Live-in relationships: ಲೀವ್ ಇನ್ ರಿಲೇಷನ್‌ಶಿಪ್ ನೋಂದಣಿ ಕೋರಿ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಸುಪ್ರೀಂ
ಲೀವ್ ಇನ್ ರಿಲೇಷನ್‌ಶಿಪ್ ಅರ್ಜಿ ಸಂಬಂಧಿಸಿದಂತೆ ಕೇಂದ್ರ ಈ ಸಂಬಂಧವನ್ನು ಅಧಿಕೃತವಾಗಿ ನೋಂದಾಯಿಸಲು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ ಮತ್ತು ಇದನ್ನು ಅವೈಜ್ಞಾನಿಕ ಕಲ್ಪನೆ ಎಂದಿದೆ.
ದೆಹಲಿ: ಲೀವ್ ಇನ್ ರಿಲೇಷನ್‌ಶಿಪ್ ಅರ್ಜಿ (Live-in relationships) ಸಂಬಂಧಿಸಿದಂತೆ ಕೇಂದ್ರ ಈ ಸಂಬಂಧವನ್ನು ಅಧಿಕೃತವಾಗಿ ನೋಂದಾಯಿಸಲು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ ಮತ್ತು ಇದನ್ನು ಅವೈಜ್ಞಾನಿಕ ಕಲ್ಪನೆ ಎಂದಿದೆ. ಲೀವ್ ಇನ್ ರಿಲೇಷನ್‌ಶಿಪ್ ನೋಂದಣಿಗೂ ಕೇಂದ್ರಕ್ಕೂ ಏನು ಸಂಬಂಧ? ಇದು ಯಾವ ರೀತಿಯ ಕಲ್ಪನೆ? ಈ ರೀತಿಯ ಅರ್ಜಿಗಳನ್ನು ಸಲ್ಲಿಸುವ ಅರ್ಜಿದಾರರ ಮೇಲೆ ಈ ನ್ಯಾಯಾಲಯವು ದಂಡವನ್ನು ವಿಧಿಸಬೇಕು ಎಂದು ಈ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದೂ ಪೀಠವು ಹೇಳಿದೆ. ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಜೆ.ಬಿ.ಪರ್ದಿವಾಲಾ ಅವರನ್ನು ಒಳಗೊಂಡ ಪೀಠವು ವಿಚಾರಣೆಯನ್ನು ನಡೆಸಿತ್ತು.
ಅತ್ಯಾಚಾರ ಮತ್ತು ಕೊಲೆಯಂತಹ ಅಪರಾಧಗಳ ಹೆಚ್ಚಳವನ್ನು ಉಲ್ಲೇಖಿಸಿ, ವಕೀಲ ಮಮತಾ ರಾಣಿ ಅವರು ಲೀವ್ ಇನ್ ರಿಲೇಷನ್‌ಶಿಪ್ ನೋಂದಣಿಗೆ ನಿಯಮಗಳನ್ನು ರೂಪಿಸಲು ಕೇಂದ್ರಕ್ಕೆ ನಿರ್ದೇಶನವನ್ನು ಕೋರಿ ಮನವಿ ಸಲ್ಲಿಸಿದರು. ಅವರು ಇತ್ತೇಚೆಗೆ ಲೀವ್ ಇನ್ ರಿಲೇಷನ್ಶಿಪ್ನಲ್ಲಿದ್ದ ಅಫ್ತಾಬ್ ಅಮೀನ್ ಪೂನಾವಾಲಾನಿಂದ ಕೊಲ್ಲಲ್ಪಟ್ಟ ಶ್ರದ್ಧಾ ವಾಕರ್ ಕೊಲೆ ಪ್ರಕರಣದ ಬಗ್ಗೆ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಲಿವ್ ಇನ್ ರಿಲೇಶನ್ಶಿಪ್ನ್ನು ಸಾಮಾಜಿಕ ಮತ್ತು ನೈತಿಕವಾಗಿ ಒಪ್ಪಲು ಸಾಧ್ಯವಿಲ್ಲ; ಹೈಕೋರ್ಟ್
ಈ ಬಗ್ಗೆ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ, ಅರ್ಜಿದಾರರಾದ ವಕೀಲೆ ಮಮತಾ ರಾಣಿ ಅವರನ್ನು ಪ್ರಶ್ನಿಸಿದ್ದಾರೆ. ನೀವು ಇಂತಹ ಸಂಬಂಧಗಳಿಗೆ ರಕ್ಷಣೆ ನೀಡಬೇಕು ಎಂದು ಬಯಸುತ್ತೀರಾ ಅಥವಾ ಅವರು ಲಿವ್ಲೀವ್ ಇನ್ ರಿಲೇಷನ್‌ಶಿಪ್‌ನಲ್ಲಿ ಬರಬಾರದು ಎಂದು ಬಯಸುತ್ತಾರೆ. ಅವರ ಸಾಮಾಜಿಕ ಭದ್ರತೆಯನ್ನು ಹೆಚ್ಚಿಸಲು ಅರ್ಜಿದಾರರು ಈ ಸಂಬಂಧವನ್ನು ನೋಂದಾಯಿಸಬೇಕೆಂದು ಬಯಸುತ್ತಾರೆ ಎಂದು ವಕೀಲರು ಉತ್ತರಿಸಿದರು.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ