋಟಿ ರೂ ಆಮಿಷ ಒಡ್ಡಿದ್ದರು. ಬಳಿಕ ಒಂದೊಮ್ಮೆ ಸಹಾಯ ಮಾಡದಿದ್ದರೆ ದೇವೇಂದ್ರ ಫಡ್ನವಿಸ್ ಅವರನ್ನು ಈ ವಿಚಾರದಲ್ಲಿ ಸಿಲುಕಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಹಲವು ನಕಲಿ ಆಡಿಯೋ ಹಾಗೂ ವಿಡಿಯೋ ರೆಕಾರ್ಡಿಂಗ್ ಕಳುಹಿಸಿ ಬ್ಲ್ಯಾಕ್ಮೇಲ್ ಮಾಡಲು ಯತ್ನಿಸಿದ್ದರು ಎಂದು ಹೇಳಲಾಗಿದೆ.
ಮತ್ತಷ್ಟು ಓದಿ: Amruta Fadnavis: ಡಿಸೈನರ್ ವಿರುದ್ಧ ಲಂಚ, ಬೆದರಿಕೆ ಪ್ರಕರಣ ದಾಖಲಿಸಿದ ದೇವೇಂದ್ರ ಫಡ್ನವಿಸ್ ಪತ್ನಿ ಅಮೃತಾ
ಅನಿಲ್ ಜೈಸಿಂಘಾನಿ ಉಲ್ಲಾಸನಗರ ನಿವಾಸಿ, ಇವರ ವಿರುದ್ಧ 5 ರಾಜ್ಯಗಳಲ್ಲಿ 17 ಪ್ರಕರಣಗಳು ದಾಖಲಾಗಿವೆ, ಅನಿಲ್ ಬೆಟ್ಟಿಂಗ್ ಪ್ರಕರಣದಲ್ಲಿ ಮೂರು ಬಾರಿ ಬಂಧನಕ್ಕೊಳಗಾಗಿದ್ದರು. ಮೇ 11 ರಂದು 2019ರಲ್ಲಿ ಗೋವಾ ಪೊಲೀಸರು ಅನಿಲ್ ವಿರುದ್ಧ ಲುಕ್ಔಟ್ ನೋಟಿಸ್ ಜಾರಿ ಮಾಡಿದ್ದರು.
2015ರಲ್ಲಿ ಗುಜರಾತ್ ಇಡಿ ಜೈಸಿಂಘಾನಿ ಮನೆ ಮೇಲೆ ಎರಡು ಭಾರಿ ದಾಳಿ ನಡೆಸಿತ್ತು. ಮುಂಬೈ ಪೊಲೀಸರು ಎರಡು ಬಾರಿ ಫೋರ್ಜರಿ ಪ್ರಕರಣ ದಾಖಲಿಸಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ