ರಸ್ತೆಯಲ್ಲಿ ಅಪಘಾತವಾಗಿ ಗಾಯಗೊಂಡು ಬಿದ್ದಿದ್ದ ಹಿರಿಯ ನಾಗರಿಕನಿಗೆ ನೆರವು ನೀಡಲು ಮುಂದಾದವರ ಮೇಲೆ ಗುಂಪೊಂದು ಹಲ್ಲೆ ಮಾಡಿದ ಪರಿಣಾಮ ಒಬ್ಬ ಮೃತಪಟ್ಟ ದುರ್ಘಟನೆ ಅಸ್ಸಾಂನ ಜೊಹ್ರತ್ನಲ್ಲಿ ನಡೆದಿದೆ. ಹೀಗೆ ಮೃತಪಟ್ಟವನು ಆಲ್ ಅಸ್ಸಾಂ ವಿದ್ಯಾರ್ಥಿ ಒಕ್ಕೂಟದ ನಾಯಕ (AASU). ಈ ಗುಂಪು ಹಲ್ಲೆಯಲ್ಲಿ ಒಬ್ಬ ಪತ್ರಕರ್ತ ಸೇರಿ ಇಬ್ಬರು ಗಾಯಗೊಂಡಿದ್ದಾರೆ.
ಮೃತ ಯವಕನನ್ನು ಅನಿಮೇಶ್ ಭೂಯಾನ್ (24) ಎಂದು ಗುರುತಿಸಲಾಗಿದೆ. ನಿರ್ಮಲ್ ಚರಿಯಾಲಿ ಎಂಬಲ್ಲಿ ಒಂದು ರಸ್ತೆ ಅಪಘಾತವಾಗಿತ್ತು. ಅದರಲ್ಲಿ ಹಿರಿಯ ನಾಗರಿಕರೊಬ್ಬರಿಗೆ ಗಾಯವಾಗಿತ್ತು. ಗಾಯಗೊಂಡು ಬಿದ್ದಿದ್ದ ಅವರನ್ನು ರಕ್ಷಿಸಲು ಮುಂದಾಗ ಅನಿಮೇಶ್ ಭೂಯಾನ್ ಮತ್ತು ಇತರ ಇಬ್ಬರ ಮೇಲೆ ಅಲ್ಲಿಯೇ ಇದ್ದ ಗುಂಪೊಂದು ದಾಳಿ ನಡೆಸಿದೆ.
ಅನಿಮೇಶ್ ಮತ್ತು ಇತರರ ಮೇಲೆ ಹಲ್ಲೆ ನಡೆಸಿದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಪೊಲೀಸರ ಎದುರೇ ಈ ಹೊಡೆದಾಟ ನಡೆದಿದೆ ಎಂದೂ ಹೇಳಲಾಗಿದೆ. ಇನ್ನು ಗಾಯಗೊಂಡ ಮೂವರನ್ನೂ ಪೊಲೀಸರು ಜೊಹ್ರತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದ್ದರು. ಇವರಲ್ಲಿ ಅನಿಮೇಶ್ ಸ್ಥಿತಿ ಗಂಭೀರವಾಗಿದ್ದು, ಹೋಗುವಷ್ಟರಲ್ಲೇ ಮೃತಪಟ್ಟಿದ್ದರು.
ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ಇದೀಗ 10 ಮಂದಿಯನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಯುತ್ತಿದೆ. ಇನ್ನುಳಿದವರನ್ನು ಪತ್ತೆ ಮಾಡಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆರೋಪಿಗಳನ್ನು ಇನ್ನು 24 ಗಂಟೆಯಲ್ಲಿ ಬಂಧಿಸುವಂತೆ ಜೊಹ್ರತ್ ಜಿಲ್ಲಾ ಎಎಎಸ್ಯು ಆಗ್ರಹ ಮಾಡಿದೆ.
A leader of #AASU killed in brutal attack by some unruly people in Assam’s Jorhat town today. Two others including a journalist were also injured in the mob attack following an alleged accident. #Assam #Jorhat pic.twitter.com/j697R3UKXn
— Hemanta Kumar Nath (@hemantakrnath) November 29, 2021
ಇದನ್ನೂ ಓದಿ: ಚೆನ್ನಾಗಿ ನಿದ್ರೆ ಮಾಡಬೇಕಾದರೆ, ಹಾಸಿಗೆಗೆ ತೆರಳುವ 4-5 ಗಂಟೆ ಮೊದಲು ರಾತ್ರಿಯೂಟ ಸೇವಿಸಬೇಕು: ಡಾ ಸೌಜನ್ಯ ವಶಿಷ್ಠ